Kerala Controversy: ವಿವಾದದ ಸುಳಿಯಲ್ಲಿ ದಿ ಕೇರಳ ಸ್ಟೋರಿ: ಕೇರಳವನ್ನು ‘ಉಗ್ರರ ಸ್ವರ್ಗ ಎಂಬಂತೆ ಬಿಂಬಿಸಿದ್ದ ಚಿತ್ರತಂಡದ ವಿರುದ್ಧ ಕೇಸ್

ಕೇರಳ: Kerala Controversy: ಧರ್ಮವನ್ನು ಕೇಂದ್ರೀಕರಿಸಿ ಮಾಡಲಾದ ಸಿನಿಮಾಗಳಿಗೆ ವಿವಾದಗಳು ಸುತ್ತಿಕೊಳ್ಳುವುದು ಕಾಮನ್ ಆಗಿವೆ. ಇದೀಗ ದಿ ಕೇರಳ ಸ್ಟೋರಿ (The Kerala Story) ಎಂಬ ಸಿನಿಮಾಗೂ ವಿವಾದ ಸುತ್ತಿಕೊಂಡಿದೆ.

ಇದನ್ನೂ ಓದಿ: Bengaluru Airport : ಮನಸೆಳೆಯುವ ಟರ್ಮಿನಲ್-2 ಗೆ ಮೋದಿ ಚಾಲನೆ: ಗಮನ ಸೆಳೆಯುತ್ತಿದೆ ಕೆಂಪೇಗೌಡ ಏರ್ಪೋರ್ಟ್

ಕೆಲ ದಿನಗಳ ಹಿಂದೆ ದಿ ಕೇರಳ ಸ್ಟೋರಿ (The Kerala Story) ಎಂಬ ಹಿಂದಿ ಸಿನಿಮಾದ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ಅದರಲ್ಲಿ ಕೇರಳವನ್ನು ಉಗ್ರರ ಸ್ವರ್ಗ ಎಂಬಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಒಂದು ದಶಕದಲ್ಲಿ ಕೇರಳದ 32 ಸಾವಿರ ಹೆಣ್ಮಕ್ಕಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಅವರನ್ನು ಐಸಿಸ್ ಪ್ರಭಾವ ಇರುವ ಅಪಘಾನಿಸ್ತಾನ ಹಾಗೂ ಸಿರಿಯಾ ದೇಶಗಳಿಗೆ ರವಾನಿಸಿ, ಉಗ್ರರನ್ನಾಗಿ ಮಾಡಲಾಗುತ್ತಿದೆ ಎಂದು ಟೀಸರ್ ನಲ್ಲಿ ಹೇಳಲಾಗಿದೆ. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಕೇರಳ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತೆ ಆದೇಶಿಸಿದ್ದಾರೆ. ಅದಾ ಶರ್ಮಾ ನಟಿಸಿರುವ ಈ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ವಿಪುಲ್ ಅಮೃತ್ ಪಾಲ್ ಶಾ ನಿರ್ಮಾಪಕರಾಗಿದ್ದಾರೆ.

ವಿವಾದಿತ ಟೀಸರ್ ನಲ್ಲಿ ಹೇಳಿದ್ದೇನು..?
‘ನನ್ನ ಹೆಸರು ಶಾಲಿನಿ ಉನ್ನಿಕೃಷ್ಣನ್ ಆಗಿತ್ತು. ನರ್ಸ್ ಆಗಿ ಜನರ ಸೇವೆ ಮಾಡಬೇಕು ಎಂಬುವುದು ನನ್ನ ಬಯಕೆ ಆಗಿತ್ತು. ಈಗ ನಾನು ಫಾತಿಮಾ ಬಾ ಎಂಬ ಹೆಸರಿನ ಐಸಿಸ್ ಭಯೋತ್ಪಾದಕಿ ಆಗಿದ್ದೇನೆ. ಅಪಘಾನಿಸ್ತಾನದ ಜೈಲಿನಲ್ಲಿದ್ದೇನೆ. ನಾನು ಒಬ್ಬಳೇ ಅಲ್ಲ. ನನ್ನಂತಹ 32 ಸಾವಿರ ಹುಡುಗಿಯರು ಮತಾಂತರಗೊಂಡು ಸಿರಿಯಾ ಮತ್ತು ಯೆಮನ್ ಮರುಭೂಮಿಯಲ್ಲಿ ಸತ್ತಿದ್ದಾರೆ. ಕೇರಳದಲ್ಲಿ ಒಬ್ಬ ಸರಳ ಹುಡುಗಿಯನ್ನು ಅಪಾಯಕಾರಿ ಟೆರರಿಸ್ಟ್ ಆಗಿ ಮಾಡುವ ಭಯಾನಕ ಆಟ ನಡೆದಿದೆ. ಅದು ಕೂಡಾ ಬಹಿರಂಗವಾಗಿ. ಇದನ್ನು ಯಾರು ಕೂಡಾ ತಡೆಯಲ್ಲವೇ..? ಇದು ನನ್ನ ಕಥೆ. 32 ಸಾವಿರ ಹುಡುಗಿಯರ ಕಥೆ. ಇದು ಕೇರಳದ ಕಥೆ’.

https://www.youtube.com/watch?v=udoCRDjqxv8

ಕಳೆದೆರಡು ದಿನಗಳ ಹಿಂದೆ ತಮಿಳುನಾಡು ಮೂಲದ ಪತ್ರಕರ್ತ ಬಿ.ಆರ್.ಅರವಿಂದಕ್ಷಣ್ ಅವರು ಕೇಂದ್ರ ಸಿನಿಮಾ ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಅವರಿಗೆ ಪತ್ರ ಬರೆದು, ಚಿತ್ರದ ತಯಾರಕರು ತಾವು ಹೇಳಿಕೊಂಡಿರುವುದಕ್ಕೆ (ಕೇರಳ ಉಗ್ರರ ಸ್ವರ್ಗ) ಪೂರಕ ಸಾಕ್ಷ್ಯಗಳನ್ನು ಒದಗಿಸುವ ತನಕ ನಿಷೇಧ ಹೇರಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ಇದೇ ಪತ್ರದ ಪ್ರತಿಗಳನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಕಳುಹಿಸಿದ್ದರು. ಸಿಎಂ ಅವರು ಈ ಪ್ರತಿಯನ್ನು ಡಿಜಿಪಿಗೆ ಕಳಿಸಿದ್ದರು. ಈ ದೂರಿನ ಹಿನ್ನೆಲೆ ಕೇರಳ ಪೊಲೀಸರು ಚಿತ್ರದ ಟೀಸರ್ ವೀಕ್ಷಿಸಿ ಪರಿಶೀಲಿಸಿದ್ದಾರೆ. ಸಮುದಾಯಗಳ ನಡುವೆ ದ್ವೇಷ ಭಾವನೆ ಬಿತ್ತುವ ಉದ್ದೇಶ ಸ್ಪಷ್ಟವಾಗಿದೆ. ಚಿತ್ರಗಳಲ್ಲಿ ಮಾಡಲಾಗಿರುವ ಆರೋಪಗಳಿಗೆ ಯಾವುದೇ ಪುರಾವೆಗಳೂ ಇಲ್ಲದಿರುವುದು ಖಾತ್ರಿ ಆಗಿದೆ. ಹೀಗಾಗಿ ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸಿಕೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Aruna Miller : ಮೇರಿಲ್ಯಾಂಡ್‌ನ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆ ಅಲಂಕರಿಸಿದ ಅರುಣಾ ಮಿಲ್ಲರ್‌ ಯಾರು?

ಅಂದಹಾಗೆ, ಈ ಸಿನಿಮಾವು ಉತ್ತರ ಕೇರಳದಿಂದ ನಾಪತ್ತೆಯಾದ ನಾಲ್ವರು ಮಹಿಳೆಯರನ್ನು ಆಧರಿಸಿದೆ ಎನ್ನಲಾಗುತ್ತಿದೆ. ತಮ್ಮ ತಮ್ಮ ಪತಿಯ ಸಾವಿನ ಬಳಿಕ ಅವರು ಅಪಘಾನಿಸ್ತಾನದ ಜೈಲಿನಲ್ಲಿರುವುದು ಪತ್ತೆಹಚ್ಚಲಾಗಿತ್ತು. ಆದರೆ 2 ವರ್ಷಗಳ ಹಿಂದೆ ಅವರನ್ನು ಮತ್ತೆ ದೇಶಕ್ಕೆ ವಾಪಸ್ ಕರೆತರಲು ವಿದೇಶಾಂಗ ಸಚಿವಾಲಯವು ನಿರಾಕರಿಸಿತ್ತು.

Kerala Controversy: FIR against makers of The Kerala story for portraying the state as a terrorist heaven

Comments are closed.