Juice Good For Health : ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ

(Juice Good For Health)ದೇಹವನ್ನು ಡಿ ಹೈಡ್ರೆಟ್‌ ಆಗದಂತೆ ಕಾಪಾಡಿಕೊಳ್ಳಲು ನೀರು ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಕೆಲವವರು ಆಗಾಗ ಜ್ಯೂಸ್‌ ಕುಡಿಯುತ್ತಾರೆ.ಹಣ್ಣಿನ ಜೊತೆಗೆ ತರಕಾರಿ ಮತ್ತು ಸೊಪ್ಪನ್ನು ಸೇರಿಸಿ ಜ್ಯೂಸ್‌ ಮಾಡುವುದರಿಂದ ಆರೋಗ್ಯವನ್ನು ಇನ್ನಷ್ಟು ಉತ್ತಮವಾಗಿ ಇಟ್ಟುಕೊಳ್ಳಬಹುದು. ಈ ಜ್ಯೂಸ್‌ ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Juice Good For Health)ಬೇಕಾಗುವ ಸಾಮಾಗ್ರಿಗಳು:

  • ಸೌತೆಕಾಯಿ
  • ಸೇಬುಹಣ್ಣು
  • ಪುದೀನ ಎಲೆಗಳು
  • ಪಾಲಕ ಸೊಪ್ಪು

ಮಾಡುವ ವಿಧಾನ:
ಮಿಕ್ಸಿ ಜಾರಿಯಲ್ಲಿ ಕಟ್‌ ಮಾಡಿಕೊಂಡ ಸೌತೆಕಾಯಿ, ಸೇಬುಹಣ್ಣು ಮತ್ತು ಪುದೀನ ಎಲೆಗಳು ,ಪಾಲಕ ಸೊಪ್ಪನ್ನು ಹಾಕಿ ರುಬ್ಬಿಕೊಂಡು ಪ್ರತಿನಿತ್ಯ ಕುಡಿದರೆ ದೇಹದಲ್ಲಿರುವ ಹಲವು ಆರೋಗ್ಯದ ಸಮಸ್ಯೆಯನ್ನು ಗುಣಪಡಿಸುತ್ತದೆ.

ಸೌತೆಕಾಯಿ
ಸೌತೆಕಾಯಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಚರ್ಮ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚಿದ ಸೌತೆಕಾಯಿಯನ್ನು ಅಥವಾ ಅದನ್ನು ದ್ರವ ರೂಪದಲ್ಲಿ ಕುಡಿಯುವುದರಿಂದ ದೇಹಕ್ಕೆ ಉತ್ತಮ.

ಸೇಬುಹಣ್ಣು
ಸೇಬುಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್‌ ಮತ್ತು ಸಕ್ಕರೆಕಾಯಿಲೆ ಬರದಂತೆ ತಡೆಯುತ್ತದೆ. ಹಾಗಾಗಿ ಪ್ರತಿನಿತ್ಯ ಸೇಬುಹಣ್ಣು ತಿನ್ನುವುದರಿಂದ ಅಥವ ಇದರ ಜ್ಯೂಸ್‌ ಮಾಡಿಕೊಂಡು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವುದಕ್ಕೆ ಸಹಕಾರಿಯಾಗಿದೆ.

ಪಾಲಕ ಸೊಪ್ಪು
ಪಾಲಕ ಸೊಪ್ಪುಗಳನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೂಳೆಗಳು ಕೂಡ ಉತ್ತಮವಾಗಿ ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:Healthy Weightloss Tips : ದೇಹದ ಕೊಬ್ಬನ್ನು ಕರಗಿಸಲು ಬಳಸಿ ಈ ಮ್ಯಾಜಿಕಲ್‌ ಡ್ರಿಂಕ್

ಇದನ್ನೂ ಓದಿ:Home Remedy for Cold Sore Throat : ಉರಿಶೀತ, ಗಂಟಲು ಕೆರೆತಕ್ಕೆ ಬಳಸಿ ಮೆಣಸಿನ ಗುಳಿಗೆ

ಪುದೀನ ಎಲೆಗಳು
ಪುದೀನ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯಾರಿಗಾದರು ಅಲರ್ಜಿ ಸಮಸ್ಯೆ ಇದ್ದರೆ ಪುದೀನ ಎಲೆಗಳನ್ನು ಯಾವುದಾದರೂ ರೂಪದಲ್ಲಿ ಸೇವನೆ ಮಾಡುವುದರಿಂದ ಅಲರ್ಜಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

Drinking this juice on an empty stomach is good for health

Comments are closed.