KGF 2 Collection: ಭರ್ಜರಿ ಕಲೆಕ್ಷನ್! ಬಾಹುಬಲಿ-2 ಅನ್ನು ಹಿಂದಿಕ್ಕಿದ ಕೆಜಿಎಫ್‌-2

ನಟ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಕೆಜಿಎಫ್-2 ಸಿನಿಮಾ ಬಿಡುಗಡೆ ಮೊದಲೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಈ ಸಿನಿಮಾ ಬಿಡುಗಡೆ ಮೊದಲೇ ಕನಿಷ್ಠ 800 ಕೋಟಿಯನ್ನೂ, ಗರಿಷ್ಠ 1,200 ಕೋಟಿ ಗಳಿಸುತ್ತದೆ (KGF 2 Collection) ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಮಾಡಿದ್ದರು. ಇದಕ್ಕೆ ಪೂರಕವಾಗಿ, ದಕ್ಷಿಣ ಭಾರತದಲ್ಲಿ ಕೇವಲ 12 ಗಂಟೆಯಲ್ಲಿ 15 ಕೋಟಿ ಮೊತ್ತದಷ್ಟು ಮುಂಗಡ ಟಿಕೆಟ್ ಬುಕ್ ಆದವು. ವಿದೇಶದಲ್ಲಿ 7 ರಿಂದ 8 ಕೋಟಿ ಬ್ಯುಸಿನೆಸ್ ಮಾಡುತ್ತದೆ ಅನ್ನೋದು ಸುದ್ದಿ ಎದ್ದು ಬಂದವು. ಕೆಜಿಎಫ್ ಸ್ಯಾಟಲೈಟ್, ಡಿಜಿಟಲ್ ರೈಟ್ಸ್ ಎಲ್ಲಾ ಸೇರಿ ಕನಿಷ್ಠ 80 ಕೋಟಿ ಗ್ಯಾರಂಟಿ ಅನ್ನೋ ಲೆಕ್ಕಾಚಾರವೇ ಸೇರಿಕೊಂಡವು.

ಇವೆಲ್ಲ ನಿಜವೇ ಅಂದಾಗ ಕೆಜಿಎಫ್ ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರ್, ನಮಗೆ ಇನ್ನೂ ದುಡ್ಡು ಬಂದಿಲ್ಲ. ಎಲ್ಲ ಲೆಕ್ಕಾಚಾರ ಊಹೆ ಅಷ್ಟೇ ಎಂದು ಹೇಳಿಕೆ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದರು. ಆದರೆ, ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಮೂರು ದಿನ ಕಳೆದ ನಂತರ ವಿಜಯ್ ಮೊದಲ ದಿನದ ಕಲೆಕ್ಷನ್ ಎಷ್ಟು ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : KGF Chapter 2 Release : ವಿಶ್ವದಾದ್ಯಂತ ರಾಕಿ ಬಾಯ್‌ ಆರ್ಭಟ : ಕೆಜಿಎಫ್‌ 2 ಸಿನಿಮಾ ನೋಡಿ ಫ್ಯಾನ್ಸ್‌ ಪುಲ್‌ ಫಿದಾ

ಇಡೀ ದೇಶದಲ್ಲಿ ಕೆಜಿಎಫ್-2 ಸಿನಿಮಾದ ಮೊದಲ ದಿನದ ಗಳಿಕೆ 134.5 ಕೋಟಿ ರೂಪಾಯಿ ಎಂದು ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್ ಹೇಳಿಕೆ ನೀಡಿದೆ. ಈ 134.5 ಕೋಟಿ ಗಳಿಕೆ ಕೇವಲ ಐದು ಭಾಷಾ ಪ್ರದೇಶಗಳು ಅಂದರೆ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಸಿನಿಮಾ ರಂಗದಲ್ಲಿ ಆದ ಕಲೆಕ್ಷನ್. ಹಿಂದಿ ಅವತರಣಿಕೆ ಒಂದರಲ್ಲಿ 63.66 ಕೋಟಿ ಸಂಗ್ರಹವಾಗಿದೆ. ಈ ಹಿಂದೆ ದಕ್ಷಿಣ ಭಾರತದಲ್ಲೇ ಅತ್ಯಧಿಕ ಗಳಿಕೆ ಗಳಿಸಿದ ದಾಖಲೆ ( ಸುಮಾರು 170 ಕೋಟಿ) ಬಾಹುಬಲಿ ಮಾಡಿದೆ. ಇಲ್ಲಿ ಕೆಜಿಎಫ್ ಇನ್ನೊಂದು ದಾಖಲೆ ಏನೆಂದರೆ, ಬಾಹುಬಲಿ-2 ಎರಡು ದಿನದ ಗಳಿಕೆಯನ್ನು ಕೆಜಿಎಫ್-2 ಒಂದೇ ದಿನದಲ್ಲಿ ಮಾಡಿದೆ.

ಆದರೆ ವಿಜಯ್ ಅವರು ಜಗತ್ತಿನಾದ್ಯಂತ ಸುಮಾರು 7 ಸಾವಿರ ಪರದೆಗಳಲ್ಲಿ ತೆರೆಕಂಡಿರುವ ಕೆಜಿಎಫ್ ನ ಒಟ್ಟು ಕಲೆಕ್ಷನ್ ಎಷ್ಟು ಅನ್ನೋದನ್ನು ಅವರು ಹೇಳಿಲ್ಲ. ಆದರೆ, ಒಂದು ಅಂದಾಜಿನ ಪ್ರಕಾರ, ಇಡೀ ಜಗತ್ತಿನ ಕಲೆಕ್ಷನ್ ಸುಮಾರು 150 ಕೋಟಿ ಎನ್ನಲಾಗುತ್ತಿದೆ.

ಇದನ್ನೂ ಓದಿ : KGF Chapter 2 : ಬಾಲಿವುಡ್ ನಲ್ಲೂ ಕೆಜಿಎಫ್-2 ಹೊಸ ದಾಖಲೆ : ಮೊದಲ ದಿನವೇ 125 ಕೋಟಿ ಬಾಚಿದ ರಾಕಿಬಾಯ್‌

(KGF 2 Collection is more than Bhaubali 2)

Comments are closed.