ICSE ISC Semester 2 : ಐಸಿಎಸ್​ಇ , ಐಎಸ್​ಸಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ

ದಿ ಕೌನ್ಸಿಲ್​ ಫಾರ್​ ದಿ ಇಂಡಿಯನ್​ ಸ್ಕೂಲ್​​ ಸರ್ಟಿಫಿಕೇಟ್​​ ಎಕ್ಸಾಮಿನೇಷನ್​ ಐಸಿಎಸ್​ಇ ಹಾಗೂ ಐಎಸ್​​ಸಿ ಸೆಮಿಸ್ಟರ್​​ 2 ಪರೀಕ್ಷೆಗಳಿಗೆ (ICSE ISC Semester 2) ಪ್ರವೇಶ ಕಾರ್ಡ್​ಗಳನ್ನು ಈ ವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.ಈ ವಿಚಾರವಾಗಿ ಮಾತನಾಡಿದ ಸಿಐಎಸ್​​ಸಿಇ ಅಧಿಕಾರಿಯೊಬ್ಬರು 10 ಹಾಗೂ 12ನೇ ತರಗತಿಯ ಪ್ರವೇಶ ಕಾರ್ಡ್​ಗಳನ್ನು ಏಪ್ರಿಲ್​ 17ರೊಳಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ಮುಂದಿನವಾರದಿಂದ ಡೌನ್​ಲೋಡ್​​ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.


ಪ್ರವೇಶ ಕಾರ್ಡ್​ಗಳು ಒಮ್ಮೆ ಬಿಡುಗಡೆಯಾದ ಬಳಿಕ ವಿದ್ಯಾರ್ಥಿಗಳು ಐಸಿಎಸ್​​ಇ ಹಾಗೂ ಐಎಸ್​ಸಿ 2ನೇ ಸೆಮಿಸ್ಟರ್​​ ಪರೀಕ್ಷೆಗಳ ಪ್ರವೇಶ ಕಾರ್ಡ್​ಗಳನ್ನು ಕೌನ್ಸಿಲ್​​ನ ವೆಬ್​​ಸೈಟ್​ cisce.orgನಲ್ಲಿ ಡೌನ್​​ಲೋಡ್​ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.


ಈ ಹಿಂದೆ ನೀಡಿರುವ ಅಧಿಸೂಚನೆಯ ಪ್ರಕಾರ, ಇಂಡಿಯನ್​ ಸ್ಕೂಲ್​​ ಸರ್ಟಿಫಿಕೇಟ್​, ಐಎಸ್​ಸಿ 12ನೇ ತರಗತಿಯ ಪರೀಕ್ಷೆಗಳು ಏಪ್ರಿಲ್​​ 26ರಂದು ನಡೆಯಲಿದ್ದು ಇಂಡಿಯನ್​ ಸರ್ಟಿಫಿಕೇಟ್​ ಆಫ್​ ಸೆಕೆಂಡರಿ ಎಜುಕೇಷನ್​​ 2ನೇ ಸೆಮಿಸ್ಟರ್​​​ ಪರೀಕ್ಷೆಗಳನ್ನು ಏಪ್ರಿಲ್​ 25ರಂದು ನಡೆಸಲಿದೆ ಎಂದು ಹೇಳಿದೆ.


ಈ ಹಿಂದೆ ಬಿಡುಗಡೆ ಮಾಡಲಾದ ವೇಳಾಪಟ್ಟಿಯ ಪ್ರಕಾರ, ICSE 10 ನೇ ತರಗತಿ ಪರೀಕ್ಷೆಗಳು ಮತ್ತು ISC 12 ನೇ ತರಗತಿ ಪರೀಕ್ಷೆಗಳು ಒಂದು ಗಂಟೆ 30 ನಿಮಿಷಗಳ ಕಾಲ ನಡೆಯಲಿವೆ ಮತ್ತು 10 ನೇ ತರಗತಿ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮತ್ತು 12 ನೇ ತರಗತಿ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿವೆ.

UPSC IFS Main Result 2021 : ಯುಪಿಎಸ್ಸಿ ಐಎಫ್​​ಎಸ್​ ಮೇನ್​ ಫಲಿತಾಂಶ ಪ್ರಕಟ

UPSC IFS Main Result 2021 : ಯೂನಿಯನ್​ ಪಬ್ಲಿಕ್​ ಸರ್ವೀಸ್​ ಕಮಿಷನ್​​ ಯುಪಿಎಸ್​​ಸಿ ಐಎಫ್​ಎಸ್​ ಮುಖ್ಯ ಫಲಿತಾಂಶವನ್ನು ಗುರುವಾರ ಅಧಿಕೃತ ವೆಬ್​ಸೈಟ್​ upsc.gov.in ನಲ್ಲಿ ಘೋಷಣೆ ಮಾಡಿದೆ. ಭಾರತೀಯ ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆಯು ಫೆಬ್ರವರಿ 27ರಿಂದ ಮಾರ್ಚ್​ 6ರರವರೆಗೆ ನಡೆದಿದೆ. ಮುಖ್ಯ ಲಿಖಿತ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಈಗ ಪರ್ಸನಾಲಿಟಿ ಟೆಸ್ಟ್​​ಗೆ ಅರ್ಹರಾಗಿದ್ದಾರೆ.

ಪರ್ಸನಾಲಿಟಿ ಟೆಸ್ಟ್​ ಸಂದರ್ಭದಲ್ಲಿ ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಸಮುದಾಯ, EWS, ಬೆಂಚ್‌ಮಾರ್ಕ್ ಅಸಾಮರ್ಥ್ಯ ಹೊಂದಿರುವ ವ್ಯಕ್ತಿ (PwBD) ಮತ್ತು TA ಫಾರ್ಮ್‌ನಂತಹ ಇತರ ದಾಖಲೆಗಳನ್ನು ತರುವುದು ಅವಶ್ಯವಾಗಿದೆ.

ಅಭ್ಯರ್ಥಿಗಳು ತಮ್ಮ ಪರ್ಸನಾಲಿಟಿ ಟೆಸ್ಟ್​ ಸಂದರ್ಭದಲ್ಲಿ ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಸಮುದಾಯ. ಸೇರಿದಂತೆ ವಿವಿಧ ಮೂಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂದು ಯುಪಿಎಸ್​ಸಿ ತನ್ನ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.

ಅಭ್ಯರ್ಥಿಗಳಿಗೆ UPSC IFS 2021 ಪರ್ಸನಾಲಿಟಿ ಟೆಸ್ಟ್​ ದಿನಾಂಕಗಳನ್ನು UPSC ಶೀಘ್ರದಲ್ಲೇ ಪ್ರಕಟಿಸಲಿದೆ. ಸಂದರ್ಶನದ ದೆಹಲಿಯಲ್ಲಿ ನಡೆಯಲಿದೆ. ನಿಗದಿಪಡಿಸಿದ ದಿನಾಂಕ ಮತ್ತು ಸಮಯದ ಬದಲಾವಣೆಗೆ ಯಾವುದೇ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ.

ಫಲಿತಾಂಶಗಳನ್ನು ವೀಕ್ಷಿಸಲು ಇಲ್ಲಿದೆ ಮಾರ್ಗ

upsc.gov.in ವೆಬ್​ಸೈಟ್​ಗೆ ಭೇಟಿ ನೀಡಿ.

ಹೋಂ ಪೇಜ್​​ನಲ್ಲಿ IFS Mains 2021 Exam Results ಆಯ್ಕೆ ಮೇಲೆ ಕ್ಲಿಕ್​ ಮಾಡಿ.

ನಿಮ್ಮ ರೋಲ್​ ನಂಬರ್​ನ್ನು ಯುಪಿಎಸ್​​ಸಿ ರಿಸಲ್ಟ್​ ಪಿಡಿಎಫ್​​​ನಲ್ಲಿ ಸರ್ಚ್ ಮಾಡಿ.

ಪಿಡಿಎಫ್​ ಡೌನ್​ ಲೋಡ್ ಮಾಡಿ, ಅವಶ್ಯಕತೆ ಇದ್ದಲ್ಲಿ ಪ್ರಿಂಟ್​ ಕೂಡ ಮಾಡಿಸಬಹುದು.

ಇದನ್ನು ಓದಿ : JEE Advanced 2022 : ಜೆಇಇ ಅಡ್ವಾನ್ಸ್ಡ್​​ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : CBSE Class 10 12 : ಸಿಬಿಎಸ್​ಇ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ICSE, ISC Semester 2 Admit Card 2022 Likely to be Released by April 17, Says CISCE Official

Comments are closed.