KGF 2 Impact :ಮೆಗಾಸ್ಟಾರ್‌ ಚಿರಂಜೀವಿ ಚಿತ್ರದ ಮೇಲೂ ಪ್ರಭಾವ ಬೀರಲಿದೆಯೇ ಕೆಜಿಎಫ್‌ 2 !

ಕೆಜಿಎಫ್ ಚಾಪ್ಟರ್ 2 (KGF 2 Impact) ಸಿನಿಮಾ ಇಡೀ ಚಿತ್ರ ಜಗತ್ತನ್ನೇ ತಿರುಗಿ ನೋಡುವಂತೆ ಮಾಡಿದೆ. ಎಲ್ಲಾ ಕಡೆ ಕೆಜಿಎಫ್ ನದ್ದೇ ಟಾಕ್. ಕೆಜಿಎಫ್ ಮೇಕಿಂಗ್ ಗಿಂತ ಗಳಿಕೆ ಬಾಕ್ಸ್ ಆಫೀಸಲ್ಲಿ ದೊಡ್ಡ ಸುದ್ದಿ ಮಾಡಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ನಂತರ ಬಿಡುಗಡೆಯಾಗುವ ಸ್ಟಾರ್ ನಟರ ಸಿನಿಮಾಗಳ ಪ್ಯಾಟ್ರನ್ ಬದಲಾಗುತ್ತದೆಯೇ ಅಥವಾ ಬಜೆಟ್ ಗಳು ಜಾಸ್ತಿಯಾಗುತ್ತದೆಯೇ, ಆರ್ ಆರ್ ಆರ್ ಬಿಡುಗಡೆ ನಂತರ, ಸಿನಿಮಾ ಮಾಡುವವರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಚರ್ಚೆಯಾಗಿ ಮರೆಯಾಯಿತು. ಆದರೆ, ಹೇಳಿಕೊಳ್ಳುವಂತ ಪರಿಣಾಮವೇ ಆದಂತಿಲ್ಲ.

ಆದರೆ, ಯಶ್ ಅಭಿನಯದ ಈ ಕೆಜಿಎಫ್-2 ಸಿನಿಮಾ ತೆಲುಗಿನ ಚಿರಂಜೀವಿ ನಟಿಸಿರುವ ಆಚಾರ್ಯ ಸಿನಿಮಾದ ಮೇಲೆ ಸೈಲೆಂಟಾಗಿ ಪ್ರಭಾವ ಬೀರಿದೆ.
ಯು-ಎ, ಸರ್ಟಿಫಿಕೇಟ್ ಅನ್ನು ಹಿಡಿದುನಿಂತಿರುವ ಆಚಾರ್ಯ ಸಿನಿಮಾದ ದ್ವಿತೀಯಾರ್ಧದಲ್ಲಿ ಕೆಜಿಎಫ್ ಪ್ರಭಾವ ಇದೆಯಂತೆ. ಈಗಾಗಲೇ ಶೂಟಿಂಗ್ ಪೂರೈಸಿದ್ದ ಆಚಾರ್ಯ,ಕೆಜಿಎಫ್ ಸಿನಿಮಾದ ಕೆಲವು ಪಾತ್ರ ನಿರೂಪಣಾ ತಂತ್ರಗಳನ್ನು ಇಲ್ಲಿ ಅಳವಡಿಸಿಕೊಂಡಿದೆ ಎನ್ನಲಾಗುತ್ತದೆ. ಇದಕ್ಕೆ ಟಾಲಿವುಡ್ ನಲ್ಲಿ ಕೆಜಿಎಫ್ ಟ್ರೀಟ್ಮೆಂಟ್ ಅಂತಲೇ ಕರೆಯುತ್ತಿದ್ದಾರಂತೆ.

ಹಾಗಂತ ಎಲ್ಲವನ್ನೂ ಬದಲಾಯಿಸಿಲ್ಲ. ಕೆಲವು, ಬಹಳ ಸಿಂಪಲ್ಲಾಗಿರುವ ದೃಶ್ಯಗಳಿಗೆ ಕೆಜಿಎಫ್ ಟ್ರೀಟ್ ಮೆಂಟ್ ನೀಡಲಾಗಿದೆ. ಬಹಳ ಮುಖ್ಯವಾಗಿ ಬಿಲ್ಡಪ್ ಸೀನ್ ಗಳನ್ನು ಹೆಚ್ಚಿನ ಮಟ್ಟಿಗೆ ಕೆಜಿಎಫ್ ಟ್ರೀಟ್ ಮೆಂಟ್ ಆಗಿದೆ ಎನ್ನಲಾಗುತ್ತಿದೆ. ಆಚಾರ್ಯ ಸಿನಿಮಾದ ಮಧ್ಯಂತರ ನಂತರವೇ ರಾಮ್ ಚರಣ್ ತೇಜ ಎಂಟ್ರಿ ಆಗುವುದು. ವಿಲನ್ ಸೋನುಸೂದ್ ಎದುರಿನ ಗುದ್ದಾಟದ ಮೂಲಕ ರಾಮಚರಣ್ ಚಿತ್ರಕ್ಕೆ ಕಾಲಿಡಲಿದ್ದಾರೆ. ಈ ಬಿಲ್ಡಪ್ ಸೀನ್ ಗೆ ಕೆಜಿಎಫ್ ಟ್ರೀಟ್ ಮೆಂಟ್ ಆಗಿದೆಯಂತೆ.

ಚಿರಂಜೀವಿ ಹೊಡೆದಾಟ ದೃಶ್ಯಗಳು, ಉದ್ದುದ ಡೈಲಾಗ್ ಗಳೆಲ್ಲವೂ ಪ್ರೇಕ್ಷಕರನ್ನು ರಂಜಿಸಲೆಂದೇ ಸೆಕೆಂಡ್ ಆಫ್ ನಲ್ಲಿ ಇಡಲಾಗಿದೆ. ನಿರ್ದೇಶಕ ಕೊರಟಾಲ ಶಿವ ಅವರ ವಿಶೇಷ ಎಂದರೆ, ವಾಣಿಜ್ಯ ಸಿನಿಮಾಗಳ ಮೂಲಕವೇ ಸಮಾಜಕ್ಕೆ ಸಂದೇಶವನ್ನು ಸಾರುವುದು. ಮುಖ್ಯವಾಗಿ, ಬಿಲ್ಡಪ್ ಸೀನ್ ಗಳನ್ನು ಸೃಷ್ಟಿ ಮಾಡುವುದರಲ್ಲಿ ಕೊರಟಾಲ ಹೆಸರಾಗಿದ್ದಾರೆ. ಅವರ ಮಿರ್ಚಿ, ಶ್ರೀಮಂತುಡು ಸಿನಿಮಾಗಳನ್ನು ನೋಡಿದವರಿಗೆ ತಿಳಿಯುತ್ತದೆ. ಹೀರೋಗಳನ್ನು ವಾಸ್ತವ ಫ್ರೇಮಿಗಿಂತ ದೊಡ್ಡದಾಗಿ ತೋರಿಸುವುದೇ ಕೊರಟಾಲ ಶಿವ ಅವರ ಶಕ್ತಿ. ಕೆಜಿಎಫ್ ನಲ್ಲೂ ಇಂಥದೇ ಪ್ರಯತ್ನಗಳು ಆಗಿವೆ. ಜನ ಈಗಾಗಲೇ ಕೆಜಿಎಫ್ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ.

ಹೀಗಾಗಿ, ಕೊರಟಾಲಶಿವ ಅವರ ಬಿಲ್ಡಪ್ ಗಳು, ಡೈಲಾಗ್ ಗಳು, ಚಿರಂಜೀವಿ ಅವರ ನಟನೆ ಕ್ಲಿಕ್ ಆದರಂತೂ, ಕೆಜಿಎಫ್ ನಂತೆ ನಾಗಾಲೋಟವಾಗಿ ಓಡುತ್ತದೆ ಎನ್ನುವ ಲೆಕ್ಕಾಚಾರ ಕೂಡ ನಡೆದಿದೆ. ಆಚಾರ್ಯರ ಓಟ ಹೇಗಿರುತ್ತದೆ ಅನ್ನೋದಕ್ಕೆ ಮುಂದಿನವಾರದ ತನಕ ಕಾಯಬೇಕು.

ಇದನ್ನೂ ಓದಿ : KGF Chapter 2 : ಬಾಲಿವುಡ್​ನ ಜೆರ್ಸಿ ಸಿನಿಮಾಗೆ ಭರ್ಜರಿ ಶಾಕ್​ ಕೊಟ್ಟ ಕೆಜಿಎಫ್​ 2

ಇದನ್ನೂ ಓದಿ :Nani : ತೆಲುಗು ನಟ ನಾನಿ: ಕನ್ನಡಿಗರ ಮನಸ್ಸಿಗೆ ನೋವು ಮಾಡುವ ಉದ್ದೇಶ ನನಗಿಲ್ಲ: ಅವರ ತೆಲುಗು ಭಾಷಾಭಿಮಾನವನ್ನು ಹೊಗಳುವುದೇ ಆಗಿತ್ತು

(KGF 2 Impact Will kgf make an impact on megastar Chiranjeevi film)

Comments are closed.