Papaya Benefits : ಪಪ್ಪಾಯಿ ಎಂಬ ಮಾಜಿಕ್ ಹಣ್ಣು! ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಅಡಗಿಸಿಕೊಂಡಿದೆ ಎಂಬುದು ನಿಮಗೆ ಗೊತ್ತೇ?

ಪೋಷಕಾಂಶಗಳಿಂದ ಸಮೃದ್ಧವಾದ ಪಪ್ಪಾಯಿಯು(Papaya Benefits) ಒಂದು ಅದ್ಭುತ ಹಣ್ಣಾಗಿದೆ. ವಿಟಮಿನ್‌ಗಳು ಮತ್ತು ಆಂಟಿಒಕ್ಸಿಡೆಂಟ್‌ಗಳಿಂದ ತುಂಬಿರುವ ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನಂಬಿಕೆಗೂ ಮೀರಿದ ಪರಿಣಾಮಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಉಷ್ಣವಲಯದಲ್ಲಿ ಬೆಳೆಯುವ ಈ ಹಣ್ಣು ಸಾಕಷ್ಟು ಪೌಷ್ಠಿಕ ಮತ್ತು ಔಷಧೀಯ ಮೌಲ್ಯಗಳನ್ನು ಹೊಂದಿದೆ. ಈ ಹಣ್ಣಿನ ಬೇರೆ ಬೇರೆ ಭಾಗಗಳಾದ ಬೀಜ, ಎಲೆ, ಮತ್ತು ರಸ ಇವುಗಳು ಅದರದೇ ಆದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಪಪ್ಪಾಯಿಯನ್ನು ಔಷಧಗಳಂತೆಯೂ ಉಪಯೋಗಿಸುತ್ತಾರೆ. ಋತುಚಕ್ರದ ಸಂದರ್ಭದಲ್ಲಿಯ ನೋವು ಮತ್ತು ಅನಿಯಮಿತತೆ, ಮಲಬದ್ಧತೆ ಮತ್ತು ಮಲೇರಿಯಾ ಸೇರಿದಂತೆ ಅನೇಕ ಕಾಯಿಲೆಗಳಿಗೆ ಇದನ್ನು ಬಳಸುತ್ತಾರೆ. ಪಪ್ಪಾಯಿಯನ್ನು ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳುವುದರಿಂದ ತೂಕ ಇಳಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾದರೆ, ಪಪ್ಪಾಯಿಯ ಆರೋಗ್ಯ ಪ್ರಯೋಜನಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ.

ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳು :

  • ತೂಕ ಇಳಿಸಲು ಸಹಾಯ ಮಾಡುತ್ತದೆ:
    ಕಡಿಮೆ ಕ್ಯಾಲೋರಿಯ ಜೊತೆಗೆ ಉತ್ತಮ ನಾರಿನಾಂಶವಿರುವ, ಮತ್ತು ಆಂಟಿಒಕ್ಸಿಡೆಂಟ್‌ ಮತ್ತು ಖನಿಜಾಂಶಗಳನ್ನು ಹೇರಳವಾಗಿ ಹೊಂದಿರುವ ಪಪ್ಪಾಯಿಯು ತೂಕ ಇಳಸಲು ಸಹಾಯ ಮಾಡುತ್ತದೆ. ಪಪ್ಪಾಯಾದಲ್ಲಿರುವ ನಾರಿನಾಂಶವು ಬಹಳ ಸಮಯದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುವುದರಿಂದ ತಿನ್ನುವ ಬಯಕೆಗಳನ್ನು ಕಡಿಮೆ ಮಾಡುತ್ತದೆ.
  • ದೃಷ್ಟಿ ಚುರುಕಾಗಿಸುತ್ತದೆ:
    ಪಪ್ಪಾಯಿಯಲ್ಲಿ ವಿಟಮಿನ್‌ ಎ ಹೇರಳವಾಗಿದೆ. ಇದು ಕಾರ್ನಿಯಾಗಳನ್ನು ರಕ್ಷಣೆ ಮಾಡಲು ಸಹಾಯ ಮಾಡುತ್ತದೆ. ಆಂಟಿಒಕ್ಸಿಡೆಂಟ್‌ಗಳು ರೆಟಿನಾ ದುರ್ಬಲಗೊಳ್ಳವುದನ್ನು ನಿಧಾನವಾಗಿಸುತ್ತದೆ. ಮೆಕ್ಯುಲರ್‌ ದುರ್ಬಲಗೊಳ್ಳುವುದರಿಂದ ವಯಸ್ಸಾದಂತೆ ದೃಷ್ಟಿಯು ಗಣನೀಯವಾಗಿ ದುರ್ಬಲಗೊಳ್ಳುತ್ತದೆ. ಪಪ್ಪಾಯಿ ತಿನ್ನುವುದರಿಂದ ಇದನ್ನು ತಡೆಗಟ್ಟಬಹುದು. ಹಾಗೆಯೇ ಕುರುಡುತನವನ್ನು ದೂರಿವಿರುಸುವುದು.
  • ಚರ್ಮದ ಸುಕ್ಕುಗಳನ್ನು ನಿವಾರಿಸಬಲ್ಲದು:
    ಪಪ್ಪಾಯಿಯು ವಿಟಮಿನ್‌ ಸಿ ಯ ಅತ್ಯತ್ತಮ ಮೂಲವಾಗಿದೆ. ಇದು ದೇಹದಲ್ಲಿ ಕೊಲೆಜಿನ್‌ ನಿರ್ಮಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಅಂಗಾಂಶಗಳು ಒಂದಕ್ಕೊಂದು ಬಂಧಿಸಲ್ಪಡುತ್ತವೆ.

ಇದನ್ನೂ ಓದಿ : skin in summer : ಬೇಸಿಗೆ ಕಾಲದಲ್ಲಿ ಹೀಗಿರಲಿ ನಿಮ್ಮ ತ್ವಚೆಯ ಆರೈಕೆ

  • ಋತುಚಕ್ರದ ನೋವು ನಿವಾರಿಸುತ್ತದೆ:
    ಋತುಚಕ್ರದ(ಮುಟ್ಟಿನ) ಸಮಯದಲ್ಲಿ ಅತೀ ನೋವು ಅನುಭವಿಸುವು ಮಹಿಳೆಯರು ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಪಪ್ಪಾಯಿಯ ಅತಿ ದೊಡ್ಡ ಪ್ರಯೋಜನವೆಂದರೆ, ಈ ಹಣ್ಣು ಋತುಚಕ್ರದ ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಪಪ್ಪಾಯಿಯಲ್ಲಿರುವ ಪೆಪಿನ್‌ ಕಿಣ್ವವು ಗರ್ಭಕೋಶದಿಂದ ರಕ್ತವು ಸರಾಗವಾಗಿ ಹರಿಯಲು ಸಹಾಯಮಾಡುತ್ತದೆ.
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
    ವಿಟಮಿನ್‌ ಸಿ ಯಿಂದಲೇ ಕೂಡಿರುವ ಪಪ್ಪಾಯಿಯು ಹಲವಾರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಆಂಟಿಒಕ್ಸಿಡೆಂಟ್‌ ಮತ್ತು ಬೀಟಾ ಕೆರೊಟಿನ್‌ಗಳ ಆಗರವಾಗಿರುವ ಈ ಹಣ್ಣು ಆರೋಗ್ಯ ಪ್ರತಿರಕ್ಷಣೆಗೆ ಸಹಾಯಮಾಡುತ್ತದೆ. ಒಂದು ಕಪ್‌ ಪಪ್ಪಾಯಿಯು ದಿನವೊಂದಕ್ಕೆ ಬೇಕಾಗುವ ಶೇಕಡಾ 200 ಕ್ಕಿಂತ ಹೆಚ್ಚು ವಿಟಮಿನ್‌ ಸಿ ಅನ್ನು ಹೊಂದಿರುತ್ತದೆ. ಅದಕ್ಕಾಗಿಯೇ ನಿಯಮಿತವಾಗಿ ಪಪ್ಪಾಯಿಯನ್ನು ಸೇವಿಸಿವುದು ಆರೋಗ್ಯದ ತೊಂದರೆಗಳನ್ನು ದೂರಮಾಡಲು ಇರುವ ಉತ್ತಮ ದಾರಿಯಾಗಿದೆ.
  • ಜೀರ್ಣಕ್ರಿಯೆ ಸುಧಾರಿಸುತ್ತದೆ:
    ಪಪ್ಪಾಯಿಯಲ್ಲಿರುವ ಅಧಿಕ ನೀರಿನಂಶವು ಹೊಟ್ಟೆಯುಬ್ಬುರವನ್ನು ಕಡಿಮೆ ಮಾಡಿ ಮತ್ತು ಮಲಬದ್ಧತೆಯನ್ನು ಸರಾಗವಾಗಿಸಿ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ನಾರಿನಾಂಶವು ಕರುಳಿನ ಕಾರ್ಯಕ್ಷಮತೆ ಹೆಚ್ಚಿಸುವುದರಿಂದ, ಕರುಳಿನ ಕ್ಯಾನ್ಸರ್‌ನ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೆಪಿನ್‌ ಅನ್ನುವ ಕಿಣ್ವಗಳು ಪ್ರೋಟೀನ್‌ಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ :Fruits For Healthy Skin: ಈ ಹಣ್ಣುಗಳನ್ನು ತಿನ್ನಿ, ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ!

(Papaya Benefits amazing health benefits of this fruit)

Comments are closed.