KGF 2 : ಕೆಜಿಎಫ್ ನಿಂದ ಸಿಕ್ಕಾಪಟ್ಟೆ ದುಡ್ಡು ಬಂದಿಲ್ಲ! ನಾವು ಯಾವ ಹಕ್ಕೂ ಮಾರಾಟ ಮಾಡಿಲ್ಲ:ನಿರ್ಮಾಪಕ ವಿಜಯ್ ಕುಮಾರ್ ಕಿರಗಂದೂರ್

ಪ್ರಪಂಚದಾದ್ಯಂತ 5,000 ಸಾವಿರ ಪರದೆಗಳಲ್ಲಿ ತೆರೆಕಾಣುತ್ತಿರುವ ಕೆಜಿಎಫ್ (KGF 2) ಬಿಡಗಡೆ ಮುನ್ನವೇ ಅಡ್ವಾನ್ಸ್ ಪ್ರಾಫಿಟ್ ಬಂದಿಲ್ಲವೇ ಅಂದಾಗ,
‘ಬಿಡುಗಡೆ ಮುನ್ನ ಲಾಭ ಬಂದಿಲ್ಲ. ನಾವು ಚಿತ್ರವನ್ನು ಇನ್ನೂ ಮಾರಾಟ ಮಾಡಿಲ್ಲ’ ಎಂದು ವಿಜಯ್ ಷರಾ ಬರೆದಿದ್ದಾರೆ.

ಇದರ ಮುಂದುವರಿದ ಭಾಗವಾಗಿ ‘ಈವರೆಗೂ ನಮ್ಮ ತಂಡ ಎಲ್ಲೂ ಕೂಡ ಸಿನಿಮಾದ ಬಜೆಟ್ ಎಷ್ಟು ಎನ್ನುವುದನ್ನು ಹೇಳಿಲ್ಲ. ಸಧ್ಯದ ಮಟ್ಟಿಗೆ ಇಷ್ಟು ಮಾತ್ರ ನಿಮಗೆ ಹೇಳಬಹುದು. ಬಜೆಟ್ ಎಷ್ಟು, ಲಾಭ ಇಷ್ಟು ಅಂತೆಲ್ಲ ಹೇಳಲು ಆಗದು’ ಎಂದು ಅವರು ಹೇಳಿದರು.

ಕರ್ನಾಟಕ ಹೊರತು ಪಡಿಸಿ, ತೆಲುಗಿನಲ್ಲಿ ಅವತರಣಿಕೆಯ ಕೆಜಿಎಫ್ ಚಿತ್ರಕ್ಕೆ ಹೆಚ್ಚು ಬೇಡಿಕೆ ಇದೆಯಂತೆ. ಹೀಗಾಗಿ, ಕನ್ನಡ ಮತ್ತು ತೆಲುಗಿನಲ್ಲಿ ಮೊದಲು ಅಡ್ವಾನ್ಸ್ ಬುಕಿಂಗ್ ಶುರುವಾಗಲಿದೆ. ಮಧ್ಯರಾತ್ರಿಯ ಪ್ರದರ್ಶನಗಳು ಇರುವುದಿಲ್ಲ. ‘ಆದರೆ, ಅಗತ್ಯಬಿದ್ದರೆ ಬೆಳಗಿನ ಜಾವದ ಪ್ರದರ್ಶನಗಳನ್ನು ಏರ್ಪಡಿಸುವ ಯೋಜನೆ’ ಎಂದು ವಿಜಯ್ ಮಾಹಿತಿ ನೀಡಿದರು.

ಇದನ್ನೂ ಓದಿ : KGF 2 in Greece : ಕೆಜಿಎಫ್ 2 ಹವಾ! ಗ್ರೀಸ್ ಲ್ಲಿ ಬಿಡುಗಡೆಗೊಳ್ಳುತ್ತಿರುವ ದಕ್ಷಿಣ ಭಾರತದ ಮೊದಲ ಸಿನಿಮಾ

ಕೆಜಿಎಫ್ 3 ಬರುತ್ತಾ?
ಕೆಜಿಎಫ್ ನ ಈ ಹವಾ ನೋಡಿದರೆ ಚಿತ್ರದ ಮುಂದುವರಿದ ಭಾಗವಾಗಿ ಕೆಜಿಎಫ್ 3 ಸಿನಿಮಾ ನಿರ್ಮಾಣ ಮಾಡಬಹುದೇ ಎನ್ನುವುದಕ್ಕೆ ಪ್ರಶಾಂತ್ ನೀಲ್ ಉತ್ತಿರಿಸಿದ್ದು ಹೀಗೆ- ‘ಏಪ್ರಿಲ್ 14ರ ನಂತರ ಈ ಬಗ್ಗೆ ಯೋಚಿಸೋಣ. ಪ್ರಸ್ತುತ ಮೂರನೇ ಪಾರ್ಟ್ ಮಾಡುವ ಯಾವ ಯೋಚನೆ ಕೂಡ ಇಲ್ಲ. ಹಾಗಂತ ಮಾಡೋದೇ ಇಲ್ಲ ಅನ್ನೋಕ್ಕಾಗಲ್ಲ. ಏಕೆಂದರೆ, ಕೆಜಿಎಫ್ ಸಿನಿಮಾಕ್ಕೆ ಬ್ರಾಂಡ್ ವ್ಯಾಲ್ಯು ಬಹಳ ಚೆನ್ನಾಗಿದೆ. ಈ ಬಗ್ಗೆ ಈಗಲೇ ಮಾತನಾಡುವುದು ಸೂಕ್ತವಲ್ಲ’ ಎಂದರು.

ಪೈರಸಿ ಕೆಜಿಎಫ್ -2 ಸಿನಿಮಾವನ್ನು ಬಿಟ್ಟಂಗಿಲ್ಲ. ಈ ಬಗ್ಗೆ ಯಶ್ ಮಾತನಾಡಿ, ‘ಪೈರಸಿ ತಡೆಯೋದು ಸುಮ್ಮನೆ ಕೆಲಸ ಅಲ್ಲ. ನಾವೇನಾದರು ಚಾಪೆ ಕೆಳಗೆ ದೂರಿದರೆ, ಅವರು ರಂಗೋಲಿ ತಳಗೆ ಸೇರ್ತಾರೆ. ಹೀಗಾಗಿ, ಜನಾನೇ ಪೈರಸಿ ಪಿಡುಗನ್ನು ಓಡಿಸಬೇಕು’ ಎಂದು ಕರೆಕೊಟ್ಟರು.

ಇದನ್ನೂ ಓದಿ : KGF 2 : ಕೆಜಿಎಫ್ 2 ಟಿಕೆಟ್‌ ಬೊಂಬಾಟ್‌ ಸೇಲ್‌! ಕೇವಲ 12 ಗಂಟೆಯಲ್ಲಿ 1.7 ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್ !

(KGF 2 We dont get Cores of rupee from KGF-2)

Comments are closed.