KGF Journey : ಯಶ್‌ ನೆನಪಿನಾಳದ ಮಾತು! ಕೆಜಿಎಫ್ ನ 8 ವರ್ಷಗಳಲ್ಲಿ ನಾವೂ ಬಹಳ ಬೆಳೆದಿದ್ದೇವೆ: ಈ ನೆನಪುಗಳೇ ನಮ್ಮ ಆಸ್ತಿ

ಕೆಜಿಎಫ್ ಚಾಪ್ಟರ್-2 ಅಂದರೆ ಯಾರು ಜ್ಞಾಪಕಕ್ಕೆ ಬರುತ್ತಾರೆ. ದಟ್ಟವಾದ ದಾಡಿ ಬಿಟ್ಟಿರುವ ಯಶ್, ಕೂದಲು ಕೆದರಿಕೊಂಡ ಯಶ್. ಕಣ್ಣಲ್ಲಿ ರೋಷ ಇಟ್ಟುಕೊಂಡ ಯಶ್. ಯಶ್ ಬಿಟ್ಟರೆ ಕೆಜಿಎಫ್ ಸಿನಿಮಾ ನೆನಪಿಸೋದು ಸಂಜಯ್ ದತ್, ಆಮೇಲೆ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು. ಅಂದರೆ, ಕೆಜಿಎಫ್ ಇಡೀ ಚಿತ್ರ ಯಶ್ ಗಷ್ಟೇ ಪ್ರಾಮುಖ್ಯತೆ ನೀಡಿದೆಯಾ(KGF Journey), ಮಿಕ್ಕ ಪಾತ್ರವರ್ಗದವರಿಗೆ ಚಿತ್ರದಲ್ಲಿ ಎಷ್ಟು ಸ್ಪೇಸ್ ಸಿಕ್ಕಿದೆ- ಯಶ್ ಪ್ರಕಾರ ಎಲ್ಲರಿಗೂ ಸಮಾನ ಅವಕಾಶ ಇದೆಯಂತೆ. ‘ ನಾನೊಬ್ಬನೆ ಸಿನಿಮಾಕ್ಕೆ ಕೆಲಸ ಮಾಡಿಲ್ಲ. ನನ್ನ ಜೊತೆ ದೊಡ್ಡ ತಂಡವೇ ಇದೆ. ಕೆಜಿಎಫ್ ನಿರ್ದೇಶಕರ ಚಿತ್ರ. ಎಲ್ಲರಿಗೂ ಸಮಾನ ಅವಕಾಶವಿದೆ’ ಎನ್ನುತ್ತಾರೆ.

‘ಕಥೆ ಏನು ಹೇಳತ್ತದೆಯೋ ಅದನ್ನು ನಾವು ಮಾಡಿದ್ದೇವೆ. ಕಥೆ ಇಲ್ಲಿ ಹೀರೋ. ಕಥೆಯ ಹರಿವಲ್ಲಿ ಯಾವಾಗಾವಾಗ ಪ್ರಾಮುಖ್ಯತೆ ಬರುತ್ತದೋ ಆಯಾ ಪಾತ್ರಗಳಿಗೆ ಆದ್ಯತೆ ಕೊಡುತ್ತಾ ಹೋಗಿದ್ದೇವೆ. ಕೆಜಿಎಫ್ ರಾಕಿ ಎನ್ನುವ ವ್ಯಕ್ತಿಯ ಕಥೆ. ಕೆಜಿಎಫ್ ಎನ್ನುವ ಸ್ಥಳದಲ್ಲಿ ನಡೆಯುತ್ತದೆ. ಹೀಗಾಗಿ, ರಾಕಿ- ಕೆಜಿಎಫ್ ಅನ್ನೋದು ಪಾತ್ರಗಳೇ ಆಗಿವೆ. ಮಹಾಭಾರತವನ್ನು ಯಾವುದೇ ಪಾತ್ರದ ಮೂಲಕ ಹೇಳಬಹುದಲ್ಲ? ಅದೇ ತಂತ್ರ ನಾವು ಇಲ್ಲಿ ಅಳವಡಿಸಿದ್ದೇವೆ’ ಎನ್ನುತ್ತಾರೆ ರಾಕಿ ಉರುಫ್ ಯಶ್.

ಇದನ್ನೂ ಓದಿ : Doctorate for Actor Ravichandran : ನಟ ರವಿಚಂದ್ರನ್​​ಗೆ ಗೌರವ ಡಾಕ್ಟರೇಟ್​ ಘೋಷಣೆ

ಕೆಜಿಎಫ್ ಅಬ್ಬರಕ್ಕೆ ಕಾರಣ, ಪಾನ್ ಇಂಡಿಯಾ ಚಿತ್ರದ ಮೂಲ ಕತೃ ನಿರ್ದೇಶಕ ಪ್ರಶಾಂತ್ ಅಂತ ಹೇಳೋದನ್ನು ಯಶ್ ಮರೆಯಲಿಲ್ಲ.
‘ಈ ಚಿತ್ರ ನಿಮಗೆ ಅದ್ಬುತ ಅನಿಸಿದರೆ ಅದಕ್ಕೆ ಕಾರಣ ಪ್ರಶಾಂತ್ ನೀಲ್ ಎನ್ನುವ ನಿರ್ದೇಶಕ. ಅವರಿಗಿರುವ ಸಿನಿಮಾ, ತಾಂತ್ರಿಕ ಜ್ಞಾನ, ಸಿನಿಮಾ ಪ್ರಸೆಂಟೇಷನ್ ಮಾಡುವ ರೀತಿ ಎಲ್ಲವೂ ಬೇರೆಯ ಮಟ್ಟದ್ದೇ ಆಗಿದೆ. ನಾನು ಪ್ರಶಾಂತ್, ವಿಜಯ್ ಕಿರಂಗದೂರ್ ಒಟ್ಟಾಗಿ ಕೂತಾಗ ಅರ್ಥವಾಗಿದ್ದು ಏನೆಂದರೆ, ನಮ್ಮ ಮೂರು ಜನರ ಸಾಮರ್ಥ್ಯಗಳು ಹೊಂದಾಣಿಕೆಯಾಗಿತ್ತಿವೆ ಅನ್ನೋದು. ಹಾಗಾಗಿ, ಕೆಜಿಎಫ್ ಅನ್ನೋ ದೊಡ್ಡ ಸಿನಿಮಾ ರೂಪುಗೊಳ್ಳಲು ಸಾಧ್ಯವಾಯಿತು’ ಎಂದು ಯಶ್ ವ್ಯಕ್ತಿ ವಿಮರ್ಶೆ ಮಾಡುತ್ತಾರೆ.

ಕೆಜಿಎಫ್ -1 ಮತ್ತು 2 ಒಟ್ಟು 8 ವರ್ಷಗಳ ಸುದೀರ್ಘ ಪಯಣ. ಇದರಲ್ಲಿ ಬಹಳ ಎಂಜಾಯ್ ಮಾಡಿದ್ದಾರಂತೆ, ಎಷ್ಟೋ ವಿಷಯಗಳನ್ನು ಕಲಿತಿದ್ದಾರಂತೆ ಯಶ್. ‘ಕೆಜಿಎಫ್ ನಮ್ಮ ಬದುಕಿನ ತಿರುವು. ಮರೆಯಲಾಗದಂತ ನೆನಪುಗಳನ್ನು ಕೊಟ್ಟಿದೆ. ಇವುಗಳ ಜೊತೆ ಮಾನಸಿಕವಾಗಿ, ದೈಹಿಕವಾಗಿ ಬೆಳೆದಿದ್ದೇವೆ. ಹೀಗಾಗಿ, ನೆನಪುಗಳೇ ನಮ್ಮ ಆಸ್ತಿಯಾಗಿವೆ’ ಯಶ್ ಕೆಜಿಎಫ್ ಜರ್ನಿಯನ್ನು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ : Aregalige Nee : ಮೇ ತಿಂಗಳಲ್ಲಿ ತೆರೆಗೆ ಬರಲಿದೆ ‘ಖಾಸಗಿ ಪುಟಗಳು’ : ಯೂಟ್ಯೂಬ್ ನಲ್ಲಿ ‘ಅರೆಘಳಿಗೆ’ ಹಾಡಿನ ದಿಬ್ಬಣ

(KGF Journey We are growing with 8 years of KGF journey)

Comments are closed.