KGF Chapter 2 trailer : ಕೆಜಿಎಫ್-2 ಟ್ರೇಲರ್ ರಿಲೀಸ್‌ : ರಾಕಿ ಬಾಯ್ ಲುಕ್ ಗೆ ಫ್ಯಾನ್ಸ್ ಫಿದಾ

ಕೊನೆಗೂ ಕಾಯುವಿಕೆ ಕೊನೆಗೊಂಡಿದ್ದು, ಬಹುನೀರಿಕ್ಷಿತ ಹಾಗೂ ಕನ್ನಡ ಸಿನಿ ಪ್ರೇಕ್ಷಕರು ಕಾತುರತೆಯಿಂದ‌ ಕಾಯುತ್ತಿದ್ದ ಕನ್ನಡ ಸಿನಿಮಾರಂಗವನ್ನು ವಿಶ್ವಕ್ಕೆ ಪರಿಚಿಸುವಂತಹ ಸಿನಿಮಾ ಕೆಜಿಎಫ್-2 ಸಿನಿಮಾ (KGF Chapter 2 trailer ) ಟ್ರೇಲರ್ ಲಾಂಚ್ ಆಗಿದೆ.

ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕನ್ನಡ ಕೆಜಿಎಫ್-೨ ಟ್ರೇಲರ್ ಗೆ ನಟ ಶಿವಣ್ಣ ಚಾಲನೆ ನೀಡಿದರು. ತಮ್ಮ ನಟನೆಯ ಬಹುಯಶಸ್ವಿ ಸಿನಿಮಾ ಓಂ ಚಿತ್ರದ ಹಾಡು ಹಾಡುವ ಮೂಲಕ ಕೆಜಿಎಫ್-2 ಟ್ರೇಲರ್ ಗೆ ಚಾಲನೆ ನೀಡಿದರು. ಅಲ್ಲದೇ ನಾನು ಕೆಜಿಎಫ್-2 ನ್ನು ಪ್ರೀತಿಸುತ್ತೇನೆ ನೀವು ಎಂದು ಪ್ರಶ್ನಿಸಿದರು. ಈ ಟ್ರೇಲರ್ ಲಾಂಚ್ ವೇಳೆಯೇ ಕಾರ್ಯಕ್ರಮವನ್ನು ಹಾಗೂ ಟ್ರೇಲರ್ ರನ್ನು ಯೂಟ್ಯೂಬ್ ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಿದ್ದು ಇನ್ನೊಂದು ವಿಶೇಷವಾಗಿತ್ತು.

ಮಾಳವಿಕಾ ಸೇರಿದಂತೆ ಬಹುತೇಕ ನಟ-ನಟಿಯರು ಕೆಜಿಎಫ್-2 ಟ್ರೇಲರ್ ನ ಝಲಕನಲ್ಲಿ ಮನಸೆಳೆದಿದ್ದು, ಎಂದಿನಂತೆ ರಾಕಿಂಗ್ ಸ್ಟಾರ್ ಯಶ್ ನ ಸಖತ್ ರಾಯಲ್ ಹಾಗೂ ಖಡಕ್ ಲುಕ್ ಅನಾವರಣಗೊಂಡಿದೆ. ರಕ್ತದಿಂದಲೇ ಬರೆದಿರೋ ಇತಿಹಾಸ ಇದು. ಇದನ್ನು ಇಂಕ್ ನಿಂದ ಮುಂದುವರಿಸಲು ಸಾಧ್ಯವಿಲ್ಲ. ಇದನ್ನು ಮುಂದುವರಿಸಲು ರಕ್ತನೇ ಕೇಳುತ್ತೆ ಅನ್ನೋ ಪ್ರಕಾಶ್ ರೈ ಡೈಲಾಗ್, ನೋ ಮೋರ್ ಟಾಲರೇನ್ಸ್, ಕಸಕೇ ಮಾರೆಂಗೇ ಅನ್ನೋ ರವೀನಾ ಟಂಡನ್ ಡೈಲಾಗ್ ಗಳು ಮನಸೆಳೆಯುತ್ತವೆ.ರಾಯಲ್ ಹಾಗೂ ಖಡಕ್ ಲುಕ್ ಅನಾವರಣಗೊಂಡಿದೆ. ಕೆಜಿಎಫ್‌ ಚಾಪ್ಟರ್‌ 2 ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಿ

ಇದಕ್ಕಿಂತ ಮುಖ್ಯವಾಗಿ violence violence, violence, I don’t like it, I avoid. but violence likes me. I can’t avoid ಅನ್ನೋ ರಾಕಿಂಗ್ ಸ್ಟಾರ್ ಜೊತೆ ಯಶ್ ತೆರೆಗೆ ಬಂದಿದ್ದು ಅಭಿಮಾನಿಗಳು ಈ ಖಡಕ್ ಧ್ವನಿಯ ಹಾಟ್ ಬ್ರೇಕಿಂಗ್ ಡೈಲಾಗ್ ಗೆ ಫ್ಯಾನ್ಸ್ ಹುಚ್ಚೆದ್ದು ಕುಣಿದಿದ್ದಾರೆ. ಕೆಜಿಎಫ್ -2 ಕನ್ನಡ ಟ್ರೈಲರ್ ನ್ನು ಶಿವಣ್ಣ ಲಾಂಚ್ ಮಾಡಿದ್ರೇ, ತೆಲುಗು ಟ್ರೇಲರ್ ನ್ನು ರಾಮ್ ಚರಣ್ ತೇಜಾ ಲಾಂಚ್ ಮಾಡಿದ್ದಾರೆ. ಇನ್ನು ಕೆಜಿಎಫ್ 2 ತಮಿಳು ಟ್ರೈಲರ್ ನ್ನು ಸೂರ್ಯ ಲಾಂಚ್ ಮಾಡಿದ್ದಾರೆ. ನಟ ಪ್ರಥ್ವಿರಾಜ್ ಮಲಯಾಳಂ ಟ್ರೇಲರ್ ಲಾಂಚ್ ಮಾಡಿದ್ದು, ಹಿಂದಿ ಟ್ರೈಲರ್ ನ್ನು ಫರಾನ್ ಆಕ್ತರ್ ಲಾಂಚ್ ಮಾಡಿದ್ದಾರೆ.

ಇನ್ನೂ ಟ್ರೇಲರ್ ಲಾಂಚ್ ಮಾಡಿದ ಶಿವಣ್ಣ ಬಳಿಕ ಕೆಜಿಎಫ್-2 ಡೈಲಾಗ್ ಹೇಳೋ ಮೂಲಕ ಮಾತನಾಡಿ ಚಿತ್ರತಂಡ ಕ್ಕೆ ಶುಭಹಾರೈಸಿದ್ದಾರೆ. ಮಾತ್ರವಲ್ಲ ತಾವು ಏಪ್ರಿಲ್ 14 ರಂದು ಕೆಜಿಎಫ್-2 ಸಿನಿಮಾ ನೋಡೊಕೆ ಕಾಯ್ತಿರೋದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಕೆಜಿಎಫ್-2 ಸಿನಿಮಾ ಟ್ರೇಲರ್ ರಿಲೀಸ್ ಆದ 30 ನಿಮಿಷಕ್ಕೆ 10 ಲಕ್ಷ ವೀವ್ಸ್ ಪಡೆದುಕೊಂಡಿದೆ.

ಇದನ್ನೂ ಓದಿ : Sai Pallavi : ನಟನೆಗೆ ವಿದಾಯ ಹೇಳಿದ್ರಾ ಪ್ರೇಮಂ ಬೆಡಗಿ ಸಾಯಿ ಪಲ್ಲವಿ

ಇದನ್ನೂ ಓದಿ : ಮತ್ತೊಮ್ಮೆ ಸ್ನೇಹಕ್ಕೆ ಮಿಡಿದ ಸುದೀಪ್ : ವಿಕ್ರಾಂತ್‌ ರೋಣಾ ಜಾನಿ ಮಾಸ್ಟರ್ ಗೆ ಕೊಟ್ಟರು ಮಹಿಂದ್ರಾ ಥಾರ್

KGF Chapter 2 trailer launched, click here to watch trailer

Comments are closed.