KGF chapter 3 : ಕೆಜಿಎಫ್ 3 ಶೂಟಿಂಗ್ ಮತ್ತು ಬಿಡುಗಡೆ ದಿನಾಂಕ ಘೋಷಣೆ

ಭಾರತದ ಸಿನಿಮಾದ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿರುವ ಕೆಜಿಎಫ್‌ ಸಿನಿಮಾದ ನಿರ್ಮಾಪಕ ವಿಜಯ್‌ ಕಿರಗಂದೂರ್‌ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ವಿಜಯ ಕಿರಗಂದೂರ್‌, ಕೆಜಿಎಫ್ ಚಾಪ್ಟರ್ 3 (KGF chapter 3) ರ ಮೇಕಿಂಗ್ ಕುರಿತು ಅಪ್‌ಡೇಟ್ ನೀಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಿದ ಬೆನ್ನಲ್ಲೇ ಕಿರಗಂದೂರು ಕೆಜಿಎಫ್ ಚಾಪ್ಟರ್ 3 2024 ರಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಕೆಜಿಎಫ್ ಅಧ್ಯಾಯ 3 ಶೂಟಿಂಗ್ ಮತ್ತು ಬಿಡುಗಡೆ ದಿನಾಂಕ, ಸಂಪೂರ್ಣ ವಿವರ ಇಲ್ಲಿದೆ.

KGF chapter 3 shooting and Release date, here is complete detail
ನಟ ಯಶ್​

ಕೆಜಿಎಫ್ ಅಧ್ಯಾಯ 3 (KGF chapter 3 ) ಕುರಿತು ಮಾತನಾಡುವಾಗ, ನಿರ್ಮಾಪಕರು ಅವರು ‘ಮಾರ್ವೆಲ್ ಶೈಲಿಯ’ ಬ್ರಹ್ಮಾಂಡವನ್ನು ರಚಿಸಲು ಯೋಜಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದರು. ದೈನಿಕ್ ಭಾಸ್ಕರದೊಂದಿಗೆ ಮಾತನಾಡಿದ ಅವರು, ಪ್ರಶಾಂತ್ ನೀಲ್ ಪ್ರಸ್ತುತ ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸುಮಾರು 30-35% ಚಿತ್ರೀಕರಣ ಮುಗಿದಿದೆ ಎಂದಿದ್ದಾರೆ. ಈ ವರ್ಷ ಅಕ್ಟೋಬರ್- ನವೆಂಬರ್ ವೇಳೆಗೆ ಪೂರ್ಣಗೊಳಿಸಲು ನಾವು ಭಾವಿಸುತ್ತೇವೆ. ಹಾಗಾಗಿ, ಈ ವರ್ಷದ ಅಕ್ಟೋಬರ್ ನಂತರ ಕೆಜಿಎಫ್ 3 ಚಿತ್ರೀಕರಣವನ್ನು ಪ್ರಾರಂಭಿಸಲು ನಾವು ಯೋಜಿಸಿದ್ದೇವೆ. 2024 ರ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಭರವಸೆ ಇದೆ.

KGF chapter 3 shooting and Release date, here is complete detail

ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 (KGF chapter 3 ) ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಸಿನಿಮಾ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1180 ಕೋಟಿ ರೂಪಾಯಿಗಳಿಸಿದೆ. ಮೂಲ ಕನ್ನಡ ಆವೃತ್ತಿಯಲ್ಲಿ ಬಿಡುಗಡೆಯಾಗಿ ಹಿಂದಿ, ಮಲಯಾಳಂ, ತೆಲುಗು, ಮತ್ತು ತಮಿಳು ಭಾಷೆಗಳಲ್ಲಿ ಡಬ್ ಆಗಿರುವ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಉತ್ತರ-ಭಾರತದ ಮಾರುಕಟ್ಟೆಗಳಲ್ಲಿ ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ ಟೈನ್‌ಮೆಂಟ್ ಮತ್ತು ಎಎ ಫಿಲ್ಮ್ಸ್ ಪ್ರಸ್ತುತ ಪಡಿಸಿದ್ದಾರೆ.

KGF chapter 3 shooting and Release date, here is complete detail

ಕೆಜಿಎಫ್‌ ಮೊದಲ ಭಾಗ ಬಿಡುಗಡೆಯಾದಾಗಲೇ ಕೆಜಿಎಫ್‌ 2 ಯಾವಾಗ ಬರುತ್ತೆ ಅನ್ನೋ ಕುತೂಹಲವಿತ್ತು. ಆದ್ರೀಗ ಕೆಜಿಎಫ್‌ 1 ದೇಶದಾದ್ಯಂತ ಸದ್ದು ಮಾಡಿದ್ರೆ, ಕೆಜಿಎಫ್‌ 2 ವಿಶ್ವದಾದ್ಯಂತ ಬಿಡುಗಡೆಯಾಗುವ ಮೂಲಕ ಹೊಸ ಇತಿಹಾಸವನ್ನೇ ಬರೆದಿದೆ. ಕೆಜಿಎಫ್‌ 2 ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಚಿನ್ನ ತುಂಬಿಸಿಕೊಂಡು ಹಡಗಿನಲ್ಲಿ ಹೊರಟ ರಾಕಿಬಾಯ್‌ ಸಾವನ್ನಪ್ಪುತ್ತಾರಾ ? ಇಲ್ಲ ಬದುಕಿ ಬಂದು ಮತ್ತೊಂದು ಇತಿಹಾಸ ಸೃಷ್ಟಿಸುತ್ತಾರಾ ಅನ್ನೋ ಕುತೂಹಲ ಮೂಡಿಸಿತ್ತು. ಈ ನಡುವಲ್ಲೇ ಕೆಜಿಎಫ್‌ 3 ಸಿನಿಮಾದ ಹಿಂಟ್‌ ಕೂಡ ಕೊಟ್ಟಿದ್ದರು ನಿರ್ದೇಶಕ ಪ್ರಶಾಂತ್‌ ನೀಲ್.‌ ಈ ನಡುವಲ್ಲೇ ನಿರ್ಮಾಪಕರು ಅಧಿಕೃತವಾಗಿಯೇ ಕೆಜಿಎಫ್‌ ಸಿನಿಮಾದ ಮುಂದಿನ ಭಾಗವನ್ನು ಘೋಷಿಸಿದ್ದಾರೆ.

KGF chapter 3 shooting and Release date, here is complete detail

ಕೆಜಿಎಫ್‌ 3 (KGF chapter 3 )ಸಿನಿಮಾದಲ್ಲಿ ಯಶ್‌ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಕುತೂಹಲ. ಕೆಜೆಎಫ್‌ ಕೋಟೆ ಧ್ವಂಸವಾದ ನಂತರದಲ್ಲಿ ರಾಕಿಬಾಯ್‌ ಏನು ಮಾಡ್ತಾರೆ. ಯಾರ ರೂಪದಲ್ಲಿ ಯಶ್‌ ಅಬ್ಬರಿಸಲಿದ್ದಾರೆ ಅನ್ನೋದು ಸದ್ಯದ ಕುತೂಹಲ. ಇನ್ನು ಇಂಟರ್‌ನ್ಯಾಷನಲ್‌ ಲೆವೆಲ್‌ ಸಿನಿಮಾದ ನಿರ್ಮಾಣ ಮಾಡುವ ಕುರಿತು ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ ವಿಜಯ್‌ ಕಿರಗಂದೂರು.

https://www.youtube.com/watch?v=-RJFfV-uEFQ

ಇದನ್ನೂ ಓದಿ : KGF Chapter 2 : ವೀಕ್ಷಣೆಯಲ್ಲೂ ದಾಖಲೆ ಬರೆದ ಕೆಜಿಎಫ್‌ : ದೇಶದಲ್ಲಿ ಕೆಜಿಎಫ್‌ ಸಿನಿಮಾ ನೋಡಿದ್ದು ಎಷ್ಟು ಕೋಟಿ ಜನರು ಗೊತ್ತಾ ?

ಇದನ್ನೂ ಓದಿ : Kavitha Gowda : ಸದ್ದು ಮಾಡ್ತಿದೆ ‘ಮೆಟಡೋರ್’ ಸಿನಿಮಾದ ’ಗಾಂಧಾರಿ’ ಹಾಡು : ಬೆಳ್ಳಿತೆರೆಯಲ್ಲಿ ಕವಿತಾ ಗೌಡ ಮಿಂಚು

KGF chapter 3 shooting and Release date, here is complete detail

Comments are closed.