BY Vijayendra : ಬಿ.ವೈ. ವಿಜಯೇಂದ್ರಗೆ ಸಚಿವ ಸ್ಥಾನ ಫಿಕ್ಸ್‌ : ಸಿಎಂ ಸ್ಥಾನ ಕೊಟ್ಟು ಸಚಿವ ಸ್ಥಾನ ಪಡೆದ ಯಡಿಯೂರಪ್ಪ

ಬೆಂಗಳೂರು : ಕೊನೆಗೂ ರಾಜ್ಯ ರಾಜಕೀಯದಲ್ಲಿ ರಾಜಾಹುಲಿ‌ ಲೆಕ್ಕಾಚಾರವೇ ಗೆದ್ದಿದೆ. ಸಿಎಂ ಸ್ಥಾನದಿಂದ ಇಳಿಯುವಾಗಲೇ ಪುತ್ರ ಬಿ.ವೈ. ವಿಜಯೇಂದ್ರಗೆ (BY Vijayendra) ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಮಾಜಿಸಿಎಂ ಬಿ.ಎಸ್.ಯಡಿಯೂರಪ್ಪ ತಡವಾಗಿಯಾದರೂ ಭರ್ಜರಿಯಾಗಿ ತಮ್ಮ ಪ್ರಭಾವವನ್ನು ಸಾಬೀತು ಪಡಿಸಿರುವ ಬಿಎಸ್ವೈ ಪುತ್ರನನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.‌ ಯಡಿಯೂರಪ್ಪ ನಾಯಕತ್ವವನ್ನು, ಪ್ರಭಾವವನ್ನು, ವರ್ಚಸ್ಸನ್ನು ಹಾಗೂ ಮತಬ್ಯಾಂಕ್ ನ್ನು ಪಕ್ಷ ಕ್ಕಾಗಿ ಬಳಸಿಕೊಳ್ಳುವ ಮುಂದಾಲೋಚನೆಯಿಂದ ಬಿಜೆಪಿ ಹೈಕಮಾಂಡ್ ಕೊನೆಗೂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಿದೆ.

ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಹಾಗೂ ರಾಜ್ಯದಲ್ಲಿ ಬಿ.ಎಸ್.‌ ಯಡಿಯೂರಪ್ಪ ಅವರಿಗೆ ಇರುವ ಪ್ರಭಾವವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಉದ್ದೇಶದಿಂದ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ತೆರವಾಗಲಿರುವ ವಿಧಾನಪರಿಷತ್ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ ಬಳಿಕ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಹೈಕಮಾಂಡ್ ಸಜ್ಜಾಗಿದೆ. ಈ ವಿಚಾರವನ್ನು ಸ್ವತಃ ಸಿಎಂ ಬೊಮ್ಮಾಯಿ ಸಹ ಖಚಿತಪಡಿಸಿದ್ದು, ಕೋರ್ ಕಮಿಟಿ ಸಭೆಯಲ್ಲಿ ವಿಧಾನ್ ಪರಿಷತ್ ಗೆ ವಿಜಯೇಂದ್ರ ಹೆಸರನ್ನು ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿದೆ. ಅಂತಿಮ ನಿರ್ಣಯವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದಿದ್ದಾರೆ.

ವಿಧಾನಸಭಾ ಚುನಾವಣೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರೇ ಪುತ್ರನಿಗೆ ಸಚಿವ ಸ್ಥಾನ ನೀಡಬೇಕೆಂದು ಬಿಎಸ್ವೈ ಸ್ಪಷ್ಟವಾಗಿ ಹೈಕಮಾಂಡ್ ಗೆ ತಿಳಿಸಿದ್ದು, ಒಂದೊಮ್ಮೆ ಸಚಿವ ಸ್ಥಾನ ನೀಡದೆ ಇದ್ದಲ್ಲಿ ಚುನಾವಣೆ ಪ್ರಚಾರದಿಂದ ದೂರ ಉಳಿಯುವುದಾಗಿ ಬೆದರಿಕೆ ಹಾಕಿದ್ದರಂತೆ. ಹೀಗಾಗಿ ಚುನಾವಣೆ ಎದುರಿನಲ್ಲಿ ಬಿಎಸ್ವೈ ರನ್ನು ಎದುರು ಹಾಕಿಕೊಳ್ಳ ಬಾರದೆಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಹೆಚ್ಚು ಚರ್ಚೆ ಮಾಡದೇ ವಿಜಯೇಂದ್ರ ಗೆ ಸಚಿವ ಸ್ಥಾನ ದಯಪಾಲಿಸಲಿದೆ ಎನ್ನಲಾಗ್ತಿದೆ.

ಇನ್ನೊಂದೆಡೆ ಸಚಿವ ಸ್ಥಾನ ನೀಡೋದಿಕ್ಕೆ ಬಿಜೆಪಿ ಕೂಡ ವಿಜಯೇಂದ್ರ್ ಗೆ ಷರತ್ತುಗಳನ್ನು ವಿಧಿಸಿದ್ದು,ಬಿ ವೈ ವಿಜಯೇಂದ್ರನ್ನು ಮಂತ್ರಿ ಮಾಡಿದರೆ ಖಾತೆಗಾಗಿ ಯಾವುದೇ ರೀತಿಯಲ್ಲಿ ಲಾಬಿ ಮಾಡುವಂತಿಲ್ಲ. ಇಂತದ್ದೆ ಖಾತೆ ಬೇಕೆಂದು ಪಟ್ಟು ಹಿಡಿಯುವಂತಿಲ್ಲ.ಕೊಟ್ಟ ಖಾತೆ ನಿಭಾಯಿಸಬೇಕು. ಯಾವುದೇ ಖಾತೆ ಕೊಟ್ಟರೂ ಇಂತದ್ದೇ ಬೇಕೆಂದು ಕ್ಯಾತೆ ತೆಗೆಯುವಂತಿಲ್ಲ. ಖಾತೆಗಾಗಿ ಕ್ಯಾತೆ ಮಾಡದೆ ಕೊಟ್ಟದ್ದನ್ನ ತೆಗೆದುಕೊಳ್ಳಬೇಕು. ಸೂಕ್ಷ್ಮವಾಗಿ ಬಿಎಸ್ವೈಗೆ ತಿಳಿಸಿರೋ ಹೈಕಮಾಂಡ್ ಯಾವುದೇ ಖಾತೆ ಆದ್ರೂ ಕೊಡಿ ನೋ ಡಿಮ್ಯಾಂಡ್ ಎಂದು ಭರವಸೆ ನೀಡಿದ್ದಾರಂತೆ. ಒಟ್ಟಿನಲ್ಲಿ ಸಚಿವ ಸಂಪುಟಕ್ಕೆ ವಿಜಯೇಂದ್ರ ಎಂಟ್ರಿ ಬಹುತೇಕ ಫಿಕ್ಸ್ ಆಗಿದ್ದು, ಅಧಿಕೃತ ಆದೇಶವೊಂದೇ ಬಾಕಿ ಎನ್ನಲಾಗುತ್ತಿದೆ.

ಇದನ್ನೂ ಓದಿ : ನಟಿ ರಮ್ಯ ಟ್ವೀಟ್ ಗೆ ಡಿ.ಕೆ.ಶಿವಕುಮಾರ್ ತಿರುಗೇಟು : ರಮ್ಯ ವಿರುದ್ಧ ಟ್ರೋಲ್ ಗೆ ಸೂಚಿಸಿದ ಮಹಾನಾಯಕ

ಇದನ್ನೂ ಓದಿ : ಚುನಾವಣೆ ಗೆಲುವಿಗೆ ಕಾಂಗ್ರೆಸ್​ ಹೊಸ ಕಾರ್ಯತಂತ್ರ: ಒಂದು ಕುಟುಂಬಕ್ಕೆ ಒಂದೇ ಟಿಕೆಟ್​

BY Vijayendra replaces B.S.Yeddyurappa as a Minister

Comments are closed.