KGF Collection : ಏರುತಲಿದೆ ಕೆಜಿಎಫ್ ಕಾವು! ನಾಲ್ಕು ದಿನಕ್ಕೆ 400 ಕೋಟಿ ಗಳಿಕೆ?

ಆರ್ ಆರ್ ಆರ್ ಸಿನಿಮಾ ಬಿಡುಗಡೆ ಮೊದಲೇ ಸುಮಾರು 1000 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನುವ ಪಟ್ಟಿಯೊಂದು ಸಾಮಾಜಿಕ ಜಾಲ ತಾಣದಲ್ಲಿ ಓಡಾಡುತ್ತಿತ್ತು. ಅದರ ಪ್ರಕಾರ, ಆರ್ ಆರ್ ಆರ್ ಬಿಡುಗಡೆ ಮೊದಲೇ ಕನಿಷ್ಠ 400 ಕೋಟಿ ಲಾಭದಲ್ಲಿತ್ತು. ಈ ವಿಚಾರವಾಗಿ ಚಿತ್ರ ತಂಡ ಕಡುಮೌನಿಯಾಗಿದ್ದು, ಈಗ ಆರ್ ಆರ್ ಆರ್ ಸಿನಿಮಾ ಗಳಿಕೆ ಸಾವಿಕೋಟಿ ದಾಟಿಹೋಗಿರುವ ಲೆಕ್ಕಾಚಾರ ಮುಂದಿಡುತ್ತಿದೆ. ಆರ್ ಆರ್ ಆರ್ ಸಿನಿಮಾ ಹಾದಿಯಲ್ಲೇ ಯಶ್ ನಟನೆಯ ಕೆಜಿಎಫ್ ಸಿನಿಮಾ(KGF Collection) ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ : Puneeth: ಮತ್ತೆ ಅಪ್ಪು ಬಂದ್ರು ಅಪ್ಪು: ಜೇಮ್ಸ್ ಏಪ್ರಿಲ್ 22 ರಿಂದ ಥಿಯೇಟರಿಗೆ! ಕಾರಣ ಏನು ಗೊತ್ತಾ?

ಭಾರತದಲ್ಲಿ ಕೆಜಿಎಫ್ ಸಿನಿಮಾ ಮೊದಲ ದಿನವೇ 134.5 ಕೋಟಿ ಗಳಿಕೆಯ ಮೂಲಕ ಬಾಹುಬಲಿ-2 ಸಿನಿಮಾವನ್ನು ಹಿಂದಿಕ್ಕಿದ್ದು ಈಗ ಹಳೆಯದ್ದು. ಅದರ ಓಟ ಕೇವಲ 1000 ಕೋಟಿ ಮೊತ್ತದಲ್ಲಿ ಇಲ್ಲ. ಎರಡನೇ ದಿನ ಕಲಕ್ಷನ್ ಹತ್ತಿರ ಹತ್ತಿರ 240 ಕೋಟಿ (ಮೊದಲ ದಿನದದ್ದು ಸೇರಿಸಿ), ಮೂರನೇ ದಿನದ ಕಲಕ್ಷನ್ 305 ಕೋಟಿಯಾದರೆ, ನಾಲ್ಕದಿನದ 350 ಕೋಟಿ ದಾಟಿದೆಯಂತೆ. ಗಾಂಧೀನಗರದ ಮೂಲದ ಪ್ರಕಾರ, ಈಗಾಗಲೇ ಕೆಜಿಎಫ್ ಗಳಿಕೆಯಲ್ಲಿ 400 ಕೋಟಿ ದಾಖಲೆಯ ಮೊತ್ತ ಕಲಕ್ಷನ್ ಆಗಿದೆಯಂತೆ.

ಹಿಂದಿ ಅವತರಣಿಕೆಯಲ್ಲಿ ಕೆಜಿಎಫ್ ನ ಗಳಿಕೆ ಕನಿಷ್ಠ 150 ಕೋಟಿ ಎನ್ನಲಾಗುತ್ತಿದೆ. ಆದರೆ ಚಿತ್ರತಂಡವು ಕೇವಲ ಎರಡು ದಿನದ ಗಳಿಕೆಯನ್ನು ಬಿಡುಗಡೆ ಮಾಡಿದೆ. ಇನ್ನುವಳಿದ ದಿನಗಳ ಗಳಿಕೆ ಎಷ್ಟು ಅನ್ನೋದು ಬಹಿರಂಗ ಪಡಿಸಿಲ್ಲ. ಈ ಹಿಂದೆ ಕೆಜಿಎಫ್ ಸಿನಿಮಾ ಬಿಡುಗಡೆ ಮೊದಲೇ 200 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನುವ ಗಾಳಿ ಸುದ್ದಿಗೆ ಪ್ರತಿಕ್ರಿಯಿಸಿದ್ದ ನಿರ್ಮಾಪಕ ವಿಜಯ್ ಕಿರಗಂದೂರು, ನಾವು ಈ ತನಕ ಸಿನಿಮಾ ಹೂಡಿಕೆ ಎಷ್ಟು ಎನ್ನುವುದನ್ನು ಹೇಳಿಲ್ಲ. ಸಿನಿಮಾ ಎಷ್ಟುಗಳಿಸಿದೆ ಎನ್ನುವುದನ್ನು ಬಹಿರಂಗ ಪಡಿಸಿಲ್ಲ. ಈಗ ನೀವು ಕೇಳುತ್ತಿರುವುದು ಬರೀ ಗಾಳಿ ಸುದ್ದಿ ಎಂದು ಹೇಳಿಕೆ ನೀಡಿದ್ದರು. ಆನಂತರ, ಎರಡು ದಿನದ ಗಳಿಕೆಯನ್ನು ಮಾತ್ರ ಹೊಂಬಾಳೆ ಸಿನಿಮಾ ಘೋಷಣೆ ಮಾಡಿತ್ತು.

ಈಗ ನಾಲ್ಕು ದಿನಕ್ಕೆ 400 ಕೋಟಿ ಗಳಿಕೆ ಮಾಡಿದೆಯೇ ಎನ್ನುವುದನ್ನು ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಇದನ್ನೂ ಓದಿ :KGF Chapter 2 : ಬಾಲಿವುಡ್ ನಲ್ಲೂ ಕೆಜಿಎಫ್-2 ಹೊಸ ದಾಖಲೆ : ಮೊದಲ ದಿನವೇ 125 ಕೋಟಿ ಬಾಚಿದ ರಾಕಿಬಾಯ್‌

(KGF Collection Yash acted KGF film Collected 400 crores)

Comments are closed.