ರಾಕಿಬಾಯ್ ಹಿರಿಮೆಗೆ ಮತ್ತೊಂದು ಗರಿ : ‌ ಯಶ್ ಈಗ ಮೋಸ್ಟ್ ಡಿಸೈರೇಬಲ್ ಮೆನ್

ಕೆಜಿಎಫ್ ಮೂಲಕ ಭಾರತ ಚಿತ್ರರಂಗವೇ ಕನ್ನಡದತ್ತ ಮುಖ ಮಾಡುವಂತೆ ಮಾಡಿದ್ದ ರಾಕಿಬಾಯ್ ಹಿರಿಮೆಗೆ ಇದೀಗ ಮತ್ತೊಂದು ಕಿರೀಟ ಸಿಕ್ಕಿದೆ. ನಟ ಯಶ್ ದಿ ಟೈಮ್ಸ್ 50 ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ  ಸ್ಥಾನ ಪಡೆದಿದ್ದಾರೆ.

ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ನಿಂತಿರುವ ‘ಕೆಜಿಎಫ್’ ಚಿತ್ರದ ಬಳಿಕ ಕನ್ನಡದ ರಾಕಿಂಗ್ ಸ್ಟಾರ್  ಯಶ್ ಮಿಂಚು ಹರಿಸುತ್ತಿದ್ದಾರೆ.  ಕೆಜಿಎಫ್ ಚಿತ್ರದ ಮೂಲಕ‌ ದೇಶದ ಪ್ರಖ್ಯಾತ ಸ್ಟಾರ್ ನಟರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಇದೀಗ  ನಟ ಯಶ್ ‘ದಿ ಟೈಮ್ಸ್ 50’ ಮೋಸ್ಟ್ ಡಿಸೈರೇಬಲ್ ಮೆನ್ ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದ್ದಾರೆ.

ಯಸ್ ಸಿನಿಮಾ ಕೆರಿಯರ್ ನಲ್ಲಿ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ವನ್ನು ಸೃಷ್ಟಿಸಿದೆ. ಮಾತ್ರವಲ್ಲ ಕನ್ನಡ ಚಿತ್ರರಂಗದತ್ತ ದೇಶದ ಜನರೇ ತಿರುಗಿ ನೋಡುವಂತೆ ಮಾಡಿದ್ದರು‌. ಇದೀಗ ಕೆಜಿಎಫ್ ಯಶ್ ಸಾಧನೆಗೆ ಕಿರೀಟ ತೊಡಿಸಿದೆ.

Comments are closed.