ಕಿಯಾರಾ ಅಡ್ವಾಣಿ – ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗಳ ಹಳದಿ ಶಾಸ್ತ್ರದ ವಿಡಿಯೋ ಸಖತ್‌ ವೈರಲ್

ಬಾಲಿವುಡ್‌ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Kiara Advani – Sidharth Malhotra Wedding) ಅವರು ಇಂದು ಫೆಬ್ರವರಿ 7 ರಂದು ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ 200 ಅತಿಥಿಗಳ ಸಮ್ಮುಖದಲ್ಲಿ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ನಿನ್ನೆ ಸೂರ್ಯಘರ್ ಅರಮನೆಯಲ್ಲಿ ಹಳದಿ ಶಾಸ್ತ್ರ, ಸಂಗೀತ ಮತ್ತು ಮೆಹಂದಿ ಕಾರ್ಯಕ್ರಮಗಳೊಂದಿಗೆ ಮದುವೆಯ ಸಂಭ್ರಮ ಪ್ರಾರಂಭವಾಯಿತು. ಇವರಿಬ್ಬರ ಮೆಹೆಂದಿ ಶಾಸ್ತ್ರವೂ ಭಾನುವಾರ ರಾತ್ರಿ ಹಾಗೂ ಸೋಮವಾರದಂದು ಬಹಳ ಅದ್ಧೂರಿಯಿಂದ ನಡೆದಿರುತ್ತದೆ. ಇದೀಗ ಈ ಬಾಲಿವುಡ್‌ ತಾರೆಯರ ಹಳದಿ ಶಾಸ್ತ್ರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಮರುಭೂಮಿಯ ಮರಳಿನ ದಿಬ್ಬಗಳ ನಡುವಿನ ಸ್ಥಳದಲ್ಲಿ ನಡೆಯುತ್ತಿರುವ ಇವರ ಮದುವೆ ಕಾರ್ಯಕ್ರಮನ್ನು ತಾಜಾ ಹೂವುಗಳು ಮತ್ತು ಗುಲಾಬಿ ದೀಪಗಳಿಂದ ಅಲಂಕರಿಸಲಾಗಿತ್ತು. ಫೆಬ್ರವರಿ 12, 2023 ರಂದು ಮುಂಬೈನಲ್ಲಿ ಮಾಧ್ಯಮಗಳಿಗಾಗಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಯ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಅತಿಥಿಗಳಲ್ಲಿ ಜೂಹಿ ಚಾವ್ಲಾ, ಇಶಾ ಅಂಬಾನಿ, ಶಾಹಿದ್ ಕಪೂರ್ ಹಾಜರಿದ್ದಾರೆ. ಅವರು ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

ಸೋಮವಾರ, ವೆಡ್ಡಿಂಗ್ ಕೊರಿಯೋಗ್ರಾಫರ್‌ಗಳಾದ ವೈಎಸ್‌ಡಿಸಿ ವೆಡ್ಡಿಂಗ್ ಕೊರಿಯೋಗ್ರಫಿಯ ಉತ್ಸವ್ ಮಲ್ಹೋತ್ರಾ ಮತ್ತು ಕಾಮ್ನಾ ಅರೋರಾ ಅವರು ಸ್ಥಳದಿಂದ ಫೋಟೊವನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ. ಸಿದ್ಧಾರ್ಥ್ ಮಲ್ಹೋರಾ ಮತ್ತು ಕಿಯಾರಾ ಅಡ್ವಾಣಿ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ತಮ್ಮ ವಿನೋದ ತುಂಬಿದ ಸಂಗೀತವನ್ನು ಆಚರಿಸಿದರು. ಏಕೆಂದರೆ ಆಚರಣೆಯ ಸಮಯದಲ್ಲಿ ಇಂಗ್ಲಿಷ್ ಮತ್ತು ಹಿಂದಿ ಹಾಡುಗಳನ್ನು ನುಡಿಸಲಾಯಿತು. ಹಾಗೆಯೇ ಇವರಿಬ್ಬರ ಹಳದಿ ವಿಡಿಯೋ ವೈರಲ್ ಆದ ನಂತರ ಸೆಕ್ಯೂರಿಟಿ ಗಾರ್ಡ್‌ಗಳು ಮದುವೆಯ ಸ್ಥಳದ ಆವರಣಕ್ಕೆ ಪ್ರವೇಶಿಸುವ ಜನರ ಫೋನ್‌ಗಳನ್ನು ನಿಷೇಧಿಸಿದ್ದಾರೆ.

ಇದನ್ನೂ ಓದಿ : ನಟ ಶಿವರಾಜ್‌ಕುಮಾರ್‌ ಅಭಿನಯದ “ವೇದ” ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಾ ?

ಇದನ್ನೂ ಓದಿ : Meghana Raj : ಶೂಟಿಂಗ್ , ಡಬ್ಬಿಂಗ್ ಮಧ್ಯೆ ಮೇಘನಾ ರಾಜ್ ಔಟಿಂಗ್: ವೈರಲ್ ಆಯ್ತು ಕುಟ್ಟಿಮಾ ಪೋಸ್ಟ್

ಇದನ್ನೂ ಓದಿ : 12 ಕಿ.ಮೀ ರಸ್ತೆಗೆ ನಟ ಪುನೀತ್‌ ಹೆಸರು : ಅದ್ಧೂರಿ ಕಾರ್ಯಕ್ರಮ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಇನ್ನು ಇವರಿಬ್ಬರ ಮದುವೆ ಸಮಾರಂಭದ ಊಟದ ಮೆನ್ಯುನಲ್ಲಿ ಕೂಡ ವಿಶೇಷವಾಗಿದೆ. ಮೆನ್ಯುನಲ್ಲಿ ಇಟಾಲಿಯನ್, ಚೈನೀಸ್, ಅಮೇರಿಕನ್, ದಕ್ಷಿಣ ಭಾರತೀಯ, ಮೆಕ್ಸಿಕನ್, ರಾಜಸ್ಥಾನಿ, ಪಂಜಾಬಿ ಮತ್ತು ಗುಜರಾತಿ ಪಾಕಪದ್ಧತಿಗಳನ್ನು ಒಳಗೊಂಡಿದೆ. ಸಿಹಿತಿಂಡಿಗಳಲ್ಲಿ ಜೈಸಲ್ಮೇರ್‌ನ ಘೋಟ್ವಾನ್ ಲಾಡೂ ಇರುತ್ತದೆ. ಇನ್ನು ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರೂ ಮೆಹೆಂದಿ ಸಮಾರಂಭದ ಆಚರಣೆಯಲ್ಲಿ ಡ್ಯಾನ್ಸ್ ಫ್ಲೋರ್‌ನಲ್ಲಿ ಕುಣಿದು ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ಟೈಟಾನಿಕ್ ಸಿನಿಮಾ : 25 ವರ್ಷಗಳ ಬಳಿಕ ನಾಯಕನ ಸಾವಿನ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಜೇಮ್ಸ್ ಕ್ಯಾಮರನ್

Kiara Advani – Sidharth Malhotra Wedding : Yellow Shastra video is going viral

Comments are closed.