Jewelery staff murder case: ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಕೊಲೆ ಪ್ರಕರಣ: ಹಂತಕನ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ ಪೊಲೀಸರು

ಮಂಗಳೂರು: (Jewelery staff murder case) ಚಿನ್ನ ಖರೀದಿಸುವ ನೆಪದಲ್ಲಿ ಮಂಗಳೂರು ಜ್ಯುವೆಲ್ಲರಿ ಅಂಗಡಿಗೆ ಬಂದು ಸಿಬ್ಬಂದಿಗೆ ಚಾಕುವಿನಿಂದ ಕೊಲೆ ಮಾಡಿರುವ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸರು ಚುರುಕುಗೊಳಿಸಿದ್ದಾರೆ. ಶಂಕಿತನ ಸಿಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಪೋಟೋವನ್ನು ರಿಲೀಸ್ ಮಾಡಿರುವ ಪೊಲೀಸರು ಹಂತಕನ ಬಗ್ಗೆ ಸುಳಿವು ನೀಡುವಂತೆ ಸಾರ್ವಜನಿಕರ ಸಹಕಾರಿ ಕೋರಿದ್ದಾರೆ. ಈ ಕುರಿತು ಪ್ರಕಟಣೆಯೊಂದನ್ನು ಮಂಗಳೂರು ನಗರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಫೆಬ್ರವರಿ 3 ರಂದು ಮಧ್ಯಾಹ್ನ ಮಂಗಳೂರು ಉತ್ತರ ಪೊಲೀಸ್‌ ಠಾಣಾ ವ್ಯಾಪ್ತಿಯ ಬಲ್ಮಠ ರಸ್ತೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್‌ ಗೆ ಈ ವ್ಯಕ್ತಿಯು ಚಿನ್ನ ಖರೀದಿಸುವ ಗ್ರಾಹಕರ ರೀತಿಯಲ್ಲಿ ಬಂದಿದ್ದು, ಜ್ಯುವೆಲ್ಲರಿ ಶಾಪ್‌ ನಲ್ಲಿದ್ದ ಸಿಬ್ಬಂದಿ ರಾಘವೇಂದ್ರ ಆಚಾರ್‌ ಎನ್ನುವವರನ್ನು ಚೂರಿಯಿಂದ ಇರಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಘಟನೆಯ ಬೆನ್ನಲ್ಲೇ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ವಿಶೇಷ ತಂಡವನ್ನು ರಚಿಸಿದ್ದರು. ಸ್ಥಳೀಯ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾದ ಚಿತ್ರಣಗಳಲ್ಲಿ ಈ ವ್ಯಕ್ತಿಯ ಚಿತ್ರವು ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯ ಎಸಿಪಿ ಸಿಸಿಬಿ ಪಿಎ ಹೆಗಡೆ- 9945054333, ಎಸಿಪಿ ಕೇಂದ್ರ ಉಪವಿಭಾಗದ ಮಹೇಶ್‌ ಕುಮಾರ್‌- 9480805320 ಅವರ ಮೊಬೈಲ್‌ ಸಂಖ್ಯೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಘಟನೆಯ ವಿವರ:
ಮಂಗಳೂರು  ನಗರದ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪದಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವರನ್ನು ಮುಸುಕುದಾರಿಯೊಬ್ಬರು ಹಾಡುಹಗಲೇ ಚೂರಿ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಅಂಗಡಿಯ ಮಾಲೀಕ ಊಟ ಮುಗಿಸಿಕೊಂಡು ಅಂಗಡಿಗೆ ಬಂದಾಗ ಅವರ ಕಾರು ಪಾರ್ಕಿಂಗ್‌ ಮಾಡುವ ಸ್ಥಳದಲ್ಲಿ ಅಡ್ಡವಾಗಿ ಬೈಕ್‌ ನಿಲ್ಲಿಸಲಾಗಿತ್ತು. ಅದನ್ನು ಸರಿಪಡಿಸುವಂತೆ ಮಾಲೀಕರು ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಆಗ ಸಿಬ್ಬಂದಿ ಕಿರುಚಾಡಿದ್ದಾರೆ. ಈ ಸಂದರ್ಭ ಮಾಲೀಕರು ಓಳಗೆ ಹೋದಾಗ ಅಲಲಿಂದ ಆರೋಪಿ ಓಡಿ ಹೋಗಿದ್ದಾನೆ. ಮಾಲೀಕರು ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : Students sick-food poisoning: ಮಂಗಳೂರು: ವಿಷಾಹಾರ ಸೇವನೆ 100ಕ್ಕೂ ಅಧಿಕ ವಿಧ್ಯಾರ್ಥಿನಿಯರು ಅಸ್ವಸ್ಥ

ಇದನ್ನೂ ಓದಿ : Udupi Plastic road experiment: ಉಡುಪಿಯಲ್ಲಿ ಯಶಸ್ವಿ ಕಂಡ ಪ್ಲಾಸ್ಟಿಕ್‌ ರಸ್ತೆ ಪ್ರಯೋಗ

ಘಟನೆಯ ಕುರಿತು ಅಂಗಡಿ ಮಾಲೀಕರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಡಿಸಿಪಿ ಅಂಶುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕೃತ್ಯ ದಾಖಲಾಗಿದ್ದು, ಜ್ಯುವೆಲ್ಲರಿಯಿಂದ ಓರ್ವ ಮುಸುಕುಧಾರಿ ಹೊರಗೆ ಬರುವುದು ಕಂಡು ಬಂದಿದೆ. ಇದೇ ಜಾಡನ್ನು ಹಿಡಿದು ಪೊಲೀಸರು ಆರೋಪಿಯ ಪತ್ತೆಗೆ ಇಳಿದಿದ್ದು, ಆರೋಪಿಯ ಭಾವಚಿತ್ರ ಪತ್ತೆಯಾಗಿದೆ

Jewelery staff murder case: Mangaluru Jewelery staff murder case: Police seek public’s cooperation to find the killer

Comments are closed.