ಮಂಗಳವಾರ, ಏಪ್ರಿಲ್ 29, 2025
HomeCinemaರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ : ಕಿಚ್ಚ ಈ ಬಗ್ಗೆ ಹೇಳಿದ್ದೇನು ?

ರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ : ಕಿಚ್ಚ ಈ ಬಗ್ಗೆ ಹೇಳಿದ್ದೇನು ?

- Advertisement -

Kiccha Sudeep Entry to Politics : ಪ್ರತಿ ಭಾರಿ ಎಲೆಕ್ಷನ್ (Elections) ಬಂದಾಗಲೂ ಸ್ಟಾರ್‌ ಗಳು ರಾಜಕಾರಣಕ್ಕೆ ಎಂಟ್ರಿ ಕೊಡೋ ಸಂಗತಿ ಚರ್ಚೆಯಾಗುತ್ತಲೇ‌ ಇರುತ್ತೆ. ಅದರಲ್ಲೂ ನಟ ಸುದೀಪ್‌ (Kiccha Sudeep) , ದರ್ಶನ್ ತುಗೂದೀಪ ( Darshan Thoogudeepa)  ಹಾಗೂ ಯಶ್ (Yash) ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ ಸದಾ ನಡೆಯುತ್ತಲೇ ಇರುತ್ತೆ. ಇನ್ನೇನು ಲೋಕಸಭಾ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದು, ಮತ್ತೊಮ್ಮೆ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ.

Kiccha Sudeep Entry to Politics, What did actor Sudeep say about this
Image Credit to Original Source

ನಟ,ನಿರೂಪಕ,ನಿರ್ಮಾಪಕ ಹಾಗೂ ಕ್ರಿಕೆಟರ್ ಹೀಗೆ ಬಹುಮುಖ‌ ಪ್ರತಿಭೆಯಾಗಿ‌ ಗುರುತಿಸಿಕೊಂಡಿರೋ ಸುದೀಪ್ ಲಕ್ಷಾಂತರ‌ಅಭಿಮಾನಿಗಳ ಆರಾಧ್ಯದೈವ. ಹೀಗಾಗಿ ಸಹಜವಾಗಿಯೇ ಸುದೀಪ್ ತಮ್ಮ ಪರ ನಿಂತರೆ ಅಭಿಮಾನವೆಲ್ಲ ಮತವಾಗಿ ಬದಲಾಗುತ್ತೆ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಇದೇ ಕಾರಣಕ್ಕೆ ರಾಜಕೀಯ ಪಕ್ಷಗಳು ನಟ-ನಟಿಯರನ್ನು ಪಕ್ಷಕ್ಕೆ‌ ಸೇರಿಸಿಕೊಳ್ಳಲು ಹಾಗೂ ಪ್ರಚಾರಕ್ಕೆ ಬಳಸಿಕೊಳ್ಳಲು ಸಿದ್ಧವಾಗಿಯೇ ಇರುತ್ತಾರೆ.

ಇನ್ನು ರಾಜಕಾರಣ ಹಾಗೂ ಸಿನಿಮಾಕ್ಕೆ ಗಾಢವಾದ ನಂಟಿದ್ದು, ಬಣ್ಣದ ಲೋಕದ ಹಲವು ಗಣ್ಯರು ರಾಜಕೀಯದಲ್ಲಿ‌ ಮಿಂಚಿದ್ದಾರೆ ಮತ್ತು ಮಿಂಚುತ್ತಾ ಇದ್ದಾರೆ. ಈಗ ಸುದೀಪ್ ರಾಜಕೀಯಕ್ಕೆ ಬರ್ತಾರೆ ಎಂಬ ಚರ್ಚೆ ಜೋರಾಗಿದೆ. ಹಾಗಂತ ಸುದೀಪ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಚರ್ಚೆ ಇಂದು‌ ನಿನ್ನೆಯದಲ್ಲ. ಈ‌ ಹಿಂದಿನಿಂದಲೂ ಸುದೀಪ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಮಾತಿತ್ತು. ಮಾತ್ರವಲ್ಲ ವಾಲ್ಮೀಕಿ ಜನಾಂಗದ ಮತಗಳು ಜಾಸ್ತಿ ಇರೋ ಚಿತ್ರದುರ್ಗದಿಂದ ಕಣಕ್ಕಿಳಿತಾರೇ ಎಂಬ ವದಂತಿಗಳು ಹಬ್ಬಿದ್ದವು.

ಇದನ್ನೂ ಓದಿ : ಡಾಲಿ ಧನಂಜಯ ವಿದ್ಯಾಪತಿಗೆ ಹಿಟ್ಲರ್ ಕಲ್ಯಾಣ ಖ್ಯಾತಿಯ ಮಲೈಕಾ ವಸೂಪಾಲ್ ನಾಯಕಿ

ಅಷ್ಟಕ್ಕೂ ಸುದೀಪ್ ಗೆ ರಾಜಕೀಯದವರ ಒಡನಾಟ ಹೊಸದೇನಲ್ಲ. ಬಸವರಾಜ ಬೊಮ್ಮಾಯಿಯಿಂದ ಆರಂಭಿಸಿ ಡಿ.ಕೆ.ಶಿವಕುಮಾರ್ ತನಕ ಎಲ್ಲರೊಂದಿಗೂ ಸುದೀಪ್ ಆತ್ಮೀಯವಾದ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಈಗ ಮತ್ತೊಮ್ಮೆ ಸುದೀಪ್ ರಾಜಕೀಯಕ್ಕೆ ಬರ್ತಾರಾ ಅನ್ನೋ ಚರ್ಚೆ ಆರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ್ ಬೊಮ್ಮಾಯಿ, ಶ್ರೀರಾಮುಲು‌ ಹಾಗೂ ಸೋಮಣ್ಣ ಸೇರಿದಂತೆ ಹಲವರ ಪರ ಸುದೀಪ್ ಭರ್ಜರಿ ಪ್ರಚಾರ ನಡೆಸಿದ್ದರು.

Kiccha Sudeep Entry to Politics, What did actor Sudeep say about this
Image Credit to Original Source

ಈ ಭಾರಿಯೂ ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ಬೊಮ್ಮಾಯಿ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗ್ತಿದೆ. ಇದರ ಮಧ್ಯೆ ಪಕ್ಷಕ್ಕೆ ಅಧಿಕೃತ ಸೇರ್ಪಡೆ ವಿಚಾರಕ್ಕೆ ಸ್ವತಃ ಸುದೀಪ್ ಉತ್ತರ ನೀಡಿದ್ದಾರೆ. ಪ್ರತಿಭಾರಿಯೂ ಇಂತಹದೊಂದು ವಿಚಾರ ಚರ್ಚೆಗೆ ಬರುತ್ತೆ. ಆದರೆ ನಾನಂತೂ ಈ ಬಗ್ಗೆ‌ ಇನ್ನೂ ವಿಚಾರ ಮಾಡಿಲ್ಲ. ಈ ಹಿಂದೆ ಕೆಲವು ಆತ್ಮೀಯರ ಪರ ಪ್ರಚಾರಕ್ಕೆ ಹೋಗಿದ್ದೆ. ಈ ಭಾರಿಯೂ ಹೋಗ್ತೇನೆ. ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗೋದಾದರೇ ಅಧಿಕೃತವಾಗಿ ಪ್ರಕಟಿಸಿಯೇ ಹೋಗುತ್ತೇನೆ ಎಂದರು.

ಇದನ್ನೂ ಓದಿ : ಒಂದು ಸರಳ ಪ್ರೇಮಕತೆ ಸಿನಿಮಾಕ್ಕೆ ಸಾಥ್‌ ಕೊಟ್ಟ ರಮ್ಯ, ಸೂಫಿ ಶೈಲಿಯ ಹಾಡು ರಿಲೀಸ್‌

ಅಲ್ಲದೇ ನಾನು ಈಗ ಕ್ರಿಕೆಟ್ ಕ್ರಿಕೆಟ್ ಎಂದು ಸಿನಿಮಾದಿಂದಲೇ‌ ಬ್ರೇಕ್ ಪಡೆದಿದ್ದೇನೆ‌. ಹೀಗೆ ಸಿನಿಮಾ ಬಿಟ್ಟು ಬರಿ ಕ್ರಿಕೆಟ್, ರಾಜಕೀಯ ಎಂದು ಓಡಾಡುತ್ತಿದ್ದರೇ ಅಭಿಮಾನಿಗಳು ಮನೆಗೆ ನನಗೆ ಹೊಡೆಯುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಅಲ್ಲದೇ ರಾಜಕೀಯಕ್ಕೆ ಬರೋದೇ ಇಲ್ಲ ಎಂಬ ಪ್ರಶ್ನೆ ಇಲ್ಲ. ಆದರೆ ಸದ್ಯಕ್ಕಂತೂ ಅಂತಹ ಯಾವುದೇ ಯೋಚನೆ ನನ್ನ ಮುಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ನಿರೂಪ್‌ ಭಂಡಾರಿ ಜೊತೆಯಾದ ಸಾಯಿ ಕುಮಾರ್‌, ಮೋಡಿ ಮಾಡುತ್ತಾ ರಂಗಿತರಂಗ ಜೋಡಿ

ಸದ್ಯ ಸುದೀಪ್ ಮ್ಯಾಕ್ಸ್‌‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಇನ್ನು 15 ದಿನಗಳ ಶೂಟಿಂಗ್ ಮುಗಿದರೇ ಮ್ಯಾಕ್ಸ್ ಸೆಟ್ ನಲ್ಲಿ ಕುಂಬಳಕಾಯಿ ಒಡೆಯಬಹುದು. ಎಲ್ಲ ಅಂದುಕೊಂಡಂತೆ‌ ಆದರೆ ಮೇನಲ್ಲಿ ಮ್ಯಾಕ್ಸ್ ಸಿನಿಮಾ ತೆರೆಗೆ ಬರಲಿದೆ ಎಂದು ಸುದೀಪ್ ಹೇಳಿದ್ದಾರೆ.

Kiccha Sudeep Entry to Politics, What did actor Sudeep say about this?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular