Kiccha Sudeep-Venkat Prabhu: ತಮಿಳಿನ ಸೋಲೇ ಇಲ್ಲದ ನಿರ್ದೇಶಕನ ಜತೆ ಕಿಚ್ಚ ಸುದೀಪ್ ಮುಂದಿನ ಚಿತ್ರ

(Kiccha Sudeep-Venkat Prabhu) ಕನ್ನಡದ ಸ್ಟಾರ್‌ ನಟರು ನಟಿಸಲಿರುವ ಮುಂದಿನ ನಾಲ್ಕೈದು ಸಿನಿಮಾಗಳು ಯಾವುವು ಎಂದು ಅಭಿಮಾನಿಗಳಿಗೆ ಸುಲಭವಾಗಿ ತಿಳಿದುಬಿಡುತ್ತದೆ. ನಟರ ಹುಟ್ಟುಹಬ್ಬದ ದಿನದಂದೇ ನಿರ್ದೇಶಕರು ನಿರ್ಮಾಪಕರು ಆ ನಟನ ಜೊತೆ ಮಾಡಲಿರುವ ಚಿತ್ರದ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ತಿಳಸಿ ಬಿಡುತ್ತಾರೆ. ಆದರೆ ಇದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ವಿಚಾರದಲ್ಲಿ ನಡೆಯುತ್ತಿಲ್ಲ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈಗಾಗಲೇ ಸ್ಟಾರ್‌ಗಳಾಗಿ ಬೆಳೆದಿದ್ದು ತಮ್ಮ ಮೇಲೆ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇರುವ ಕಾರಣ ಕಥೆ ಆಯ್ಕೆ ಮಾಡುವಲ್ಲಿ ಭಾರೀ ಜಾಗರೂಕತೆ ವಹಿಸುತ್ತಿದ್ದಾರೆ. ಹೀಗಾಗಿಯೇ ಇವರ ಮುಂದಿನ ಚಿತ್ರಗಳ ಘೋಷಣೆ ತಡವಾಗುತ್ತಿದೆ ಎನ್ನಬಹುದಾಗಿದೆ. ಯಶ್‌ ಮುಂದಿನ ಚಿತ್ರ ಯಾರ ಜೊತೆ ಮಾಡಬಹುದು ಎಂದು ಹಲವರು ಚರ್ಚೆಗಳನ್ನು ನಡೆಸುತ್ತಿದ್ದು ಹಲವು ನಿರ್ದೇಶಕರ ಹೆಸರುಗಳು ಕೇಳಿಬರುತ್ತಿದೆ. ಇನ್ನೂ ಕಿಚ್ಚ ಸುದೀಪ್‌ ವಿಷಯದಲ್ಲೂ ಕೂಡ ಇದೆ ರೀತಿಯಾಗಿ ನಡೆಯುತ್ತಿದೆ.

ಕಿಚ್ಚ ಸುದೀಪ್‌ ತಮಿಳಿನ ಖ್ಯಾತ ನಿರ್ದೇಶಕರೊಬ್ಬರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿಗಳು ಕಳೆದ ವರ್ಷದಲ್ಲೇ ಕೇಳಿ ಬಂದಿದ್ದವು. ಇದೀಗ ಅದೇ ಸುದ್ದಿ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬಿದ್ದಿದ್ದು, ಸುದೀಪ್‌ ಜೊತೆ ಸಿನಿಮಾ ಮಾಡುವುದು ಖಚಿತವಾಗಿದ್ದು, ಸ್ಕ್ರಿಪ್ಟ್‌ ವರ್ಕ್‌ ಭರದಿಂದ ಸಾಗುತ್ತಿದೆ ಎಂದು ನಿರ್ದೇಶಕರ ಆಪ್ತ ವಲಯಗಳು ಮಾಹಿತಿಯನ್ನು ಬಿಟ್ಟುಕೊಟ್ಟಿವೆ.

ಕಳೆದ ವರ್ಷದಿಂದ ಸುದೀಪ್‌ ಹಾಗೂ ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್‌ ಪ್ರಭೂ ಕಾಂಬಿನೇಷನ್‌ ನಲ್ಲಿ ಚಿತ್ರ ಮೂಡಿ ಬರಲಿದೆ ಎಂಬ ವದಂತಿಗಳು ಹರಿದಾಡಿದ್ದವು. ಇನ್ನೂ ಕೆಲವ ದಿನಗಳ ಹಿಂದಷ್ಟೇ ಸುದೀಪ್‌ ಮನೆಗೆ ಭೇಟಿ ನೀಡಿದ್ದ ವೆಂಕಟ್‌ ಪ್ರಭು ಸಿನಿಮಾದ ಬಗ್ಗೆ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಸದ್ಯ ವೆಂಕಟ್‌ ಪ್ರಭು ಅವರು ತೆಲುಗಿನಲ್ಲಿ ನಾಗ ಚೈತನ್ಯ ನಟನೆಯ ಕಸ್ಟಡಿ ಸಿನಿಮಾ ನಿರ್ದೇಶನವನ್ನು ಮುಗಿಸಿದ್ದು, ಕಿಚ್ಚನ ಮುಂದಿನ ಸಿನಿಮಾಕ್ಕಾಗಿ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Subi Suresh passed away: ಮಲಯಾಳಂ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ ನಿಧನ

ಇದನ್ನೂ ಓದಿ : 1000 ಕೋಟಿ ಕ್ಲಬ್‌ ಸೇರಿ ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ‘ಪಠಾಣ್’

ವೆಂಕಟ್ ಪ್ರಭು ಇಲ್ಲಿಯವರೆಗೂ ತಾವು ನಿರ್ದೇಶಿಸಿರುವ ಸ್ಟಾರ್ ನಟರ ಚಿತ್ರಗಳಲ್ಲಿ ಒಮ್ಮೆಯೂ ಎಡವಿಲ್ಲ. ಸ್ಟಾರ್ ನಟರ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಾಗಲೆಲ್ಲಾ ವಾವ್ ಎನಿಸುವಂತಹ ಸಿನಿಮಾಗಳನ್ನೇ ಮಾಡಿರುವ ವೆಂಕಟ್ ಪ್ರಭು ಕಿಚ್ಚ ಸುದೀಪ್‌ಗೂ ಸಹ ಅಂತಹದ್ದೇ ಸಿನಿಮಾ ಕಟ್ಟಿಕೊಡಲಿದ್ದಾರೆ. ಇನ್ನು ಮಂಕಾತ ಹಾಗೂ ಮಾನಾಡು ರೇಂಜಿನ ಚಿತ್ರವನ್ನೇನಾದರೂ ವೆಂಕಟ್‌ ಪ್ರಭು ಕಿಚ್ಚ ಸುದೀಪ್‌ಗೆ ನಿರ್ದೇಶಿಸಿದರೆ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಖಚಿತ.

Kiccha Sudeep-Venkat Prabhu: Kiccha Sudeep’s next film with Tamil’s undefeated director

Comments are closed.