Aadhaar registration for own land: ಸ್ವಂತ ಭೂಮಿಗೂ ಆಧಾರ್‌ ನೊಂದಣಿ ಅಗತ್ಯ: ಕೆಂದ್ರ ಸರಕಾರದ ಮಹತ್ವದ ಘೋಷಣೆ

ನವದೆಹಲಿ: (Aadhaar registration for own land) ಭಾರತದ ವಿಶಿಷ್ಟ ಗುರುತಿನ ದಾಖಲೆಯಿಂದ ನೀಡಲಾದ ಆಧಾರ್‌ ಕಾರ್ಡ್‌ ಎಲ್ಲಾ ಸರಕಾರಿ ಕೆಲಸಗಳಿಗೂ ಬೇಕಾಗುವ ಅಗತ್ಯ ದಾಖಲೆಯಾಗಿದೆ. ಈ ಹಿನ್ನಲೆಯಲ್ಲಿ ಇತರೆ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸರ್ಕಾರ ಪದೇ ಪದೇ ಸೂಚಿಸುತ್ತಿರುತ್ತದೆ. ಆದರೆ ಇದೀಗ ಸರ್ಕಾರ, ಭೂಮಿಗೂ ಆಧಾರ್ ಸಂಖ್ಯೆ ಅಗತ್ಯ ಎಂದು ಹೇಳಿದೆ.

ಹೌದು. ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಈ ನಿಯಮವನ್ನು ಜಾರಿಗೆ ತರಲಿದೆ. ಈ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು. ಮಾಹಿತಿ ಪ್ರಕಾರ, ಭೂ ದಾಖಲೆಗಳನ್ನು ಡಿಜಿಟಲ್ ಆಗಿ ಇರಿಸಲು ಐಪಿ ಆಧಾರಿತ ತಂತ್ರಜ್ಞಾನವನ್ನು ಬಳಸಲಾಗುವುದು. ಇಂತಹ ಡಿಜಿಟಲ್ ಭೂ ದಾಖಲೆಗಳಿಂದ ಜನರಿಗೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ ಎನ್ನಲಾಗಿದೆ. ಇದನ್ನು 3C ಸೂತ್ರದ ಅಡಿಯಲ್ಲಿ ವಿತರಿಸಲಾಗುವುದು. ಇದರ ಅಡಿಯಲ್ಲಿ ಸೆಂಟ್ರಲ್ ಆಫ್ ರೆಕಾರ್ಡ್, ಕಲೆಕ್ಷನ್ ಆಫ್ ರೆಕಾರ್ಡ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಭೂಮಿ ನೋಂದಣಿಯಲ್ಲಿ 14 ಅಂಕಿಗಳ ULPIN ಸಂಖ್ಯೆಯನ್ನು ನೀಡಲಾಗುವುದು. ಇದು ನಿಮ್ಮ ಜಮೀನಿನ ಆಧಾರ್ ಸಂಖ್ಯೆಯಾಗಿರುತ್ತದೆ. ಈ ಭೂಮಿ ಆಧಾರ್ ಸಂಖ್ಯೆಯೊಂದಿಗೆ ಒಂದೇ ಕ್ಲಿಕ್‌ನಲ್ಲಿ ನಿಮ್ಮ ಭೂಮಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮನೆಯಿಂದಲೇ ಪರಿಶೀಲಿಸಬಹುದು. ಇದಲ್ಲದೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಅನೇಕ ಯೋಜನೆಗಳಿಗೆ ಈ ULPIN ಅನ್ನು ಬಳಸಿಕೊಳ್ಳಬಹುದು. ಅಲ್ಲದೇ ULPIN ಸಂಖ್ಯೆಯೊಂದಿಗೆ ದೇಶದಲ್ಲಿ ಎಲ್ಲಿ ಬೇಕಾದರೂ ಭೂಮಿಯನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು. ಈ ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲ ಇರುವುದಿಲ್ಲ.

ಇದನ್ನೂ ಓದಿ : Wheat price: ಗೋಧಿ ಮತ್ತು ಹಿಟ್ಟಿನ ಬೆಲೆ ಬಗ್ಗೆ ಮೋದಿ ಸರಕಾರದಿಂದ ಮಹತ್ವದ ನಿರ್ಧಾರ

ಇದನ್ನೂ ಓದಿ : UK visa for indians: ಗುಡ್ ನ್ಯೂಸ್ : ಭಾರತೀಯರಿಗೆ 2,400 ವೀಸಾ ಪ್ರಕಟಿಸಿದ ಯುಕೆ

ಇನ್ನೂ ಈ ULPIN ಸಂಖ್ಯೆಯ ಮೂಲಕ ಜಮೀನು ಖರೀದಿದಾರ ಮತ್ತು ಮಾರಾಟಗಾರರ ಬಗ್ಗೆ ಎಲ್ಲಾ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ನಿಮ್ಮಲ್ಲಿರುವ ಜಮೀನು ವಿಭಜನೆಯಾದರೆ ಆಗ ಅದರ ಆಧಾರ್ ಸಂಖ್ಯೆ ಕೂಡಾ ಬೇರೆಯಾಗಲಿದೆ. ಡಿಜಿಟಲ್ ದಾಖಲೆಯಿಂದಾಗಿ ಮೊದಲು ಜಮೀನಿನ ವಾಸ್ತವ ಸ್ಥಿತಿ ತಿಳಿಯಲಿದೆ. ಏಕೆಂದರೆ ಡ್ರೋನ್ ಕ್ಯಾಮೆರಾದ ಸಹಾಯದಿಂದ ಇಲ್ಲಿ ಭೂಮಿಯನ್ನು ಅಳೆಯಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ತಪ್ಪಾಗುವ ಸಾಧ್ಯತೆಗಳು ತೀರಾ ಕಡಿಮೆ. ಡಿಜಿಟಲ್ ದಾಖಲೆಯ ನಂತರ, ನಗರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗುವ ಮೂಲಕ ತನ್ನ ಭೂಮಿಯ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

Aadhaar registration for own land: Aadhaar registration is necessary for own land too: Central Government’s important announcement

Comments are closed.