Hoysala movie : ಧನಂಜಯ್ ಹೊಯ್ಸಳ ಸಿನಿಮಾಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

ನಟ ಧನಂಜಯ್ ಅವರ ಸಿನಿ ಜೀವನದ ಮೈಲಿಗಲ್ಲಿನ ಸಿನಿಮಾ ಹೊಯ್ಸಳದ (Hoysala movie) ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಹೌದು, ಹೊಯ್ಸಳ ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾವಾಗಿದ್ದು, ಸಿನಿಮಾ ಮಾರ್ಚ್ 30ರಂದು ತೆರೆಗೆ ಬರಲಿದೆ. ಇದೀಗ ನಟ ಧನಂಜಯ್‌ ಅಭಿನಯದ ಹೊಯ್ಸಳ ಸಿನಿಮಾಕ್ಕೆ ನಟ ಕಿಚ್ಚ ಸುದೀಪ್‌ ಸಾಥ್‌ ನೀಡಿದ್ದಾರೆ.

ವಿಜಯ್ ಎನ್ ನಿರ್ದೇಶನದ ಈ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಮ್ಮ ಒಡೆತನದ ಕೆಆರ್‌ಜಿ ಸ್ಟುಡಿಯೊಸ್ ಅಡಿಯಲ್ಲಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಕಳೆದ ವರ್ಷ ತೆರೆಕಂಡ ಧನಂಜಯ್ ನಟನೆಯ ಯಾವ ಸಿನಿಮಾಗಳೂ ಸಹ ಹುಟ್ಟುಹಾಕಿದ್ದ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಹೊಯ್ಸಳ ಸಿನಿಮಾ ಧನಂಜಯ್ ಯಶಸ್ಸಿನ ಹಾದಿಗೆ ಮರಳುವಂತೆ ಮಾಡುವುದು ಖಚಿತ ಎಂಬ ಅಭಿಪ್ರಾಯ ಗಾಂಧಿನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ. ಇನ್ನು ದಿನದಿಂದ ದಿನಕ್ಕೆ ನಿರೀಕ್ಷೆ ಹುಟ್ಟಿಸುತ್ತಿರುವ ಈ ಸಿನಿಮಾದಲ್ಲಿ ಧನಂಜಯ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗುರುದೇವ್ ಎಂಬ ಪಾತ್ರ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ : ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದ ರಾಮ್ ಚರಣ್ : ದಿನೇ ದಿನೇ ಹೆಚ್ಚಾಗ್ತಿದೆ ಮೆಗಾ ಪವರ್ ಸ್ಟಾರ್ ಕ್ರೇಜ್

ಇದನ್ನೂ ಓದಿ : Venkat Bharadwaj : ವೆಂಕಟ್ ಭಾರದ್ವಾಜ್ ನಿರ್ದೇಶನ ನಗುವಿನ ಹೂಗಳ ಮೇಲೆ ಸಿನಿಮಾದ ಮೊದಲ ಹಾಡು ರಿಲೀಸ್

ಇದನ್ನೂ ಓದಿ : Vani Jayaram passed away : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಇದೇ ಪಾತ್ರದ ಗ್ಲಿಂಪ್ಸ್ ಅನ್ನು ನಾಳೆ (ಫೆಬ್ರವರಿ 5 ) ಬಿಡುಗಡೆ ಮಾಡಲು ಸಿನಿತಂಡ ತೀರ್ಮಾನಿಸಿದ್ದು, ಈ ವಿಡಿಯೊವನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಬೆಳಗ್ಗೆ 9.27ಕ್ಕೆ ಆನ್‌ಲೈನ್‌ನಲ್ಲಿ ಕಿಚ್ಚ ಸುದೀಪ್ ಗ್ಲಿಂಪ್ಸ್ ಆಫ್ ಗುರುದೇವ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ಈ ವಿಡಿಯೊ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಕ್ಕೆ ಯಾರು ನಿರ್ದೇಶನ ಮಾಡಲಿದ್ದಾರೆ, ಯಾರು ಬಂಡವಾಳ ಹೂಡಲಿದ್ದಾರೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿರುವಾಗಲೇ ಕೆಆರ್‌ಜಿ ಸ್ಟುಡಿಯೊಸ್ ಮತ್ತು ಕಿಚ್ಚ ಸುದೀಪ್ ಹೆಸರು ಪದೇ ಪದೇ ಒಟ್ಟಿಗೆ ಕೇಳಿ ಬರುತ್ತಿರುವುದು ಇದೇ ಬ್ಯಾನರ್ ಕಿಚ್ಚನ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಾ ಎಂಬ ಅನುಮಾನ ಮೂಡಲು ಸಹ ಕಾರಣವಾಗಿದೆ.

Kichcha Sudeep supported Dhananjay Hoysala movie

Comments are closed.