ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ 6 ಟೆಕ್ನಿಕಲ್‌ ಅಡ್ವೈಸರ್‌, ಶುಗರ್‌ ಇಂಜಿನಿಯರ್‌ ಹುದ್ದೆಗಳ ಭರ್ತಿಗೆ (Nijalingappa Sugar institute Recruitment 2023) ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಸಂಬಂಧಪಟ್ಟಂತೆ ಬೇಕಾಗುವ ಇತರೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಬೇಕಾಗಿದೆ.

ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರ :
ಸಂಸ್ಥೆಯ ಹೆಸರು : ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆ
ಹುದ್ದೆಗಳ ಸಂಖ್ಯೆ : 6 ಹುದ್ದೆಗಳು
ಹುದ್ದೆಯ ಹೆಸರು : ಟೆಕ್ನಿಕಲ್‌ ಅಡ್ವೈಸರ್‌, ಶುಗರ್‌ ಇಂಜಿನಿಯರ್
ಅರ್ಜಿ ಸಲ್ಲಿಸುವ ವಿಧಾನ : ಆಫ್‌ಲೈನ್‌

ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳ ಹುದ್ದೆವಾರು ವಿದ್ಯಾರ್ಹತೆ ವಿವರ :
ತಾಂತ್ರಿಕ ಸಲಹೆಗಾರ ಹುದ್ದೆಗಳಿಗೆ ಅಭ್ಯರ್ಥಿಗಳು ಸಕ್ಕರೆ ತಂತ್ರಜ್ಞಾನದಲ್ಲಿ ವಿಜ್ಞಾನ/ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಎಮ್‌ಎಸ್‌ಸಿ ಸಕ್ಕರೆ ತಂತ್ರಜ್ಞಾನದಲ್ಲಿ ಉತ್ತೀರ್ಣರಾಗಿರಬೇಕು.
ಶುಗರ್‌ ಟೆಕ್ನಾಲಜಿಸ್ಟ್‌ ಹುದ್ದೆಗಳಿಗೆ ಅಭ್ಯರ್ಥಿಗಳು ವಿಜ್ಞಾನ/ೆಂಜಿನಿಯರಿಂಗ್‌ನಲ್ಲಿ ಪದವಿ, ಸಕ್ಕರೆ ತಂತ್ರಜ್ಞಾನದಲ್ಲಿ ಪಿಜಿ ಡಿಪ್ಲೋಮಾ, ಎಮ್‌ಎಸ್‌ಸಿ ಸಕ್ಕರೆ ತಂತ್ರಜ್ಞಾನದಲ್ಲಿ ಉತ್ತೀರ್ಣರಾಗಿರಬೇಕು.
ತಾಂತ್ರಿಕ ಸಲಹೆಗಾರ ಹುದ್ದೆಗಳಿಗೆ ಅಭ್ಯರ್ಥಿಗಳು ಶುಗರ್‌ ಎಂಜಿನಿಯರಿಂಗ್‌ ಮತ್ತು ಸಹ ಜನರೇಷನ್‌ ಹಾಗೂ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಶುಗರ್‌ ಇಂಜಿನಿಯರ್‌ ಹುದ್ದೆಗಳಿಗೆ ಅಭ್ಯರ್ಥಿಗಳು ಮೆಕ್ಯಾನಿಕಲ್‌/ ಎಲೆಕ್ಟ್ರಿಕಲ್‌ನಲ್ಲಿ ಬಿ.ಇ ಮುಗಿಸಿರಬೇಕು.
ತಾಂತ್ರಿಕ ಸಲಹೆಗಾರ ಹುದ್ದೆಗಳಿಗೆ ಅಭ್ಯರ್ಥಿಗಳು ಆಲ್ಕೋಹಾಲ್‌ ತಂತ್ರಜ್ಞಾನದಲ್ಲಿ ವಿಜ್ಞಾನ/ಎಂಜಿನಿಯರಿಂಗ್‌ನಲ್ಲಿ ಪದವಿ, ಎಂಎಸ್‌ಸಿ ಆಲ್ಕೋಹಲ್‌ನಲ್ಲಿ ಉತ್ತೀರ್ಣರಾಗಿರಬೇಕು.
ಆಲ್ಕೋಹಾಲ್‌ ಟೆಕ್ನಾಲಜಿಸ್ಟ್‌ ಹುದ್ದೆಗಳಿಗೆ ಅಭ್ಯರ್ಥಿಗಳು ವಿಜ್ಞಾನದಲ್ಲಿ ಪದವಿ, ಇಂಡಸ್ಟ್ರಿಯಲ್‌ ಫರ್ಮೆಂಟೇಶನ್‌ ಮತ್ತು ಆಲ್ಕೋಹಾಲ್‌ ತಂತ್ರಜ್ಞಾನದಲ್ಲಿ ಪಿಜಿ ಡಿಪ್ಲೋಮಾ, ಎಮ್‌ಎಸ್‌ಸಿ (ಆಲ್ಕೋಹಾಲ್‌ ಟೆಕ್ನಾಲಜಿ/ಬಯೋ-ಕೆಮಿಸ್ಟ್ರೀ)ಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :
ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 55 ವರ್ಷ ವಯಸ್ಸು ಮೀರಿರಬಾರದು ಎಂದು ತಿಳಿಸಲಾಗಿದೆ.

ವೇತನ ಶ್ರೇಣಿ :
ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾಸಿಕ ವೇತನ ರೂ.52650 ರಿಂದ 217100 ರೂ. ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ :
ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಇರುವ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : ಭಾರತೀಯ ಸೇನೆ ನೇಮಕಾತಿ 2023 : ಅಗ್ನಿಶಾಮಕ, ಸಹಾಯಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಇದನ್ನೂ ಓದಿ : NWDA Recruitment 2023 : ವಿವಿಧ ನಿರ್ದೇಶಕ, ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : South Indian Bank Recruitment 2023 : ವಿವಿಧ ರಾಷ್ಟ್ರೀಯ ಮುಖ್ಯಸ್ಥರು, ಪ್ರೊಬೇಷನರಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 30 ಜನವರಿ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಮಾರ್ಚ್ 2023

Nijalingappa Sugar institute Recruitment 2023 : Invitation to apply for filling vacancies in sugar factory

Comments are closed.