Trisha Krishnan:ಶೂಟಿಂಗ್ ವೇಳೆ ಎಡವಟ್ಟು: ಸೌತ್ ಬ್ಯೂಟಿ ತ್ರಿಶಾಕೃಷ್ಣನ್ ಗೆ ಬಂಧನ ಭೀತಿ

ಖ್ಯಾತ ನಿರ್ದೇಶಕ ಮಣಿರತ್ನ ನಿರ್ದೇಶನದಲ್ಲಿ ಮೂಡಿಬರ್ತಿರೋ ಪೊನ್ನಿನ್ ಸೆಲ್ವನ್ ಸಿನಿಮಾದಲ್ಲಿ ನಟಿಸುತ್ತಿರೋ ಸೌತ್ ಬ್ಯೂಟಿ ತ್ರೀಶಾ ಕೃಷ್ಣನ್ ತಮ್ಮದೇ ಎಡವಟ್ಟಿನಿಂದ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

ಪೊನ್ನಿನ್ ಸೆಲ್ವನ್ ಚಿತ್ರದ ಶೂಟಿಂಗ್ ತಮಿಳುನಾಡಿನಲ್ಲಿ ನಡೆಯುತ್ತಿದೆ. ತಮಿಳುನಾಡಿದ ಪ್ರಸಿದ್ಧ ದೇವಾಲಯವೊಂದರಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ನಟಿ ತ್ರಿಶಾ ಕೃಷ್ಣನ್ ದೇವಾಲಯದ ಒಳಭಾಗದಲ್ಲಿ ಪಾದರಕ್ಷೆ ಧರಿಸಿ ಓಡಾಡಿದ್ದಾರೆ.

ತ್ರೀಶಾ ದೇವಾಲಯದ ಒಳಭಾಗದಲ್ಲಿ ಚಪ್ಪಲಿ ಧರಿಸಿ ಓಡಾಡಿದ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವನ ದೇವಾಲಯದಲ್ಲಿ ಶಿವ ಮತ್ತು ನಂದಿ ನಡುವಿನ ಜಾಗದಲ್ಲಿ ತ್ರೀಶಾ ಪಾದರಕ್ಷೆ ಧರಿಸಿಕೊಂಡೇ ಓಡಾಡಿದ್ದು, ಹಿಂದು ಸಂಘಟನೆಗಳು ಈ ಕಾರಣಕ್ಕಾಗಿ ತ್ರೀಶಾರನ್ನು ತರಾಟೆಗೆ ತೆಗೆದುಕೊಂಡಿವೆ.

ಮಾತ್ರವಲ್ಲ ಹಿಂದೂ ಸಂಘಟನೆಗಳು ತ್ರೀಶಾ ವಿರುದ್ಧ ದೂರು ನೀಡಿವೆ. ಹೀಗಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿಯಲ್ಲಿ ತ್ರೀಶಾ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಪೊನ್ನಿನ್ ಸೆಲ್ವನ್ ಬಿಗ್ ಬಜೆಟ್ ಸಿನಿಮಾವಾಗಿದ್ದು, ಇದರಲ್ಲಿ ಐಶ್ವರ್ಯಾ ರೈ, ಸೋಬಿತಾ ಧುಲಿಪಲ,ಚಿಯಾನ್ ವಿಕ್ರಂ,ಜಯಂ ರವಿ,ಕಾರ್ತಿ,ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

ಎರಡು ಭಾಗದಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಮೊದಲ ಭಾಗ 2022 ರಲ್ಲಿ ತೆರೆಗೆ ಬರಲಿದ್ದು, ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತವಿದೆ.

Trisha krishanan was reportedly seen wearing slippers inside a temple while shooting for Mani Ratnam’s Ponniyin Selvan.

Comments are closed.