Covid Vacine : ಭಾರತದಲ್ಲಿ ನಿತ್ಯವೂ 1.25 ಕೋಟಿ ಜನರಿಗೆ ಕೋವಿಡ್ ಲಸಿಕೆ

ನವದೆಹಲಿ : ಭಾರತವು 1.25 ಕೋಟಿ ಕೋವಿಡ್ ಲಸಿಕೆಗಳನ್ನು ನೀಡುತ್ತಿದೆ, ಇದು ಹಲವಾರು ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಹಿಮಾಚಲ ಪ್ರದೇಶವು ಸಾರಿಗೆ ಸಂಪರ್ಕದ ತೊಂದರೆಗಳ ನಡುವಲ್ಲೇ ಎಲ್ಲಾ ಅರ್ಹ ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ನೀಡುವ ಮೊದಲ ರಾಜ್ಯವಾಗಿದೆ ಎಂದು ಅವರು ವಿಡಿಯೋ ಕಾನ್ಫರೆನ್ಸ ಮೂಲಕ ತಿಳಿಸಿದ್ದಾರೆ. ಸಿಕ್ಕಿಂ, ದಾದ್ರಾ ಮತ್ತು ನಾರ್ಗ ಹವೇಲಿ ಕೂಡ ಈ ಗುರಿಯನ್ನು ಸಾಧಿಸಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಇದಕ್ಕೂ ಮುನ್ನ ಮೋದಿ ಅವರು ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯದ ಕೋವಿಡ್ ಲಸಿಕೆ ಕಾರ್ಯಕ್ರಮದ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆ ಮೂಲಕ ಸಂವಾದ ನಡೆಸಿ, ಆರೋಗ್ಯ ಕಾರ್ಯಕರ್ತರ ಪ್ರಯತ್ನಗಳನ್ನು ಶ್ಲಾಘಿಸಲು ಮೋದಿ ಅವರು ಅವರೊಂದಿಗೆ ಮಾತನಾಡಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ ಉಪಚುನಾವಣೆ : ಮಮತಾ ಬ್ಯಾನರ್ಜಿ ಎಲ್ಲಿ ಕಣಕ್ಕೆ ಇಳಿಯುತ್ತಾರೆ ಗೊತ್ತಾ?

ಶಿಮ್ಲಾ ಜಿಲ್ಲಾಯ ದೊಡ್ರ ಕ್ರ್ವಾ ಸಿವಿಲ್ ಆಸ್ಪತ್ರೆಯ ಡಾ. ರಾಹುಲ್ ಜೊತೆ ಸಂವಾದ ನಡೆಸಿದ ಮೋದಿ, ಕೋವಿಡ್ ಲಸಿಕೆಗಳನ್ನು ನೀಡುವಾಗ ಒಂದೇ ಬಾಟಲಿಯಲ್ಲಿ ಎಲ್ಲಾ 11 ಡೋಸ್‍ಗಳನ್ನು ಬಳಸಿದರೆ ಶೇ .10 ರಷ್ಟು ಖರ್ಚನ್ನು ಉಳಿಸಬಹುದು ಎಂದು ಹೇಳಿದರು. ಕಾಲಿನ ಮೂಳೆ ಮುರಿದಿದ್ದರೂ ಜನರಿಗೆ ಲಸಿಕೆ ಹಾಕಿದ್ದಕ್ಕಾಗಿ ಉನಾದ ಆರೋಗ್ಯ ಕಾರ್ಯಕರ್ತೆ ಕರ್ಮೋ ದೇವಿ ಅವರನ್ನು ಪ್ರಧಾನ ಮಂತ್ರಿ ಶ್ಲಾಘಿಸಿದರು. ದೇವಿ ಮೋದಿಗೆ ತಾನು ಇಲ್ಲಿಯವರೆಗೆ 22,500 ಲಸಿಕೆಗಳನ್ನು ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

(COVID vaccine for 1.25 crore people daily in India)

Comments are closed.