3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್ ಎಷ್ಟು ಗೊತ್ತಾ ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಹಾಗೂ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಬಿಡುಗಡೆಯಾಗಿ ಮೂರು ದಿನಗಳನ್ನು (Kranti Movie Rating) ಪೂರೈಸಿದೆ. ಗಣರಾಜ್ಯೋತ್ಸವದ ದಿನದಂದು ಬಿಡುಗಡೆಗೊಂಡ ಕ್ರಾಂತಿ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ವಿರೋಧವನ್ನು ಎದುರಿಸುತ್ತಾ ಬಂದಿದೆ. ಇನ್ನು ಸಿನಿಮಾ ಬಿಡುಗಡೆಯಾದ ನಂತರವೂ ಸಹ ಈ ವಿರೋಧ ಹಾಗೂ ಕಾಲೆಳೆತ ಮುಂದುವರಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಚೆನ್ನಾಗಿಲ್ಲ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನು ದರ್ಶನ್ ಅಭಿಮಾನಿಗಳು ಕ್ರಾಂತಿ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಸಾಮಾನ್ಯ ಸಿನಿ ರಸಿಕರು ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಿಷಯವೂ ಸಹ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್‌ಗೆ ದಾರಿ ಮಾಡಿಕೊಟ್ಟಿದೆ. ದರ್ಶನ್ ಅಭಿಮಾನಿಗಳು ಸಿನಿಮಾ ಸೂಪರ್ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದರೆ, ವಿರೋಧಿಗಳು ಸಿನಿಮಾ ಚೆನ್ನಾಗಿಲ್ಲ ಎಂದು ಸಹಸ್ರಾರು ಪೋಸ್ಟ್‌ಗಳನ್ನು ಮಾಡಿದ್ದಾರೆ.

ಈ ಕುರಿತಾಗಿ ಕೆಲ ದರ್ಶನ್ ಅಭಿಮಾನಿಗಳು ಬರೆದುಕೊಂಡಿದ್ದು, ಕ್ರಾಂತಿ ಸಿನಿಮಾಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಸಿನಿಮಾ ಚೆನ್ನಾಗಿಯೇ ಇದೆ ಎಂದು ನೆಗೆಟಿವ್ ವಿಮರ್ಶೆಗಳ ವಿರುದ್ಧ ಕಿಡಿಕಾರಿದ್ದಾರೆ. ಸಿನಿಮಾಕ್ಕೆ ಜನಪ್ರಿಯ ಸಿನಿಮಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಂದಿರುವ ರೇಟಿಂಗ್‌ಗಳನ್ನು ಹಂಚಿಕೊಳ್ಳುತ್ತಿರುವ ದರ್ಶನ್ ಅಭಿಮಾನಿಗಳು ಇಷ್ಟು ಒಳ್ಳೆ ರೇಟಿಂಗ್ ಪಡೆದುಕೊಳ್ಳುತ್ತಿರುವ ಕ್ರಾಂತಿ ಚೆನ್ನಾಗಿದೆ ಎನ್ನಲು ಇಷ್ಟು ಸಾಕಾ, ಇನ್ನೇನು ಬೇಕಿದೆ ಎಂದು ಟಾಂಗ್ ನೀಡಿದ್ದಾರೆ. ಹಾಗಿದ್ದರೆ ಕ್ರಾಂತಿ ಸಿನಿಮಾ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೀತಿಯ ಜನಪ್ರಿಯ ವೇದಿಕೆಗಳಲ್ಲಿ ಮೂರು ದಿನಗಳಲ್ಲಿ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಗೊತ್ತಾ ?

ಕ್ರಾಂತಿ ಸಿನಿಮಾಕ್ಕೆ ಮೊದಲ ಮೂರು ದಿನಗಳಲ್ಲಿ ಸಿಕ್ಕಿರುವ ರೇಟಿಂಗ್ ವಿವರ ಇಲ್ಲಿದೆ. ಜನಪ್ರಿಯ ಟಿಕೆಟ್ ಬುಕಿಂಗ್ ಎನಿಸಿಕೊಂಡಿರುವ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಕ್ರಾಂತಿ ಸಿನಿಮಾಕ್ಕೆ 3 ದಿನಗಳಲ್ಲಿ 11,600 ವೋಟ್‌ಗಳು ಬಂದಿದ್ದು, ಈ ಪೈಕಿ 10ಕ್ಕೆ 9.5 ರೇಟಿಂಗ್ ಪಡೆದುಕೊಂಡಿದೆ. ಇನ್ನುಳಿದಂತೆ ಪ್ರತಿಷ್ಠಿತ ಐಎಂಡಿಬಿ ವೆಬ್ ತಾಣದಲ್ಲಿ ಕ್ರಾಂತಿ ಸಿನಿಮಾ ಮೊದಲ ಮೂರು ದಿನಗಳಲ್ಲಿ 7400 ವೋಟ್‌ಗಳನ್ನು ಪಡೆದುಕೊಂಡು 10ಕ್ಕೆ 8.1 ರೇಟಿಂಗ್ ಅನ್ನು ಪಡೆದುಕೊಂಡಿದೆ. ಅತ್ತ ಗೂಗಲ್‌ ರೇಟಿಂಗ್‌ನಲ್ಲಿ 4200ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, 5ಕ್ಕೆ 4.5 ರೇಟಿಂಗ್ ಪಡೆದುಕೊಂಡಿದೆ. ಸಿನಿಮಾಕ್ಕೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಮೂರು ಪ್ರಮುಖ ವೇದಿಕೆಗಳಲ್ಲಿ ಮಾತ್ರ ಕ್ರಾಂತಿ ಸಮಾಧಾನಕರ ರೇಟಿಂಗ್ ಪಡೆದುಕೊಂಡಿದೆ.

ಇನ್ನು ಮೊದಲ ಮೂರು ದಿನಗಳಲ್ಲಿ ಕ್ರಾಂತಿ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಸಿನಿತಂಡ ಪ್ರಕಟಿಸುವ ಕೆಲಸಕ್ಕೆ ಕೈಹಾಕಿಲ್ಲ. ಆದರೆ ಟ್ರೇಟ್ ಎಕ್ಸ್‌ಪರ್ಟ್‌ಗಳು ಈ ಕುರಿತಾಗಿ ಮಾಹಿತಿ ನೀಡುತ್ತಿದ್ದು, ಸಿನಿಮಾ ಎಷ್ಟು ಗಳಿಸಿರಬಹುದು ಎಂದು ಅಂದಾಜು ಲೆಕ್ಕ ಹೇಳುತ್ತಿದ್ದಾರೆ. ಎಲ್ಲಾ ಸಿನಿಮಾಗಳ ಕಲೆಕ್ಷನ್ ಅನ್ನು ನಿಖರವಾಗಿ ಹೇಳುವುದಕ್ಕೆ ಖ್ಯಾತಿಯನ್ನು ಪಡೆದಿರುವ ಸ್ಯಾಕ್‌ನಿಲ್ಕ್ ಎಂಬ ವೆಬ್ ತಾಣದ ಪ್ರಕಾರ ಕ್ರಾಂತಿ ಮೊದಲ ದಿನ 9.8 ಕೋಟಿ ರೂಪಾಯಿ, ಎರಡನೇ ದಿನ 4.1 ಕೋಟಿ ರೂಪಾಯಿ ಹಾಗೂ ಮೂರನೇ ದಿನ 4.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಪ್ರಕಟಿಸಲಾಗಿದೆ.

ಇದನ್ನೂ ಓದಿ : ವಿಷ್ಣು ಸ್ಮಾರಕ ಉದ್ಘಾಟನೆ : ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್‌

ಇದನ್ನೂ ಓದಿ : ಕಷ್ಟಗಳನ್ನೇ ಎದುರಿಸಿ ಬೆಳೆದು ನಿಂತ ನಟ ಡಾ. ವಿಷ್ಣುವರ್ಧನ್‌ ಬಗ್ಗೆ ನಿಮಗೆಷ್ಟು ಗೊತ್ತು ?

ಇದನ್ನೂ ಓದಿ : Mandeep Roy death: ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ ನಿಧನ

ಆದರೆ ಸಾಮಾಜಿಕ ಜಾಲತಾಣದಲ್ಲಿ ಮೊದಲ ದಿನವೇ 20, 30, 35 ಕೋಟಿ ಕಲೆಕ್ಷನ್ ಆಗಿದೆ ಎಂಬ ವಿಭಿನ್ನ ಪೋಸ್ಟರ್‌ಗಳು ಹರಿದಾಡುತ್ತಿದ್ದು, ಕ್ರಾಂತಿ ಕಲೆಕ್ಷನ್ ಬಗ್ಗೆ ಗೊಂದಲವನ್ನು ಸೃಷ್ಟಿಸಿದೆ. ಇನ್ನು ಕ್ರಾಂತಿ ಸಿನಿಮಾದ ಮೊದಲ ದಿನದ ಬುಕಿಂಗ್ ಚೆನ್ನಾಗಿದ್ದರೆ ಎರಡನೇ ಹಾಗೂ ಮೂರನೇ ದಿನದ ಬುಕಿಂಗ್ ಡಲ್ ಹೊಡೆದಿದೆ. ಶುಕ್ರವಾರ ಹಾಗೂ ಶನಿವಾರ ರಜೆ ಇಲ್ಲದ ಕಾರಣ ಕಡಿಮೆ ಬುಕಿಂಗ್ ನಡೆದಿರಬಹುದು ಎಂದು ಚರ್ಚಿಸುತ್ತಿರುವ ಸಿನಿ ರಸಿಕರು ಭಾನುವಾರ ಬುಕಿಂಗ್ ಸುಧಾರಿಸಬಹುದು, ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Kranti Movie Rating : Do you know how much Kranti got Book My Show, IMDB, Google rating in 3 days?

Comments are closed.