ನಟ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾಕ್ಕೆ ಶುಭ ಕೋರಿದ ಸೆಲೆಬ್ರೆಟಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ಇಂದು (ಜನವರಿ 26) ರಾಜ್ಯಾದ್ಯಂತ ರಿಲೀಸ್ (Kranti movie release today) ಆಗಿದೆ. ಸ್ಯಾಂಡಲ್‌ವುಡ್‌ನ ಬಹುನಿರೀಕ್ಷೆಯ ಸಿನಿಮಾ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭ ಆಗಿದೆ. ಮೊದಲ ಶೋನಿಂದಲೇ ದರ್ಶನ್ ಅಭಿಮಾನಿಗಳು ಕ್ಯೂ ನಿಂತು ಸಿನಿಮಾ ನೋಡುತ್ತಿದ್ದಾರೆ. ಸಿನಿಮಂದಿರಗಳ ಮುಂದೆ ಅಭಿಮಾನಿಗಳ ‘ಕ್ರಾಂತಿ’ ಆರಂಭ ಆಗಿದೆ. ಬಾಕ್ಸಾಫೀಸ್‌ನಲ್ಲಿ ದರ್ಶನ್ ಸಿನಿಮಾ ಹೇಗೆ ‘ಕ್ರಾಂತಿ’ ಮಾಡುತ್ತೆ ಅನ್ನೋ ಕುತೂಹಲವಿದೆ. ಥಿಯೇಟರ್ ಮುಂದೆ ಅಭಿಮಾನಿಗಳ ಕ್ರೇಜ್ ನೋಡುತ್ತಿದ್ದರೆ, ಫಸ್ಟ್ ಡೇ ಕಲೆಕ್ಷನ್ ದಾಖಲೆ ಮಾಡೋದು ಖಚಿತ. ಇನ್ನೊಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ‘ಕ್ರಾಂತಿ’ಗೆ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು ಶುಭ ಕೋರಿದ್ದಾರೆ.

ಚಂದನವನದ ಸ್ಟಾರ್‌ ಸೆಲೆಬ್ರಿಟಿಗಳಾದ ಡಾಲಿ ಧನಂಜಯ್, ತರುಣ್ ಸುಧೀರ್, ವಂಶಿ ಕಾಕಾ, ಸೇರಿದಂತೆ ಹಲವು ಮಂದಿ ಶುಭಕೋರಿದ್ದಾರೆ. ‘ಕ್ರಾಂತಿ’ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳಿಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ. ಹಾಗೇ ಅಭಿಮಾನಿಗಳನ್ನು ಸಿನಿಮಂದಿರಕ್ಕೆ ಕರೆದು ಟ್ವೀಟ್ ಮಾಡಿದ್ದಾರೆ. ‘ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಎಂದೆಂದೂ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನಮ್ಮ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.ಇಂದಿನಿಂದ ನಿಮ್ಮ ‘ಕ್ರಾಂತಿ’ ನಿಮ್ಮ ಹತ್ತಿರದ ಸಿನಿಮಂದಿರಗಳಲ್ಲಿ ತೆರೆಕಾಣುತ್ತಿದೆ. ನೋಡಿ ಆಶೀರ್ವದಿಸಿ.’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

ನಟ ದರ್ಶನ್ ‘ಕ್ರಾಂತಿ’ ಸಿನಿಮಾಗೆ ಇಡೀ ಸ್ಯಾಂಡಲ್‌ವುಡ್‌ಗೆ ಕುತೂಹಲವಿದೆ. ಹಲವು ಸವಾಲುಗಳನ್ನು ಎದುರಿಸಿ ರಿಲೀಸ್ ಆಗಿರುವ ಸಿನಿಮಾಗೆ ನಟ ರಾಕ್ಷಸ ಡಾಲಿ ಧನಂಜಯ್ ಶುಭ ಕೋರಿದ್ದಾರೆ. ‘ ಕ್ರಾಂತಿಗೆ ಶುಭವಾಗಲಿ.. ಕ್ರಾಂತಿಯಾಗಲಿ’ ಎಂದು ಟ್ವೀಟ್ ಮೂಲಕ ಧನಂಜಯ್ ಶುಭ ಕೋರಿದ್ದಾರೆ. ದರ್ಶನ್ ಸಿನಿಮಾ ‘ಕ್ರಾಂತಿ’ 55ನೇ ಸಿನಿಮಾವಾಗಿ ರಿಲೀಸ್ ಆಗಿದೆ. ಈಗಾಗಲೇ ದಾಸನ 56ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ತರುಣ್ ಸುಧೀರ್ ಕೂಡ ‘ಕ್ರಾಂತಿ’ ರಿಲೀಸ್‌ಗೆ ಶುಭಕೋರಿದ್ದಾರೆ.

ಇದನ್ನೂ ಓದಿ : ಕ್ರಾಂತಿ ಸಿನಿಮಾಕ್ಕೂ ತಪ್ಪದ ಪೈರಸಿ ಕಾಟ

ಇದನ್ನೂ ಓದಿ : ಟಾಲಿವುಡ್ ಪ್ರಭಾಸ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಕಾಂಬಿಷೇಷನ್ ನಲ್ಲಿ ಆನಂದ್‌ ಸಿನಿಮಾ

ಇದನ್ನೂ ಓದಿ : ಟಾಲಿವುಡ್‌ ನಟ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್

ನಿರ್ದೇಶಕ ತರುಣ್‌, ‘ಅದ್ಭುತ ಸಂದೇಶವನ್ನು ಒಳಗೊಂಡ ಸಿನಿಮಾ ‘ಕ್ರಾಂತಿ’ ಅತ್ಯದ್ಭುತ ಯಶಸ್ಸು ಪಡೆಯಲಿ. ಸೆಲೆಬ್ರೆಟಿಗಳ ಸೆಲೆಬ್ರೆಷನ್ ಜೋರಾಗಲಿ. ‘ಕ್ರಾಂತಿ’ ಸಿನಿಮಾ ಎಲ್ಲಾ ಜನರೇಷನ್‌ಗೂ ತಲುಪಲಿ.’ ಎಂದು ಟ್ವೀಟ್ ಮಾಡುವ ಮೂಲಕ ಶುಭಕೋರಿದ್ದಾರೆ. ಸರಕಾರಿ ಶಾಲೆಗಳ ಉಳಿವು, ಕನ್ನಡ ನಾಡು,ನುಡಿ ವಿಚಾರಗಳನ್ನು ಇಟ್ಟುಕೊಂಡು ಇಂದು ತೆರೆಯ ಮೇಲೆ ಬರುತ್ತಿರುವ ದರ್ಶನ್ ಅವರ ಕ್ರಾಂತಿ ಸಿನಿಮಾ ಯಶಸ್ವಿಯಾಗಲಿ. ನಮ್ಮ ಇಡೀ ಕನ್ನಡ ಸಿನಿರಂಗ ಸದಾ ಗೆಲ್ಲಲಿ.’ ರೂಪೇಶ್ ರಾಜಣ್ಣ ಶುಭ ಹಾರೈಸಿದ್ದಾರೆ.

Kranti movie release today : Celebrities wished good luck for the movie “Kranti” starring actor Darshan

Comments are closed.