Republic day 2023th Doodle: ವಿಶೇಷ ಕಲಾಕೃತಿಯೊಂದಿಗೆ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವ ಗೂಗಲ್‌ ಡೂಡಲ್‌

ನವದೆಹಲಿ: (Republic day 2023th Doodle) ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ರಚಿಸಿದ ಗೂಗಲ್ ಡೂಡಲ್‌ ಆರ್ಟ್‌ ನೊಂದಿಗೆ ಭಾರತದ 74ನೇ ಗಣರಾಜ್ಯೋತ್ಸವವನ್ನು ಇಂದು ಗೂಗಲ್ ಸಂಭ್ರಮದಿಂದ ಆಚರಿಸುತ್ತಿದೆ. ‌

ಅಹಮದಾಬಾದ್ ಮೂಲದ ಕಲಾವಿದ ಪಾರ್ಥ್ ಕೊಥೇಕರ್ ಅವರು ರಚಿಸಿದ ಈ ಗೂಗಲ್ ಡೂಡಲ್‌ ಕಲಾಕೃತಿಯೂ ಇಂಡಿಯಾ ಗೇಟ್‌ನಲ್ಲಿ ಗಣರಾಜ್ಯೋತ್ಸವ ಪರೇಡ್, CRPF ಕವಾಯತು ತಂಡ ಮತ್ತು ಮೋಟಾರ್‌ಸೈಕಲ್ ಸವಾರರನ್ನು ಒಳಗೊಂಡಿದ್ದು, ಭಾರತದ ರಾಷ್ಟ್ರಪತಿ ಭವನವನ್ನು ಸಹ ಒಳಗೊಂಡಿದೆ.

ಕೈಯಿಂದಲೇ ಕತ್ತರಿಸಿ ಕಾಗದದಿಂದಲೇ ರಚಿಸಲಾದ ಈ ಡೂಡಲ್‌ ಕಲಾಕೃತಿಯು ಗಣರಾಜ್ಯೋತ್ಸವ ಪರೇಡ್‌ನ ಪೂರ್ಣ ಚಿತ್ರಣವನ್ನು ಅದ್ಭುತವಾಗಿ ತೋರಿಸುತ್ತಿದೆ. ವಿಶೇಷ ದಿನಗಳನ್ನು ಆಚರಿಸುವ ಉದ್ದೇಶದಿಂದ ಗೂಗಲ್‌ ಡೂಡಲ್‌ ನಲ್ಲಿ ಬದಲಾವಣೆಗಳನ್ನು ತರಲಾಗುತ್ತದೆ ಅಲ್ಲದೇ ಆ ದಿನಕ್ಕೆ ಸಂಬಂಧಿಸಿದಂತೆ ಆಕರ್ಷಕ ಚಿತ್ರಣದೊಂದಿಗೆ ಗೂಗಲ್‌ ಡೂಡಲ್‌ ನ ಮುಖಪುಟದಲ್ಲಿ ಲೋಗೊ ಬದಲಾವಣೆಯಾಗುತ್ತದೆ.

1950 ರಲ್ಲಿ ಈ ದಿನದಂದು ಸಂವಿಧಾನದ ಅಂಗೀಕಾರದೊಂದಿಗೆ, ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ಎಂದು ಘೋಷಿಸಿತು. ಈ ವರ್ಷದ ಗಣರಾಜ್ಯೋತ್ಸವವು ಭಾರತಕ್ಕೆ ಬಹಳ ಮಹತ್ವದ್ದಾಗಿದ್ದು, ದೇಶವು ತನ್ನ 74 ವರ್ಷಗಳ ಪ್ರಯಾಣವನ್ನು ಪ್ರಜಾಪ್ರಭುತ್ವವಾಗಿ ಆಚರಿಸುತ್ತದೆ ಮತ್ತು ಇದು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ.

ಗಣರಾಜ್ಯೋತ್ಸವದ ಮುನ್ನಾದಿನದಂದು, ಅಧ್ಯಕ್ಷ ದ್ರೌಪದಿ ಮುರ್ಮು ಅವರು ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಭಾರತವನ್ನು ಶ್ಲಾಘಿಸಿದರು. ಅಲ್ಲದೇ ಪ್ರಜಾಪ್ರಭುತ್ವ ಮತ್ತು ಬಹುಪಕ್ಷೀಯತೆಯನ್ನು ಉತ್ತೇಜಿಸುವ ಅವಕಾಶ ಎಂದು ಕರೆದರು. ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಯ ರೆಜಿಮೆಂಟ್‌ಗಳ ಭವ್ಯವಾದ ಪರೇಡ್‌ಗಳಿಗೆ ಸಾಕ್ಷಿಯಾಗಲಿದ್ದಾರೆ.

ಇದನ್ನೂ ಓದಿ : Contractor killed the worker: ಹಣದ ವಿಚಾರಕ್ಕೆ ಕಿರಿಕ್ : ಕಾರ್ಮಿಕನ ಕೊಲೆಗೈದು ಪೊದೆಯಲ್ಲಿ ಎಸೆದ ಗುತ್ತಿಗೆದಾರ

ಇದನ್ನೂ ಓದಿ : 2023 ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: 8 ಮಂದಿ ಕನ್ನಡಿಗರಿಗೆ ಪುರಸ್ಕಾರ

ಇದನ್ನೂ ಓದಿ : ಸರಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸುಪ್ರೀಂ ಅಸ್ತು

Republic day 2023th Doodle: Google Doodle celebrates 74th Republic Day with special artwork

Comments are closed.