Kranti Movie Trailer Release : ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಸಿನಿತಂಡ

ನಟ ಚಾಲೆಂಜಿಗ್‌ ಸ್ಟಾರ್‌ ದರ್ಶನ ಅಭಿನಯದ “ಕ್ರಾಂತಿ” ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈಗಾಗಲೇ ಈ ಸಿನಿಮಾದ ಮೂರು ಹಾಡುಗಳನ್ನು ಸಿನಿತಂಡ ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ಇದೀಗ ಈ ಸಿನಿಮಾದ ಟ್ರೈಲರ್‌ (Kranti Movie Trailer Release) ಬಿಡುಗಡೆ ಮಾಡುವುದಾಗಿ ಸಿನಿತಂಡ ದಿನಾಂಕವನ್ನು ಘೋಷಣೆ ಮಾಡಿಕೊಂಡಿದೆ. ಹೌದು ಇದೇ ಜನವರಿ 7ರ ಶುಕ್ರವಾರದಂದು ಕ್ರಾಂತಿ ಸಿನಿಮಾದ ಟ್ರೈಲರ್‌ನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸತತ ಎರಡು ವರ್ಷಗಳಲ್ಲಿ ಕೊರೊನಾ ಲಾಕ್‌ಡೌನ್ ಸಮಸ್ಯೆಯನ್ನು ಎದುರಿಸಿ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ 2022ರಲ್ಲಿ ಬಿಗ್‌ ಕಮ್ ಬ್ಯಾಕ್ ಮಾಡಿದೆ. ಅದರಲ್ಲಿಯೂ ಕನ್ನಡ ಸಿನಿರಂಗ ಉತ್ತಮ ಸಿನಿಮಾಗಳನ್ನು ನಿರ್ಮಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. 2022ರಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಾವುದೇ ಸಿನಿಮಾ ಸಹ ಬಿಡುಗಡೆಯಾಗಿರಲಿಲ್ಲ. ಎಲ್ಲಾ ಯೋಜನೆ ಪ್ರಕಾರವೇ ನಡೆದಿದ್ದರೆ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಸಿನಿಮಾ ಕ್ರಾಂತಿ 2022ರ ಕನ್ನಡ ರಾಜ್ಯೋತ್ಸವದ ದಿನದಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಮಾದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಸಿನಿಮಾ ಆ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ.

ಇನ್ನೂ ಕ್ರಾಂತಿ ಸಿನಿಮಾವನ್ನು ಸಿನಿತಂಡ ಜನವರಿ 26 ಗಣರಾಜ್ಯೋತ್ಸವದಂದು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದೆ. ಹೀಗಾಗಿ ಸಿನಿತಂಡ ಸಿನಿಮಾದ ಹೈಪ್ ಹೆಚ್ಚಿಸಲು ಸಿನಿಮಾದ ಒಂದೊಂದೇ ಹಾಡನ್ನು ಒಂದೊಂದು ಸ್ಥಳದಲ್ಲಿ ಬಿಡುಗಡೆ ಮಾಡುತ್ತಾ ಬರುತ್ತಿದ್ದು, ಟ್ರೈಲರ್ ಅನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬ ಕುತೂಹಲ ದರ್ಶನ್ ಅಭಿಮಾನಿಗಳಲ್ಲಿ ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇದೀಗ ಕ್ರಾಂತಿ ಸಿನಿತಂಡ ಉತ್ತರ ನೀಡಿದ್ದು, ಟ್ರೈಲರ್ ದಿನಾಂಕವನ್ನು ಘೋಷಣೆ ಮಾಡಿದೆ.

ನಟ ದರ್ಶನ್‌ ಹೊಸ ವರ್ಷದ ಶುಭಾಶಯಗಳನ್ನು ಕೋರಿ ಬರೆದುಕೊಂಡಿರುವ ಪೋಸ್ಟ್‌ನಲ್ಲಿ, ‘ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ಇನ್ನು ಹೆಚ್ಚು ಆತ್ಮವಿಶ್ವಾಸದೊಂದಿಗೆ ನಿಮ್ಮ ಕನಸುಗಳೆಲ್ಲಾ ಈಡೇರಲಿ. ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕ್ರಾಂತಿ ಸಿನಿಮಾದ ಟ್ರೈಲರ್ ಜನವರಿ 7ಕ್ಕೆ ಬಿಡುಗಡೆಯಾಗಲಿದೆ ಗುರುತು ಮಾಡಿ ಇಟ್ಟುಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Spooky College Movie : ಟ್ರೈಲರ್‌ನಿಂದಲೇ ಕಿಕ್‌ ಕೊಟ್ಟ ‘ಸ್ಪೂಕಿ ಕಾಲೇಜ್’ ಸಿನಿಮಾ ರಿಲೀಸ್‌ಗೆ ರೆಡಿ

ಇದನ್ನೂ ಓದಿ : Animal Movie : ಅನಿಮಲ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ : ಕಿಲ್ಲರ್‌ ಅವತಾರದಲ್ಲಿ ರಣಬೀರ್‌ ಕಪೂರ್‌

ಇದನ್ನೂ ಓದಿ : ಮನೆಯ ಬಾಲ್ಕನಿಯಲ್ಲಿ ಸ್ನೇಹಿತರೊಂದಿಗೆ ಹೊಸ ವರ್ಷ ಆಚರಿಸಿದ ಆಲಿಯಾ ಭಟ್ – ರಣಬೀರ್ ಕಪೂರ್

ಇನ್ನೂ ಜನವರಿ 7ರಂದು ಟ್ರೈಲರ್‌ನ್ನು ಬಿಡುಗಡೆಗೊಳಿಸಲಿರುವ ಕ್ರಾಂತಿ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿಗದ್ದು, ಈಗಾಗಲೇ ಸಿನಿಮಾದ ಮೂರು ಹಾಡುಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಬಿಡುಗಡೆ ಮಾಡಿರುವ ಸಿನಿಮಾತಂಡ ಉಳಿದ ಹಾಡುಗಳನ್ನು ಎಲ್ಲಿ ಬಿಡುಗಡೆ ಮಾಡಲಿದೆ ಎನ್ನುವುದನ್ನು ಇದುವರೆಗೂ ಹೇಳಿಕೊಂಡಿರುವುದಿಲ್ಲ. ಇನ್ನೂ ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿವೆ ಎಂದು ಸಿನಿತಂಡ ಘೋಷಿಸಿದ್ದು, ಎಲ್ಲಾ ಹಾಡುಗಳನ್ನೂ ಒಂದೊಂದು ಊರಿನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಕೂಡ ಹೇಳಿಕೊಂಡಿತ್ತು.

Kranti Movie Trailer Release: The trailer release date of the much awaited movie “Kranti” has been announced by the film team

Comments are closed.