Pistachios Health Tips:ಪ್ರತಿದಿನ ನಾಲ್ಕು ಪಿಸ್ತಾ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

(Pistachios Health Tips)ಹಲವರು ಪ್ರತಿದಿನ ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳುವುದಕ್ಕೆ ಡ್ರೈ ಪ್ರೂಟ್ಸ್‌ ತಿನ್ನುತ್ತಾರೆ. ಈ ಡ್ರೈ ಪ್ರೂಟ್ಸ್‌ನಲ್ಲಿ ಪಿಸ್ತಾ ಒಂದಾಗಿದೆ. ಇದರಲ್ಲಿ ಸಾಕಷ್ಟು ಫೈಬರ್‌ , ಕಾರ್ಬೋಹೈಡ್ರೇಟ್‌, ಅಮೈನೋ , ವಿಟಮಿನ್‌ ಎ,ಕೆ,ಸಿ, ಪ್ರೋಟಿನ್‌, ಕ್ಯಾಲ್ಸಿಯಂ , ಮ್ಯಾಂಗನೀಸ್‌, ಪೋಲೇಟ್‌ ಒಳಗೊಂಡಿದ್ದು, ಇದನ್ನು ಪ್ರತಿದಿನ ತಿನ್ನುವುದರಿಂದ ದೇಹಕ್ಕೆ ಅನೇಕ ಆರೋಗ್ಯಕರ ಪ್ರಯೋಜನವನ್ನು ಒದಗಿಸುತ್ತದೆ. ಈ ಪಿಸ್ತಾವು ಮೂಲತವಾಗಿ ಮಧ್ಯ ಎಷ್ಯಾ , ಇರಾನ್‌ ಮತ್ತು ಅಫ್ಘಾನಿಸ್ತಾನದ ಬೆಳೆಯುತ್ತಾರೆ. ವೈಜ್ಞಾನಿಕವಾಗಿ ಇದನ್ನು ಪಿಸ್ತಾ ವೆರೆ ಎಂದು ಕೂಡ ಕರೆಯಲಾಗುತ್ತದೆ.

(Pistachios Health Tips)ಪೋಷಕಾಂಶಗಳ ಆಗರವಾಗಿರುವ ಪಿಸ್ತಾ ಹೃದಯ ಮತ್ತು ಮೆದುಳಿಗೆ ಸಂಬಂಧ ಪಟ್ಟಂತಹ ಕಾಯಿಲೆಗಳನ್ನು ನಮ್ಮಿಂದ ದೂರ ಇಡುತ್ತದೆ. ಪಿಸ್ತಾದಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಇರುವುದರಿಂದ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಪಿಸ್ತಾದಲ್ಲಿ ಇರುವ ಪೊಟ್ಯಾಸಿಯಮ್ ಅಂಶ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿದಿನ ಪಿಸ್ತಾ ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ದೇಹದ ತೂಕ ಇಳಿಸುತ್ತದೆ ಪಿಸ್ತಾ
ಪಿಸ್ತಾ ಕೇವಲ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುವುದು ಮಾತ್ರವಲ್ಲದೇ ತೂಕ ಇಳಿಸಿಕೊಳ್ಳುವುದಕ್ಕೂ ಕೂಡ ಸಹಕಾರಿಯಾಗಿದೆ. ಅತ್ಯಂತ ಕಡಿಮೆ ಕ್ಯಾಲೋರಿಯನ್ನು ಹೊಂದಿರುವುದರಿಂದ ಇದನ್ನು ಸೇವನೆ ಮಾಡುವ ಮೂಲಕ ನಿಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಪಿಸ್ತಾದಲ್ಲಿ ಹೆಚ್ಚಿನ ನಾರಿನಾಂಶ ಮತ್ತು ಪ್ರೋಟಿನ್‌ ಇರುವುದರಿಂದ ಅನಗತ್ಯವಾಗಿ ತಿನ್ನುವುದನ್ನು ತಡೆದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಪಿಸ್ತಾ ತಿನ್ನುವುದರಿಂದ ಸದಾ ನಿಮ್ಮ ಹೊಟ್ಟೆ ತುಂಬಿರುವಂತೆ ಬಾಸವಾಗುತ್ತದೆ. ಹಾಗಾಗಿ ಇದನ್ನು ಪ್ರತಿದಿನ ತಿನ್ನುವುದನ್ನು ರೂಢಿಸಿಕೊಂಡರೆ ನಿಮ್ಮ ತೂಕವನ್ನು ಸಮತೋಲನದಲ್ಲಿ ಹಾಗೂ ಕಡಿಮೆ ಮಾಡಿಕೊಳ್ಳಬಹುದು. ಸಂಶೋಧನೆಯ ಪ್ರಕಾರ ಪಿಸ್ತಾ ತಿನ್ನುವುದರಿಂದ ಸೊಂಟದ ಸುತ್ತಳತೆಯನ್ನು ಕೂಡ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:Health Effects Of Cigarette : ಸಿಗರೇಟ್‌ ಸೇದುವ ಮುನ್ನ ಎಚ್ಚರ : ನಿಮ್ಮನ್ನು ಕಾಡುತ್ತದೆ ಈ ಗಂಭೀರ ಸಮಸ್ಯೆ

ಇದನ್ನೂ ಓದಿ:Corn Health Tips:ರುಚಿಕರ ಜೋಳ ದೂರ ಮಾಡುತ್ತೆ ನಿಮ್ಮ ಆರೋಗ್ಯದ ಸಮಸ್ಯೆ

ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಪಿಸ್ತಾಗಳನ್ನು ಹುರಿದು ಅದಕ್ಕೆ ಉಪ್ಪು ಹಾಕಲಾಗುತ್ತದೆ. ಆದ್ದರಿಂದ ಅವುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು .ಏಕೆಂದರೆ ಉಪ್ಪು ಬೆರೆಸಿದ ಪಿಸ್ತಾ ತಿನ್ನುವುದರಿಂದ ಅನೇಕ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ . ಹಾಗಾಗಿ ಆದಷ್ಟು ಉಪ್ಪು ರಹಿತ ಇರುವ ಪಿಸ್ತಾ ಸೇವನೆ ಮಾಡಿ. ಪ್ರತಿದಿನ ಐವತ್ತು ಗ್ರಾಂ ಪಿಸ್ತಾ ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.

Pistachios Health Tips Do you know the health benefits of eating four pistachios every day?

Comments are closed.