Param Sundari :ಪರಮ ಸುಂದರಿ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಅಭಿಮಾನಿ ಬಳಿ ಕ್ಷಮೆಯಾಚಿಸಿದ ನಟಿ ಕೃತಿ ಸನೂನ್​..! ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ

ಬಾಲಿವುಡ್​ ನಟಿ ಕೃತಿ ಸನೂನ್​​ರಿಗೆ ಮಿಮಿ ಸಿನಿಮಾದ ಬಳಿಕ ಅದೃಷ್ಟವೇ ಬದಲಾದಂತೆ ಕಾಣುತ್ತಿದೆ. 7 ವರ್ಷಗಳ ಸಿನಿ ಪಯಣದಲ್ಲಿ ಬ್ಲಾಕ್​ ಬಸ್ಟರ್​ ಸಿನಿಮಾ ಮಿಮಿ ಕೃತಿ ಜೀವನವನ್ನೇ ಬದಲಾಯಿಸಿದೆ. ಮಿಮಿ ಸಿನಿಮಾದ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಕೃತಿ ಸನೂನ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ . ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಪರಂ ಸುಂದರಿ(Param Sundari) ಹಾಡೊಂದು ಬೇರೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದೆ.


ಬಾಡಿಗೆ ತಾಯಿ ಪಾತ್ರದಲ್ಲಿ ಕೃತಿ ಸನೂನ್​ ನಟಿಸಿದ್ದ ಮಿಮಿ ಸಿನಿಮಾದ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿತೋ ಅದೇ ರೀತಿಯಲ್ಲಿ ಪರಮ ಸುಂದರಿ ಹಾಡು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಮಕ್ಕಳು , ಯುವತಿಯರೆನ್ನದೇ ಎಲ್ಲರ ಬಾಯಲ್ಲೂ ಪರಮ ಸುಂದರಿ ಹಾಡು ಗುನುಗುವಂತಾಗಿದೆ. ಅನೇಕರು ಇದೇ ಹಾಡಿಗೆ ಕೃತಿ ಸನೂನ್​ರಂತೆ ನೃತ್ಯವನ್ನೂ ಮಾಡಿದ್ದಾರೆ.
ಆದರೆ ಈ ಹಾಡಿನ ಕಾರಣದಿಂದಾಗಿ ಕೃತಿ ಇದೀಗ ಅಭಿಮಾನಿಯೊಬ್ಬರ ಬಳಿ ಕ್ಷಮೆಯಾಚಿಸುವಂತಾಗಿದೆ..! ಹೌದು..! ಪರಮ ಸುಂದರಿ ಎಂಬ ಹಾಡಿನಿಂದ ಅಭಿಮಾನಿಯೊಬ್ಬ ನನ್ನ ಜೀವನವೇ ಹಾಳಾಯ್ತು ಎಂದಿದ್ದು ಇದನ್ನು ಕೇಳಿದ ಕೃತಿ ಸನೂನ್​ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದಾರೆ.


ಪರಂ ಚಹ್ಯಾ ಎಂಬವರು ಪರಮ ಸುಂದರಿ ಹಾಡಿನ ಬಗ್ಗೆ ಟ್ವೀಟ್​ ಮಾಡಿದ್ದಾರೆ.ನನ್ನ ಬಾಲ್ಯದ ದಿನಗಳಲ್ಲಿ ಯಾವುದೂ ನನ್ನನ್ನು ಕೆಣಕಲು ಸಾಧ್ಯವಾಗುತ್ತಿರಲಿಲ್ಲ. ಅನೇಕರು ನನ್ನ ಹೆಸರನ್ನು ಆಡಿಕೊಂಡರೂ ನಾನು ತಲೆಯೇ ಕೆಡಿಸಿಕೊಳ್ತಿರಲಿಲ್ಲ. ಆದರೆ ಅದ್ಯಾವಾಗ ಈ ಪರಮ ಸುಂದರಿ ಹಾಡು ರಿಲೀಸ್​ ಆಯ್ತೋ ಅಂದಿನಿಂದ 1000ಕ್ಕೂ ಅಧಿಕ ಬಾರಿ ನನಗೆ ಈ ಹಾಡಿನ ಸಾಲುಗಳ ಮೂಲಕ ಗೇಲಿ ಮಾಡಲಾಗ್ತಾ ಇದೆ. ಯಾಕೆ ಕೃತಿ ನೀವು ಈ ರೀತಿ ಮಾಡಿದ್ರಿ..? ನನ್ನ ಜೀವನವನ್ನೇಕೆ ಹಾಳು ಮಾಡಿದ್ರಿ..? ಎಂದು ನಗುತ್ತಾ ಟ್ವೀಟಾಯಿಸಿದ್ದಾರೆ.


ಈ ಫನ್ನಿ ಟ್ವೀಟ್​ ಕೃತಿ ಸನೂನ್​ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಯ್ಯೋ..! ಕ್ಷಮಿಸಿ ಎಂದು ಪರಂ ಚಹ್ಯಾಗೆ ಕೃತಿ ಸನೂನ್​ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್​ ಸ್ಕ್ರೀನ್​ಶಾಟ್​ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

Kriti Sanon Apologises to Man Who Accused Actor of ‘Ruining’ His Life: ‘Why Did You Do This?’

ಇದನ್ನು ಓದಿ :Madhagaja : ರಾಜ್ಯದ 800 ಸ್ಕ್ರೀನ್​ಗಳಲ್ಲಿ ತೆರೆಕಂಡ ಬಹುನಿರೀಕ್ಷಿತ ಮದಗಜ ಸಿನಿಮಾ..!

Comments are closed.