Hrithik Roshan : ‘ಕಾಂತಾರ’ದಿಂದ ತುಂಬಾ ಕಲಿತೆ’: ಟ್ವಿಟರ್ ನಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಮೆಚ್ಚುಗೆ


ಕನ್ನಡದ ಕಾಂತಾರ ಸಿನಿಮಾ ದೇಶದಾದ್ಯಂತ ಹೊಸ ಸಂಚಲನವನ್ನು ಮೂಡಿಸಿದ್ದು, ಈ ಸಿನಿಮಾದ ಬಗ್ಗೆ ಈಗಾಗಲೇ ಹಲವಾರು ಸ್ಟಾರ್‌ ಸೆಲೆಬ್ರಿಟಿಗಳು ಹಾಡಿ ಹೊಗಳಿದ್ದಾರೆ. ಮೊದಲು ಕನ್ನಡದಲ್ಲಿ (Hrithik Roshan) ಬಿಡುಗಡೆಯಾದ ಕಾಂತಾರ ಸಿನಿಮಾ, ಪ್ರೇಕ್ಷಕರ ಒತ್ತಾಯದ ಮೇಲೆ ಪರಭಾಷೆಗಳಲ್ಲಿ ತೆರೆಕಂಡು ಬಾರಿ ಮಟ್ಟದ ಯಶಸ್ಸನ್ನು ಕಂಡಿದೆ. ಸಿನಿಮಂದಿರಗಳಲ್ಲಿ ಅಬ್ಬರಿಸಿದ್ದ ಕಾಂತಾರ ಸಿನಿಮಾ ಓಟಿಟಿಯಲ್ಲಿ ಕೂಡ ಸಖತ್‌ ಸದ್ದು ಮಾಡಿದೆ. ಕಾಂತಾರ ಸಿನಿಮಾ ಡಿಸೆಂಬರ್‌ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಹಿಂದಿ ವರ್ಷನ್‌ ಬಿಡುಗಡೆ ಆಗಿದೆ. ಇದೀಗ ಬಾಲಿವುಡ್‌ನ ಖ್ಯಾತ ನಟ ಹೃತಿಕ್‌ ರೋಷನ್‌ ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚಗೆಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೃತಿಕ್‌ ರೋಷನ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಕಾಂತಾರ ಸಿನಿಮಾವನ್ನು ನೋಡಿ ಸಾಕಷ್ಟು ವಿಷಯ ಕಲಿತುಕೊಂಡೆ. ರಿಷಬ್‌ ಶೆಟ್ಟಿ ಅವರಿಂದಾಗಿ ಈ ಸಿನಿಮಾ ಅಸಾಧಾರಣ ಎನಿಸಿಕೊಂಡಿದೆ. ನಿರೂಪಣೆ, ನಟನೆ ಮತ್ತು ನಿರ್ದೇಶನ ಅತ್ಯುತ್ತಮವಾಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಕಂಡ ಬದಲಾವಣೆಯಿಂದ ನನಗೆ ರೋಮಾಂಚನ ಆಗಿದೆ. ಇಡೀ ತಂಡಕ್ಕೆ ನನ್ನ ಗೌರವ ಮತ್ತು ಅಭಿನಂದನೆಗಳು” ಎಂದು ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಸಿನಿಮಾಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. “ಕೆಜಿಎಫ್‌ 2” ಬಳಿಕ ಕಾಂತಾರ ಸಿನಿಮಾ ಕನ್ನಡ ಸಿನಿರಂಗದ ಗರಿಮೆಯನ್ನು ಹೆಚ್ಚಿಸಿದೆ. ರಜನಿಕಾಂತ್‌ ವಿವೇಕ್‌ ಅಗ್ನಿಹೋತ್ರಿ, ಕಂಗನಾ ರಣಾವತ್‌, ಅನುಷ್ಕಾ ಶೆಟ್ಟಿ, ಪ್ರಭಾಸ್‌ ಸೇರಿದಂತೆ ಅನೇಕ ಪರಭಾಷೆ ಸ್ಟಾರ್‌ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇದೀಗ ಅವರ ಸಾಲಿಗೆ ಹೃತಿಕ್‌ ರೋಷನ್‌ ಕೂಡ ಸೇರಿಕೊಂಡಿದ್ದಾರೆ.

ಇದನ್ನೂ ಓದಿ : Gandasi Nagaraj passed away : ಖ್ಯಾತ ಹಾಸ್ಯನಟ ಗಂಡಸಿ ನಾಗರಾಜ್‌ ವಿಧಿವಶ : ಕಂಬನಿ ಮಿಡಿದ ಚಿತ್ರರಂಗ

ಇದನ್ನೂ ಓದಿ : Darshan Controversy: ಮತ್ತೆ ವಿವಾದದ ಸುಳಿಯಲ್ಲಿ ಚಾಲೆಂಜಿಂಗ್ ಸ್ಟಾರ್; ಅದೃಷ್ಟ ದೇವತೆಗೆ ಅವಮಾನ ಮಾಡಿರುವ ಆರೋಪ ನಿಜನಾ..?

ಇದನ್ನೂ ಓದಿ : Kantara Hindi in Netflix‌ : ನೆಟ್‌ಫ್ಲಿಕ್ಸ್‌ನಲ್ಲಿ “ಕಾಂತಾರ” ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ ?

ಇದನ್ನೂ ಓದಿ : Kantara Hindi in Netflix‌ : ನೆಟ್‌ಫ್ಲಿಕ್ಸ್‌ನಲ್ಲಿ “ಕಾಂತಾರ” ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ ?

ಇದನ್ನೂ ಓದಿ : Just Pass Kannada Movie:’ಜಸ್ಟ್ ಪಾಸ್’ ಆಗಲು ಹೊರಟ ನಟ ಶ್ರೀ ಗೆ ಸಿಕ್ಕಳು ಹೀರೋಯಿನ್ – ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ ಸಿನಿಮಾ

ಕಾಂತಾರ ಸಿನಿಮಾದಿಂದ ರಿಷಬ್‌ ಶೆಟ್ಟಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಕಾಂತಾರ ಸಿನಿಮಾ ನಿರೀಕ್ಷೆಗೂ ಮೀರಿದ ಗೆಲುವನ್ನು ನೀಡಿದ್ದು, ಇದರ ಎರಡನೇ ಅಧ್ಯಾಯವನ್ನು ಮಾಡಲು ಸಿನಿತಂಡ ಈಗಾಗಲೇ ದೈವದ ಒಪ್ಪಿಗೆಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಎರಡನೇ ಭಾಗದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕೂತುಹಲ ಎಲ್ಲರಲ್ಲೂ ಮೂಡಿದೆ.

Learned a lot from ‘Kantara’: Bollywood actor Hrithik Roshan’s appreciation on Twitter

Comments are closed.