Tamanna : ಬಿಕಿನಿ ಬಿಟ್ಟು ಕಾವಿ ತೊಟ್ಟ ಮಿಲ್ಕಿಬ್ಯೂಟಿ : ಸನ್ಯಾಸ ಸ್ವೀಕರಿಸಿದ್ರಾ ತಮನ್ನಾ?

ಇತ್ತೀಚಿನ ವರ್ಷಗಳಲ್ಲಿ ಅಭಿನಯದಿಂದ ಮೋಡಿ ಮಾಡಿದ ನಟಿಯರು ಬಹಳಷ್ಟು ಮಂದಿ ಇದ್ದಾರೆ. ಆದರೆ ತನ್ನ ಅಂದ ಚೆಂದ ಮೈಮಾಟದಿಂದ, ಸಖತ್‌ ಗ್ರಾಮರ್ ಆಗಿ ಭಾರೀ ಕ್ರೇಜ್ ಗಿಟ್ಟಿಸಿಕೊಂಡವರು ಮಾತ್ರ (Tamanna) ತಮನ್ನಾ. ಕನ್ನಡದ 2 ಐಟಂ ಸಾಂಗ್‌ಗಳಿಗೂ ಮಿಲ್ಕಿ ಬ್ಯೂಟಿ ಕುಣಿದು ಹೋಗಿದ್ದಾರೆ. ತನ್ನ ಮಿಲ್ಕಿ ಗ್ಲಾಮರ್‌ನಿಂದ ಈ ಮುಂಬೈ ಬೆಡಗಿ ಎಬ್ಬಿಸಿದ ಹವಾ ಅಷ್ಟಿಷ್ಟಲ್ಲ. ಆರಂಭದಲ್ಲಿ ಅಷ್ಟಾಗಿ ಸಕ್ಸಸ್ ಕಾಣದ ತಮನ್ನಾ ‘ಪಯ್ಯಾ’ ಸಿನಿಮಾ ನಂತರ ಭಾರೀ ಕ್ರೇಜ್ ಸೃಷ್ಟಿಸಿಕೊಂಡರು. ಸದ್ಯ ಮತ್ತೆ ತಮನ್ನಾ ಸೈಲೆಂಟ್ ಆಗಿಬಿಟ್ಟಿದ್ದಾರೆ. ಹೊಸ ನಟಿಯರ ಆರ್ಭಟದ ನಡುವೆ ಮಿಲ್ಕಿ ಬ್ಯೂಟಿ ಕಮಾಲ್ ನಡೀತಿಲ್ಲ. ಇದೆಲ್ಲದರ ನಡುವೆ ತಮನ್ನಾ ಇದ್ದಕ್ಕಿದಂತೆ ಕಾವಿ ತೊಟ್ಟು ದರ್ಶನ ಕೊಟ್ಟಿದ್ದಾರೆ. ಲಿಂಗ ಭೈರವಿ ಪೂಜೆ ಮಾಡಿದ ಆ ವಿಡಿಯೋವನ್ನು ಶೇರ್ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ತಮನ್ನಾ ಹೊಸ ಅವತಾರ ನೋಡಿದ ಕೆಲ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅರೇ ಇವ್ರೇನಾ ಮಿಲ್ಕಿ ಬ್ಯೂಟಿ ತಮನ್ನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾ ಹೀಗೆ ಪೂಜೆ ಮಾಡೋಕೆ ಕಾರಣ ಏನು ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಸದಾ ಸ್ಕರ್ಟ್, ಜೀನ್ಸ್, ಶಾರ್ಟ್ಸ್, ಜಿಮ್ ಸೂಟ್, ಬಿಕಿನಿ ತೊಟ್ಟು ತಮನ್ನಾ ಕಾಣಿಸಿಕೊಳ್ಳುತ್ತಿದ್ದರು. ಜಿಮ್‌ ವರ್ಕೌಟ್, ಫಾರಿನ್ ವಕೇಷನ್, ಸಿನಿಮಾ ಶೂಟಿಂಗ್ ಅಂತ ಬ್ಯುಸಿಯಾಗಿ ಇರುತ್ತಿದ್ದ ತಮನ್ನಾ ಹೀಗೆ ಏಕಾಏಕಿ ದೇವಸ್ಥಾನದಲ್ಲಿ ಕಾವಿ ಧರಿಸಿ ಕಾಣಿಸಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಹಿಮಾಲಯಕ್ಕೆ ತೆರಳಿ ವೈಷ್ಣವಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಇಶಾ ಯೋಗಾ ಆಶ್ರಮಕ್ಕೆ ಭೇಟಿ ನೀಡಿರುವ ಚೆಲುವೆ ವಿಶೇಷ ಪೂಜೆ ನೆರವೇರಿದ್ದಾರೆ. ದೀಕ್ಷೆ ಪಡೆದು ಪೂಜೆ ನೆರವೇರಿಸಿದ್ದಾರೆ. ಲಿಂಗ ಭೈರವಿ ದೇವಿಯ ಆರಾಧನೆ ಮಾಡಿರುವ ವಿಡಿಯೋವನ್ನು ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ‘ಇಶಾ ಯೋಗಾಶ್ರಮದಿಂದ ಆಹ್ವಾನ ಬಂದಿದ್ದು ಬಹಳ ಸಂತಸ ತಂದಿತ್ತು. ಲಿಂಗ ಭೈರವಿ ದೇವಿಯ ದರ್ಶನ ಮಾಡಿದ್ದರಿಂದ ಮನಸ್ಸಿಗೆ ಬಹಳ ಚೈತನ್ಯ ತುಂಬಿದಂತಾಗಿದೆ. ಅಷ್ಟೇ ಅಲ್ಲ ಜೀವನದಲ್ಲಿ ಭಯ, ಸೋಲಿನ ಬಗ್ಗೆಗಿನ ಆತಂಕ ದೂರವಾಗುತ್ತದೆ. ಲಿಂಗ ಭೈರವಿ ವಿಗ್ರಹವನ್ನು ಮನೆಗೆ ಕೊಂಡೊಯ್ಯುತ್ತೇನೆ. ಇಲ್ಲಿನ ಪರಿಸರ, ಲಿಂಗ ಭೈರವಿ ಮೂರ್ತಿ ನೋಡುತ್ತಿದ್ದಂತೆ ಏನೋ ಗೊತ್ತಿಲ್ಲದ ಆಧ್ಯಾತ್ಮಿಕ ಅನುಭೂತಿ ದೊರೆಕುತ್ತದೆ’ ಎಂದು ತಮನ್ನಾ ಹೇಳಿದ್ದಾರೆ.

ಈ ವಿಡಿಯೋ ನೋಡಿ ತಮನ್ನಾ ಮದುವೆಗಾಗಿ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ತಮನ್ನಾ ಅಫೇರ್‌ ಬಗ್ಗೆ ಗುಸುಗುಸು ಶುರುವಾಗಿತ್ತು. ಬಾಲಿವುಡ್ ಪೋಷಕ ನಟ ವಿಜಯ್ ವರ್ಮಾ ಜೊತೆ ಮಿಲ್ಕಿಬ್ಯೂಟಿ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರು ಒಟ್ಟಿಗೆ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದ್ದಾರೆ. ಇಬ್ಬರು ಕಿಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ ಅಂತೆಲ್ಲಾ ಸುದ್ದಿಯಾಗಿತ್ತು. ಈಗ ತಮನ್ನಾ ವಯಸ್ಸು 33. ಆಕೆ ಮದುವೆ ಬಗ್ಗೆ ಆಲೋಚಿಸುತ್ತಿರುವಂತಿದೆ ಎನ್ನುವುದು ಕೆಲವರ ವಾದ ಆಗಿತ್ತು.

ಇದನ್ನೂ ಓದಿ : ನಿರ್ದೇಶಕ ಉಮಾಪತಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಸಿನಿಮಾ ಮಾಡ್ತಾರಾ ? ಯಾವಾಗ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ಗೆ 21 ವರ್ಷ ಸಂಭ್ರಮ

ಇದನ್ನೂ ಓದಿ : ಜಾಕ್ವೆಲಿನ್, ನೋರಾ ಅಲ್ಲ, ‘ಕಬ್ಜ’ ಐಟಂ ಸಾಂಗ್‌ನಲ್ಲಿ ಕುಣಿಯೋದು ಯಾರು ಗೊತ್ತಾ?

ತಮನ್ನಾ ಕೈಯಲ್ಲಿರುವ ಪ್ರಾಜೆಕ್ಟ್‌ಗಳ ಬಗ್ಗೆ ಹೇಳುವುದಾದರೆ ಚಿರಂಜೀವಿ ಜೊತೆ ‘ಭೋಳಾ ಶಂಕರ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಹಿಂದಿಯಲ್ಲಿ ‘ಬೋಲೆ ಚುಡಿಯಾ’ ಶೂಟಿಂಗ್ ಮುಗಿದಿದೆ. ಬಾಂದ್ರಾ ಎನ್ನುವ ಮತ್ತೊಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮುಂಬೈ ಉದ್ಯಮಿಯನ್ನು ತಮನ್ನಾ ಮದುವೆ ಆಗುತ್ತಾರೆ ಎನ್ನುವ ವದಂತಿ ಹರಡಿತ್ತು. ಅದನ್ನು ಪರೋಕ್ಷವಾಗಿ ಅಲ್ಲಗಳೆದಿದ್ದರು. ಇನ್ನು ಮುಂದೇನು ಆಗುತ್ತದೆ ಎಂದು ಕಾದುನೋಡಬೇಕಿದೆ ಅಷ್ಟೇ.

Leaving bikini and wearing khavi, MilkyBeauty: Have you accepted Sanyas, Tamanna?

Comments are closed.