ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ಗೆ 21 ವರ್ಷ ಸಂಭ್ರಮ

ಇಂದು (ಫೆಬ್ರವರಿ 8) ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಕನ್ನಡ ಸಿನಿರಂಗದಲ್ಲಿ ಮೆರೆಯುತ್ತಿರುವ ನಟ ದರ್ಶನ್ ಸಿನಿ ಕೆರಿಯರ್ ಎಷ್ಟು ಕಷ್ಟದಿಂದ ಕೂಡಿತ್ತು ಎಂಬುದು ಪ್ರತಿಯೊಬ್ಬ ಸಿನಿ ರಸಿಕರಿಗೂ ತಿಳಿದಿದೆ. ಸಿನಿರಂಗದ ಖ್ಯಾತ ನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರನಾದರೂ ಸಹ ದರ್ಶನ್ ಅವರಿಗೆ ಸಿನಿರಂಗದಲ್ಲಿ ಅವಕಾಶಗಳು ಸುಲಭವಾಗಿ ಬಂದಿಲ್ಲ. ಆದರೂ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ (Majestic Movie) “ಮೆಜೆಸ್ಟಿಕ್‌” ಸಿನಿಮಾದಲ್ಲಿ, ನಟ ದರ್ಶನ್‌ ಮೊದಲ ಬಾಲ್‌ನಲ್ಲೇ ಸಿಕ್ಸರ್‌ನ್ನೇ ಹೊಡೆದಿದಾರೆ. ಇದೀಗ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ ಸಿನಿಮಾ ತೆರೆಕಂಡು 21 ವರ್ಷವಾಗಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮವನ್ನು ಆಚರಿಸಿದ್ದಾರೆ.

ಹೌದು ನಟ ದರ್ಶನ್‌ ತಂದೆ ನಿಧನ ಹೊಂದಿದ ಬಳಿಕ ನಾಯಕನಾಗಿ ಪರಂಪರೆಯನ್ನು ಮುಂದುವರಿಸಬೇಕು ಎಂದು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಾಗ, ಮೊದಲಿಗೆ ತಮ್ಮ ಸಿನಿಜರ್ನಿಯನ್ನು ಆರಂಭಿಸಿದ್ದು ಲೈಟ್ ಬಾಯ್ ಆಗಿ. ಬಳಿಕ ಸಣ್ಣಪುಟ್ಟ ಪಾತ್ರಗಳಲ್ಲಿ ಬಣ್ಣ ಹಚ್ಚುವ ಮೂಲಕ ನಟನೆಯ ಪಯಣವನ್ನು ಆರಂಭಿಸಿದ ದರ್ಶನ್ 1997ರ ಮಹಾಭಾರತ ಸಿನಿಮಾದಲ್ಲಿ ನಟಿಸಿದರು. ಬಳಿಕ ದೇವರ ಮಗ, ವಲ್ಲರಸು, ಎಲ್ಲರ ಮನೆ ದೋಸೇನೂ, ಮಿಸ್ಟರ್ ಹರಿಶ್ಚಂದ್ರ ಹಾಗೂ ಭೂತಯ್ಯನ ಮಕ್ಕಳು ಸಿನಿಮಾಗಳಲ್ಲೂ ಸಹ ದರ್ಶನ್ ಪುಟ್ಟ ಪಾತ್ರಗಳನ್ನು ನಿರ್ವಹಿಸಿದರು.

ಹೀಗೆ ಹಂತಹಂತವಾಗಿ ಮೇಲೇರಲು ಯತ್ನಿಸುತ್ತಿದ್ದ ನಟ ದರ್ಶನ್ ಅವರಿಗೆ ನಾಯಕನಾಗಲು ವೇದಿಕೆಯಾದದ್ದು ಮೆಜೆಸ್ಟಿಕ್ ಸಿನಿಮಾ. 2022ರ ಫೆಬ್ರವರಿ 8ರಂದು ಬಿಡುಗಡೆಯಾಗಿದ್ದ ಈ ಸಿನಿಮಾಕ್ಕೆ ಇಂದು 21 ವರ್ಷಗಳು ತುಂಬಿದ್ದು, ತಮ್ಮ ನೆಚ್ಚಿನ ನಟ ಹೀರೊ ಆಗಿ ಬಣ್ಣ ಹಚ್ಚಿದ ಮೊದಲ ಸಿನಿಮಾದ ವಾರ್ಷಿಕೋತ್ಸವವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸುತ್ತಿದ್ದಾರೆ. ರೌಡಿಸಂ ಹಾಗೂ ಲವ್ ಸ್ಟೋರಿ ಕಥೆಯನ್ನು ಹೊಂದಿದ್ದ ಈ ಸಿನಿಮಾಕ್ಕೆ ಪಿ ಎನ್ ಸತ್ಯ ನಿರ್ದೇಶನವಿತ್ತು ಹಾಗೂ ಬಾ ಮಾ ಹರೀಶ್ ಬಂಡವಾಳ ಹೂಡಿದ್ದರು.

ಇದನ್ನೂ ಓದಿ : ನಿರ್ದೇಶಕ ಉಮಾಪತಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಸಿನಿಮಾ ಮಾಡ್ತಾರಾ ? ಯಾವಾಗ

ಇದನ್ನೂ ಓದಿ : ಜಾಕ್ವೆಲಿನ್, ನೋರಾ ಅಲ್ಲ, ‘ಕಬ್ಜ’ ಐಟಂ ಸಾಂಗ್‌ನಲ್ಲಿ ಕುಣಿಯೋದು ಯಾರು ಗೊತ್ತಾ?

ಇದನ್ನೂ ಓದಿ : ಕಬ್ಜದಲ್ಲಿ ಶಿವಣ್ಣ ಇದ್ದಾರೆಂದು ನಟಿ ಪ್ರಿಯಾಂಕಾ ಉಪೇಂದ್ರ ಮಾತಿಗೆ ಕುತೂಹಲಕಾರಿ ಉತ್ತರ ಕೊಟ್ಟ ಆರ್.ಚಂದ್ರು

ದರ್ಶನ್ ದಾಸ ಪಾತ್ರದಲ್ಲಿ ಮಿಂಚಿದರೆ, ನಾಯಕಿಯಾಗಿ ಸ್ಪರ್ಶ ಅಭಿನಯಿಸಿದ್ದರು. ಇನ್ನು ದರ್ಶನ್ ನಾಯಕನಾಗಿ ನಟಿಸಿದ್ದ ಈ ಮೊದಲ ಸಿನಿಮಾವೇ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಂಡಿತ್ತು. ಸಿನಿಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿದ್ದ ಮೆಜೆಸ್ಟಿಕ್ ಮೂಲಕ ದರ್ಶನ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಆರಂಭ ಪಡೆದುಕೊಂಡು ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದರು. ಹಾಗೂ ನಂತರದ ದಿನಗಳಲ್ಲಿ ಹಲವು ಆಫರ್‌ಗಳನ್ನು ಪಡೆದುಕೊಂಡಿದ್ದರು.

Sandalwood actor Darshan starrer Majestic Movie celebrates 21 years

Comments are closed.