ಸತತ ನಾಲ್ಕನೇ ವಾರವೂ ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿರೋ ಸಿನಿಮಾ ‘ಲವ್ ಮಾಕ್ಟೇಲ್’. ಸ್ಯಾಂಡಲ್ ವುಡ್ ಪ್ರೇಕ್ಷಕರ ಮನಗೆದ್ದಿರೋ ಲವ್ ಮಾಕ್ಟೇಲ್ ಇದೀಗ ವಿದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಚಿತ್ರ 25 ದಿನಗಳ ಸಂಭ್ರಮದಲ್ಲಿರೊ ಚಿತ್ರತಂಡಕ್ಕೆ ದೂರದ ಕ್ಯಾಲಿಫೋರ್ನಿಯಾದಲ್ಲೂ ‘ಲವ್ ಮಾಕ್ಟೇಲ್’ ಹೌಸ್ಫುಲ್ ಪ್ರದರ್ಶನ ಕಾಣುತ್ತಿರೋದು ಮತ್ತಷ್ಟು ಖುಷಿ ನೀಡಿದೆ.

ಡಾರ್ಲಿಂಗ್ ಕೃಷ್ಣ ಆಕ್ಷನ್ ಕಟ್ ಹೇಳಿ ನಾಯಕನಾಗಿ ನಟಿಸಿರೋ ‘ಲವ್ ಮಾಕ್ಟೇಲ್’ ಸ್ಯಾಂಡಲ್ ವುಡ್ ನ ಉತ್ತಮ ಸಿನಿಮಾಗಳಲ್ಲೊಂದು. ಈ ವಾರ ಇನ್ನಷ್ಟು ಚಿತ್ರಮಂದಿರಿಗಳಲ್ಲಿ ‘ಲವ್ ಮಾಕ್ಟೇಲ್’ ತೆರೆಕಾಣಲಿದೆ. ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಜಂಟಿಯಾಗಿ ನಿರ್ಮಾಣ ಮಾಡಿದ್ದು, ಈ ಸಿನಿಮಾದ ಗೆಲುವು ಇಬ್ಬರ ಜೀವನದ ದಾರಿಯಲ್ಲಿ ದೊಡ್ಡ ತಿರುವಾಗಲಿದೆ.

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೊತೆ ಅಮೃತ ಅಯ್ಯಂಗಾರ್ ಸಹತೆರೆ ಹಂಚಿಕೊಂಡಿದ್ದಾರೆ. ರಘು ದಿಕ್ಷಿತ್ ಮ್ಯೂಸಿಕ್ ಗೆ ಚಂದನವನ ಫಿದಾ ಆಗಿದೆ.

ಡಾರ್ಲಿಂಗ್ ಕೃಷ್ಣ ಈ ಸಿನಿಮಾ ಮೂಲಕ ಚಂದನವನದಲ್ಲಿ ದೊಡ್ಡ ಮಟ್ಟದ ಕಮ್ ಬ್ಯಾಕ್ ಮಾಡಿದ್ದು, ಕಿಚ್ಚ ಸುದೀಪ್ ಸಿನಿಮಾಕ್ಕೆ ಸಾಥ್ ಕೊಟ್ಟಿದ್ದು ಪ್ರತಿಯೊಂದು ಸಂದರ್ಶನದಲ್ಲೂ ನೆನಪು ಮಾಡಿಕೊಳ್ಳುತ್ತಾರೆ ಡಾರ್ಲಿಂಗ್ ಕೃಷ್ಣ.

ಮೈಸೂರಿನಲ್ಲಿ ಒಂದೇ ಒಂದು ಶೋ ಇದ್ದು, ಈ ವಾರ 16 ಷೋ ಕಾಣಲಿದೆ. ಲವ್, ಸೆಂಟಿಮೆಂಟ್, ಕಾಮಿಡಿ… ಹೀಗೆ ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿ ಪ್ರೇಕ್ಷಕರಿಗೆ ಮನೋರಂಜನೆಯ ಬಾಡೂಣ ಉಣಬಡಿಸಿರೋ ಈ ಸಿನಿಮಾ ತಂಡಕ್ಕೆ ನಮ್ ಕಡೆಯಿಂದ ಅಭಿನಂದನೆಗಳು.