Rashmika Mandanna followers : ರಶ್ಮಿಕಾ ಮಂದಣ್ಣ ಫ್ಯಾನ್ಸ್ ಗೆ ಸಿಹಿಸುದ್ದಿ: ಇನ್ ಸ್ಟಾದಲ್ಲಿ 2.5 ಕೋಟಿ ದಾಟಿದ ಫಾಲೋವರ್ಸ್

ಸದ್ಯ ಪುಷ್ಪಾ ಸಿನಿಮಾ ಗೆಲುವಿನ ಸಂಭ್ರಮದಲ್ಲಿರೋ ರಶ್ಮಿಕಾ ಮಂದಣ್ಣ ಈಗ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಸಾಮೆ ಸಾಮೇ ಎಂದು ಪುಷ್ಪ ಸಿನಿಮಾದಲ್ಲಿ ಸೊಂಟಬಳುಕಿಸಿ ಗೆದ್ದ ರಶ್ಮಿಕಾ ಇನ್ ಸ್ಟಾಗ್ರಾಂ ಪಾಲೋವರ್ಸ್ ಸಂಖ್ಯೆ 2.5 ಕೋಟಿ (Rashmika Mandanna 2.5 Crore followers Instagram) ದಾಟಿದೆ. ಸದ್ಯ ಹಿಂದಿ, ತಮಿಳು, ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿರೋ ರಶ್ಮಿಕಾ, ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

ತಮ್ಮ ಪೋಟೋಗಳು, ನಾಯಿ ಜೊತೆ ಬಿಡುವಿನ ವೇಳೆಯಲ್ಲಿ ಮಾಡೋ ತುಂಟಾಟ ಎಲ್ಲವನ್ನು ರಶ್ಮಿಕಾ ಆಗಾಗ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ನ್ಯಾಶನಲ್ ಕ್ರಶ್ ಎನ್ನಿಸಿಕೊಂಡಿರೋ ರಶ್ಮಿಕಾ ಜನಪ್ರಿಯತೆ ಪ್ರತಿನಿತ್ಯ ಹೆಚ್ಚುತ್ತಲೇ ಇದ್ದು ಮೊದಲ ಚಿತ್ರದಲ್ಲೇ ಬಿಗ್ ಬಿ ಅಮಿತಾಬ್ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ 2021 ರ ಫೋರ್ಬ್ಸ್ ನಲ್ಲಿ ಸ್ಥಾನ ಕೂಡ ಪಡೆದುಕೊಂಡಿದ್ದಾರೆ.

ಹೀಗಾಗಿ ಸೋಷಿಯಲ್ ಮೀಡಿಯಾದಲ್ಲೂ ರಶ್ಮಿಕಾ ಫಾಲೋವರ್ಸ್ ಸಂಖ್ಯೆ ಹೆಚ್ಚಿದ್ದು, ಇನ್ ಸ್ಟಾಗ್ರಾಂನಲ್ಲಿ ರಶ್ಮಿಕಾ ಸದ್ಯ 25 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಸೌತ್ ಇಂಡಸ್ಟ್ರಿ ಯಲ್ಲಿ ಅತಿಹೆಚ್ಚು ಇನ್ ಸ್ಟಾಗ್ರಾಂ ಫಾಲೋವರ್ಸ್ ಪಡೆದ ನಟಿ ಎಂಬ ಖ್ಯಾತಿಗೂ ಪಾತ್ರವಾಗಿದ್ದಾರೆ. ಇನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಗೆ 25 ಮಿಲಿಯನ್ ಪಾಲೋವರ್ಸ್ಟ್ ಸಿಕ್ಕಿರೋದಿಕ್ಕೆ ರಶ್ಮಿಕಾ‌ಮಂದಣ್ಣ ಕೂಡ ಸೆಲಿಬ್ರೆಟ್ ಮಾಡಿದ್ದು 25 ಎಂಬ ಬಲೂನ್ ಜೊತೆ ಖುಷಿ ಹಂಚಿಕೊಂಡಿದ್ದಾರೆ.

ವಾವ್ 25 ಮಿಲಿಯನ್ ಎಂದಿರುವ ರಶ್ಮಿಕಾ ಇದು ಮರೆಯುವಂತದಲ್ಲ ಸೆಲಿಬ್ರೇಟ್ ಮಾಡೋಣ ಎಂದಿದ್ದಾರೆ. ಇನ್ನು ರಶ್ಮಿಕಾ ಈ ಖುಷಿಗೆ ಹಲವು ನಟ-ನಟಿಯರು ಶುಭಾಶಯ ಕೋರಿದ್ದಾರೆ. ಇನ್ನೊಂದೆಡೆ ಉಳಿದ ಸೋಷಿಯಲ್ ಮೀಡಿಯಾಗಳಾದ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲೂ ರಶ್ಮಿಕಾ ಗೆ ಅಪಾರ ಅಭಿಮಾನಿಗಳಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಪುಷ್ಪಾ ಗೆಲುವಿನ ಸಂಭ್ರಮ ದಲ್ಲಿ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪುಷ್ಪಾ ತಾವು ಎದುರಿಸಿದ ಬಾಡಿ ಶೇಮಿಂಗ್, ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಮಾತ್ರವಲ್ಲ ಟ್ರೋಲ್ ನಿಂದಾಗಿ ನಟನೆಯಿಂದ ದೂರ ಸರಿಯುವ ಚಿಂತನೆ ನಡೆಸಿದ್ದೇ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾರೆ.

ಪುಷ್ಪ ಸಿನಿಮಾದ ಪ್ರಮೋಶನ್ ಗಾಗಿ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರಿಗೆ ಬಂದಿದ್ದ ರಶ್ಮಿಕಾ ಕನ್ನಡದಲ್ಲೇ ಮಾತನಾಡಿ ಗಮನಸೆಳೆದಿದ್ದರು. ಮಾತ್ರವಲ್ಲ ಪುಷ್ಪಾ ಸಿಕ್ವೆನ್ಸ್ ೨ ಗೆ ನಾನೇ ಡಬ್ಬಿಂಗ್ ಮಾಡ್ತಿನಿ ಎಂದು ಭರವಸೆ ನೀಡಿ ಅಭಿಮಾನಿಗಳ ಮನಗೆದ್ದಿದ್ದಾರೆ.

(Rashmika Mandanna 2.5 Crore followers on instagram)

Comments are closed.