World Radio Day 2022: ನಮ್ಮ ಮೊಬೈಲಲ್ಲೇ ರೇಡಿಯೋ ಕೇಳಬಹುದು! ವಿಶ್ವ ರೇಡಿಯೋ ದಿನದಂದು ವಿಶೇಷ ಮಾಹಿತಿ ತಿಳಿಯಿರಿ

ಲೆಕ್ಕವಿಲ್ಲದಷ್ಟು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಯುಗದಲ್ಲಿ, ರೇಡಿಯೋವು ಸಂವಹನದ ಅತ್ಯಂತ ದೃಢವಾದ ಮತ್ತು ಹಳೆಯ ಮಾಧ್ಯಮವಾಗಿ ಉಳಿದಿದೆ. ಪ್ರತಿ ವರ್ಷ ಫೆಬ್ರವರಿ 13 ರಂದು, ವಿಶ್ವ ರೇಡಿಯೊ ದಿನವನ್ನು (World Radio Day 2022) ಜಗತ್ತಿನಾದ್ಯಂತ ಈಗಲು ಅತಿ ಹೆಚ್ಚು ಜನರು ಬಳಸುತ್ತಿರುವ ಸಂವಹನ ಮಾಧ್ಯಮಗಳಲ್ಲಿ ಒಂದಾದ ರೇಡಿಯೋವನ್ನು ಗೌರವಿಸಲು ಆಚರಿಸಲಾಗುತ್ತದೆ. ಹಾಗಾದರೆ ನಮ್ಮ ಮನೆಯಲ್ಲಿ ರೇಡಿಯೋ ಇಲ್ಲ, ನಾವು ರೇಡಿಯೋ ಕೇಳಬಹುದೇ? ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಿದ್ದಲ್ಲಿ ಹೌದು, ನೀವೂ ರೇಡಿಯೋವನ್ನು ಕೇಳಬಹುದು ಎಂದೇ ಉತ್ತರಿಸಬೆಕಾಗುತ್ತದೆ. ಏಕೆಂದರೆ ಇದೀಗ ರೇಡಿಯೊ ಕೇಳಲು ರೇಡಿಯೋ ಎಂಬ ಸಾಧನ ಬೇಕಿಲ್ಲ. ನಿಮ್ಮ ಕೈಲಿರುವ ಮೊಬೈಲ್ ಸಾಕು, ನೀವು ರೇಡಿಯೋ ಕೇಳಲು. ಅದು ಹೇಗೆ (how to listen radio in mobile) ಎಂದಿರಾ? ಇಲ್ಲಿದೆ ನೋಡಿ.

ಅಗಲದ ಟಿ.ವಿ, ತರಹೇವಾರಿ ಚಲನಚಿತ್ರಗಳು, ವಿವಿಧ ಕಾರ್ಯಕ್ರಮಗಳು, ದೊಡ್ಡ ಪ್ರೀಡ್ಜ್, ಅಂಗೈ ತುಂಬಿದ ಮೊಬೈಲ್ಗಳು, ಆಕಾಶವಾಣಿಗೆ ಯಾವತ್ತಿಗೂ ಸಾಟಿಯಾಗದ ಎಫ್. ಎಂ ಗಳಿದ್ದರೂ. ರೇಡಿಯೋದಷ್ಟು ಅವ್ಯಾವವು ಆಪ್ತವಾಗಿಲ್ಲ. ಮೊಬೈಲ್ ಫೋನ್‌ಗಳಲ್ಲಿ ಎಫ್ಎಂ ಮಾತ್ರ ಇದೆ, ರೇಡಿಯೋ ತರ ಚಾನೆಲ್‌ಗಳು ಬರುವುದಿಲ್ಲವಲ್ಲ ಎಂಬ ಕೊರಗು ಈಗ ನಿವಾರಣೆಯಾಗಿದೆ. ಎಲ್ಲ ಬಾನುಲಿ ಕೇಂದ್ರಗಳೂ ಈಗ ಆಕಾಶವಾಣಿಯು ಹೊರತಂದಿರುವ #NewsOnAir ಎಂಬ ಆ್ಯಪ್ ಮೂಲಕ ಲಭ್ಯವಿದೆ. NewsOnAir ಆ್ಯಪ್‌ನಲ್ಲಿ ಆಕಾಶವಾಣಿಯ ಮಂಗಳೂರು, ಮೈಸೂರು, ಬೆಂಗಳೂರು, ಹಾಸನ, ಧಾರವಾಡ, ಚಿತ್ರದುರ್ಗ, ಭದ್ರಾವತಿ ಮುಂತಾದ ಬಾನುಲಿ ನಿಲಯಗಳ ಕಾರ್ಯಕ್ರಮಗಳನ್ನು ಆನಂದಿಸಬಹುದು. ಜತೆಗೆ ವಿವಿಧ ಭಾರತಿ, ಎಫ್ಎಂ ರೈನ್‌ಬೋ, ಅಮೃತವರ್ಷಿಣಿ ಮುಂತಾದ ಕೇಂದ್ರಗಳ ಕಾರ್ಯಕ್ರಮಗಳನ್ನು ಕೇಳಬಹುದು. ನ್ಯೂಸ್ ಆನ್ ಏರ್ ಅಪ್ಲಿಕೇಶನ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಲಿಂಕ್ ಇಲ್ಲಿದೆ: https://play.google.com/store/apps/details?id=com.parsarbharti.airnews

ಆಕಾಶವಾಣಿ ಒಂದು ಕೇಳುಗರ ಮಾಧ್ಯಮ. ಹೆಚ್ಚು ಕಡಿಮೆ ಎಲ್ಲಾ ನಗರ ಮತ್ತು ಗ್ರಾಮೀಣ ಭಾಗಗಳಿಗೆ ತಲುಪಿದ ಏಕೈಕ ಮಾಧ್ಯಮ. ಕರ್ನಾಟಕದಲ್ಲಿ ಪ್ರಮುಖವಾಗಿ ಧಾರವಾಡ ಆಕಾಶವಾಣಿ ಹೆಸರುವಾಸಿಯಾಗಿದೆ . ಗ್ರಾಮೀಣ ಭಾಗದ ಜನರಿಗೆ ಆಕಾಶವಾಣಿಯೇ ಗಡಿಯಾರವಾಗಿತ್ತು. ದ.ರಾ.ಬೇಂದ್ರೆ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಮುಂತಾದವರು ಆಕಾಶವಾಣಿಯ ಹಿರಿಮೆಯನ್ನು ಹೆಚ್ಚಿಸಿದರು. ಆಕಾಶವಾಣಿಯು ತನ್ನ ಕಾರ್ಯಕ್ರಮಗಳ ಮೂಲಕ ಅತೀ ಸಾಮಾನ್ಯ ಜನರನ್ನೂ ತಲುಪಿದೆ. ಇತ್ತೀಚೆಗೆ ‌ಸಾಮಾಜಿಕ ಜಾಲತಾಣಗಳಲ್ಲೂ ಕಾರ್ಯಕ್ರಮಗಳ ಮುದ್ರಿತ ಪ್ರಸಾರವನ್ನು ಈಗ ಎಲ್ಲರೂ ಕೇಳಬಹುದು. ಆಧುನಿಕತೆಯ ಭರಾಟೆಯಲ್ಲಿ ಆಕಾಶವಾಣಿ ಮೂಲೆಗುಂಪಾದರೂ ಸಹ ತನ್ನದೇ ಆದ ಹಿರಿಮೆಯನ್ನು ಕಾಯ್ದುಕೊಂಡಿದೆ. ಸಮುದಾಯ ರೇಡಿಯೋ, ಎಫ್ ಎಂ ರೇಡಿಯೋಗಳ ಮೂಲಕ ಆಧುನಿಕತೆಯ ಜೊತೆ ಜೊತೆಗೆ ನಡೆಯುತ್ತಿದೆ. ತನ್ನ ಮೂಲ ಶ್ರೋತೃಗಳಿಂದ ಆಕಾಶವಾಣಿ ಈಗಲೂ ಪ್ರಚಲಿತದಲ್ಲಿದೆ

1936ರಲ್ಲಿ ಸ್ಥಾಪನೆಗೊಂಡು ಇದೀಗ 23 ಭಾಷೆಗಳಲ್ಲಿ 479ಕ್ಕೂ ಹೆಚ್ಚು ಬಾನುಲಿ ಕೇಂದ್ರಗಳ ಮೂಲಕ ದೇಶದ ಜನಸಂಖ್ಯೆಯ ಶೇ.90ಕ್ಕೂ ಹೆಚ್ಚು ಮಂದಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವುದರಿಂದಲೇ ಪ್ರಧಾನಿಯವರೂ ಮನ್ ಕೀ ಬಾತ್ ಮೂಲಕ ಸಂದೇಶ ನೀಡಲು ಬಾನುಲಿ ಕೇಂದ್ರವನ್ನೇ ಬಳಸಿಕೊಂಡಿರುವುದು ವಿಶೇಷವಾಗಿದೆ.

ಮೊಬೈಲ್ ಹೆಸರಿನಲ್ಲಿ ಆಗುತ್ತಿರುವ ತಂತ್ರಜ್ಞಾನ ಬೆಳವಣಿಗೆ ಹಾಗೂ ಎಫ್ಎಂ ಹೆಸರಿನಲ್ಲಿ ಬರುತ್ತಿರುವ ರೇಡಿಯೋ ಚಾನೆಲ್‌ಗಳ ಭರಾಟೆಯಲ್ಲಿ ಸುಂದರ ಸುಲಲಿತವಾದ ಸರಕಾರಿ ಸ್ವಾಮ್ಯದ ರೇಡಿಯೋ ಕೇಂದ್ರಗಳು ಮೂಲೆ ಗುಂಪಾಗಿದ್ದರೂ, ಅದರದ್ದೇ ಆದ ಕೇಳುಗರು ಆಕಾಶವಾಣಿಯ ಕೇಳುವುದನ್ನು ನಿಲ್ಲಿಸಿಲ್ಲ.

ಇದನ್ನೂ ಓದಿ: Majestic Film Darshan Birthday: ಮೆಜೆಸ್ಟಿಕ್ ಸಿನಿಮಾ ಮತ್ತೆ ಬಿಡುಗಡೆಗೆ ಸಜ್ಜು; ಫೆ.16ಕ್ಕೆ ನಿಮ್ಮ ನೆಚ್ಚಿನ ಥಿಯೇಟರ್‌ಗಳಲ್ಲಿ ದರ್ಶನ್ ಅಬ್ಬರ

(World Radio Day 2022 theme how to listen radio in mobile)

Comments are closed.