ಸಂಕ್ರಾಂತಿ ಪ್ರಯುಕ್ತ ಕನ್ನಡ ಸಿನಿಮಾಗಳಿಗೆ ಇಲ್ಲ ಥಿಯೇಟರ್‌ ಭಾಗ್ಯ

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳಿಗೆ ಸಿನಿಮಂದಿರ ಸಿಗದೆ ಒದ್ದಾಡುತ್ತಿವೆ. ಇದು ಪ್ರತಿ ಬಾರಿಯೂ ವಿಚಿತ್ರದಂತೆ ಕಾಣುತ್ತಿರುವ ಸತ್ಯವೂ ಹೌದು. ಬೇರೆ ಬೇರೆ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು ಬಂದಾಗ ಮೊದಲಿಗೆ ಪೆಟ್ಟು ತಿನ್ನುವುದೇ ಕನ್ನಡದ ಸಿನಿಮಾಗಳು. ಈ ಬಾರಿಯೂ ಹಾಗೆಯೇ ಆಗುತ್ತಿದೆ. ಈ ಮಕರ ಸಂಕ್ರಾಂತಿಗೆ (Makar Sankranti 2023) ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳ ಶೋಗಳನ್ನು ಮುಲಾಜಿಲ್ಲದೆ ಕಿತ್ತು ಹಾಕಲಾಗಿದೆ. ಇದ್ದುದರಲ್ಲಿ ಫೈಟ್ ಕೊಡುತ್ತಿರುವ ಏಕೈಕ ಸಿನಿಮಾ ಎಂದರೆ ನಟ ಶಿವರಾಜ್‌ಕುಮಾರ್‌ ಹಾಗೂ ನಿರ್ದೇಶಕ ಹರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ವೇದ ಮಾತ್ರ.

ತಮಿಳಿನ ವಾರಿಸು ಸಿನಿಮಾಕ್ಕೆ 760 ಹಾಗೂ ತುನಿವು ಸಿನಿಮಾಕ್ಕೆ 525 ಶೋ ನೀಡಲಾಗಿದೆ. ಒಂದು ದಳಪತಿ ವಿಜಯ್ ಅಭಿನಯದ ಸಿನಿಮಾವಾದರೆ, ಮತ್ತೊಂದು ಅಜಿತ್ ಅಭಿನಯದ ಸಿನಿಮಾವಾಗಿದೆ. ಇದು ಸಂಕ್ರಾತಿಯಂದು ಬೆಂಗಳೂರಿನ ಸಿನಿಮಂದಿರಗಳಲ್ಲಿ ಸಿನಿಮಾ ಶೋಗಳ ಲೆಕ್ಕವಾಗಿದೆ. ಈ ಎರಡು ಸಿನಿಮಾಗಳು ಇಬ್ಬರೂ ತಮಿಳು ಸೂಪರ್ ಸ್ಟಾರ್ ನಟರದ್ದಾಗಿದೆ. ಇಡೀ ರಾಜ್ಯದ ಸಿನಿಮಂದಿರಗಳ ಲೆಕ್ಕಕ್ಕೆ ಬಂದರೆ ವಾರಿಸುಗೆ 150ಕ್ಕೂ ಹೆಚ್ಚು ಹಾಗೂ ತುನಿವುಗೆ 100ಕ್ಕೂ ಹೆಚ್ಚು ಸಿನಿಮಂದಿರಗಳು ಪ್ರದರ್ಶನಕ್ಕೆ ಸಿಕ್ಕಿರುತ್ತದೆ.

ಇದನ್ನೂ ಓದಿ : 10 ಮಿಲಿಯನ್ ವೀವ್ಸ್ ಸಿಗದೆ ಅಜನೀಶ್ ಲೋಕನಾಥ್‌ಗೆ ಬಿಡುಗಡೆ ಭಾಗ್ಯವಿಲ್ಲ ಎಂದ “ಹಾಸ್ಟೆಲ್ ಹುಡುಗರು”

ಇದನ್ನೂ ಓದಿ : ಆದಿಲ್‌ ದುರಾನಿ ಜೊತೆ ಎರಡನೇ ಮದುವೆ ಆದ ರಾಖಿ ಸಾವಂತ್‌ ಮದುವೆ : ವೈರಲ್‌ ಆಯ್ತು ನಟಿಯ ಮದುವೆ ಪೋಟೋ

ಇದನ್ನೂ ಓದಿ : ನಟ ಪರಂಬ್ರತ ಚಟರ್ಜಿ ಜೊತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಗಿಣಿ ದ್ವಿವೇದಿ

ಇದನ್ನೂ ಓದಿ : ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಸ್ಟೈಲಿಶ್‌ ಅವತಾರದಲ್ಲಿ ನಟ ಶಿವರಾಜ್‌ಕುಮಾರ್

ಇನ್ನು ತೆಲುಗಿನ ಚಿರಂಜೀವಿ ಮತ್ತು ಬಾಲಕೃಷ್ಣ ಸಿನಿಮಾಗಳದ್ದೂ ಇದೇ ಕಥೆ. ಚಿರಂಜೀವಿ ಮತ್ತು ರವಿತೇಜ ಕಾಂಬಿನೇಷನ್ನಿನ ವಾಲ್ತೇರು ವೀರಯ್ಯ ಸಿನಿಮಾಕ್ಕೆ 150ಕ್ಕೂ ಅಧಿಕ ಸಿನಿಮಾ ಮಂದಿರಗಳು ಪ್ರದರ್ಶನಕ್ಕೆ ಸಿಕ್ಕಿದ್ದರೆ, ಇದೇ ಮೊದಲ ಬಾರಿ ಬಾಲಕೃಷ್ಣ, ದುನಿಯಾ ವಿಜಯ್ ಅಭಿನಯದ ವೀರಸಿಂಹರೆಡ್ಡಿ ಸಿನಿಮಾ ಕೂಡಾ 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಇವುಗಳ ಮಧ್ಯೆ ಗಟ್ಟಿಯಾಗಿ ನಿಂತಿರುವುದು ಕನ್ನಡ ಸಿನಿಮಾವೆಂದರೆ ವೇದ ಮಾತ್ರ. ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಸ್ಕ್ರೀನ್ ವೇದ ಸಿನಿಮಾಕ್ಕೆ ಸಿಕ್ಕಿವೆ. ಉಳಿದಂತೆ ಯಾವ ಸಿನಿಮಾಗಳೂ ಒಂದಂಕಿಗಿಂತ ಹೆಚ್ಚು ಶೋಗಳನ್ನು ಪಡೆದುಕೊಂಡಿರುವುದಿಲ್ಲ.

ಇದನ್ನೂ ಓದಿ : Golden Globes 2023 : ಗೋಲ್ಡನ್ ಗ್ಲೋಬ್ಸ್‌ನಲ್ಲಿ ಅತ್ಯುತ್ತಮ ಮೂಲ ಹಾಡಿಗಾಗಿ ಪ್ರಶಸ್ತಿ ಬಾಚಿಕೊಂಡ ‘ನಾಟು ನಾಟು’ ಹಾಡು

ಇದನ್ನೂ ಓದಿ : Vikrant Rona in Oscar list: ಕಾಂತಾರ ಅಷ್ಟೇ ಅಲ್ಲ: ಆಸ್ಕರ್‌ ಲಿಸ್ಟ್‌ ನಲ್ಲಿದೆ ʻವಿಕ್ರಾಂತ್‌ ರೋಣʼ!

Makar Sankranti 2023: Kannada movies didn’t get theater luck during Sankranti

Comments are closed.