ದಯವಿಟ್ಟು ಈ ಫಿಲ್ಮ್‌ ನೋಡಬೇಡಿ…!

ಮಲಯಾಳಂ ಚಿತ್ರರಂಗ ಹಾರರ್-ಥ್ರಿಲ್ಲರ್ ಗಳನ್ನು ಕಟ್ಟಿಕೊಡುವುದರಲ್ಲಿ ಏಕ್ ನಂಬರ್! ಹಾರರ್ ಮೂವಿಗಳಿಗೆ ಭವ್ಯ ಮಹಲ್ ಇರಬೇಕು, ಭೂತ ಚೇಷ್ಟೆ ವಿಪರೀತವಾಗಿ ಕಣ್ಣಿಗೆ ರಾಚುವಂತಿರಬೇಕು, ಅಲ್ಲೊಂದು ಇಲ್ಲೊಂದು ಸೆಂಟಿಮೆಂಟ್,ಡ್ಯೂಯೆಟ್ ಸಾಂಗ್ ಇರಬೇಕು ಎನ್ನುವ ಮಸಾಲಾ ಹಾರರ್ ಸೂತ್ರವನ್ನು ಮುರಿದು ಬದಿಗೊತ್ತಿದ ಮಲಯಾಳಂ ಹಾರರ್ ಚಿತ್ರಗಳು ಒಂದರಿಂದ ಹತ್ತು ಕೋಟಿ ಒಳಗೆ ನಿರ್ಮಾಣವಾಗಿ 100-200 ಕೋಟಿ ಗಳಿಗೆ ಮಾಡಿದ ಉದಾಹರಣೆಯಿದೆ.

ಈಗ ನಾವು ಹೇಳುತ್ತಿರುವ ಕಥೆ ತುಂಬಾ ವಿರಳ ಜನರಿಗೆ ಗೊತ್ತಿರುವ ಒಂದು ‘ಭೂತ ಪ್ರಪಂಚ’ ಅಥವಾ ಹಾರರ್ ಯೂನಿವರ್ಸ್ ಆಗಿರುವ ರಾಹುಲ್ ಸದಾಶಿವನ್ ಯೂನಿವರ್ಸ್! ರಾಹುಲ್ ಸದಾಶಿವನ್ ಅಂದ್ರೆ ಯಾರು? ಅಂತೀರಾ? ಸೋತು ಸುಣ್ಣವಾಗಿದ್ದ ಮಮ್ಮೂಟ್ಟಿಗೆ ಭಾರೀ ಯಶಸ್ಸು ನೀಡಿದ, ಭ್ರಮಯುಗಂ ನ ಡೈರೆಕ್ಟರ್. ಇವರು ಮಾಡಿದ್ದು ನಾಲ್ಕೇ ನಾಲ್ಕು ಚಿತ್ರಗಳಾದರೂ ಇವು ನಾಲ್ಕೂ ಸೂಪರ್ ಡೂಪರ್ ಹಿಟ್ ಹಾಗೂ ಮಲಯಾಳಂನಲ್ಲಿ ಕ್ರಾಂತಿ ಮಾಡಿರುವಂತಹವು.

ಇದನ್ನೂ ಓದಿ: ಬಿಎಸ್‌ ಎಸ್‌ ಎಲ್‌ ಇಂದ ಬಂಪರ್‌ ಆಫರ್‌! ಬರೀ 225 ರೂಪಾಯಿಗೆ ಇಷ್ಟೆಲ್ಲ ಪ್ರಯೋಜನ

https://kannada.newsnext.live/business/bsnl-new-silver-jubilee-prepaid-plan-offer-details

ಈಗ ಇವರ ಹೊಸ ಚಿತ್ರವೊಂದು ಜನರ ಮನಸಲ್ಲಿ ಭಾರೀ ಕೌತುಕ ಹುಟ್ಟಿಸಿ ಗೆದ್ದಿದೆ. ಇದು “ಡಯಸ್ ಇರೇ” ಎಂಬ ಚಲನಚಿತ್ರ, ಮೋಹನ್ ಲಾಲ್ ಅವರ ಮಗ ಪ್ರಣವ್ ನಟಿಸಿದ ಚಿತ್ರ. ಚಿತ್ರ ಸಿಕ್ಕಾಪಟ್ಟೆ ಸಿಂಪಲ್ ಆಗಿದೆ. ಆದ್ರೆ ಒಬ್ರೇ ಕೂತು ನೋಡಿದ್ರೆ ಹೊಟ್ಟೆ ತೊಳಲಾಡಿ ರಾತ್ರಿ ಒಬ್ಬರೇ ಎದ್ದು ಎಲ್ಲಿಗೂ ಹೋಗಲಾರದಷ್ಟು ಭಯ ಮೂಡಿಸೋದು ನಿಜ! ಸಿಕ್ಕಾಪಟ್ಟೆ “ಹೋಂ” ವರ್ಕ್ ಮಾಡ್ಕೊಂಡೇ ರಾಹುಲ್ ಈ ಮೂರು ಚಿತ್ರಗಳನ್ನು ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಒಂಟಿ ಮನೆ, ಎದುರಿಗೊಂದು ಬಾವಿ, ಬಾವಿಯೊಳಗೆ ಕೊಳೆತ ಹೆಣ! ಆ ಹೆಣ ಸಿಕ್ಕ ಮೇಲೆ ತೆರೆದುಕೊಳ್ಳುವ ‘ಭೂತಕಾಲ’, ಒಂದು ಜೆನ್ ಝೀ ಪ್ರೀತಿ, ಒಬ್ಬ ಮುಗ್ಧ ಪ್ರೇಮಿ, ತಾಯಿಯೊಬ್ಬಳ ವ್ಯಾಮೋಹ, ಐಶಾರಾಮಿ ಹುಡುಗನ ತೊಳಲಾಟ, ಸತ್ತವರ ಮನೆಯ ಹುಡುಗನ ನಿರ್ಭಾವುಕತೆ, ಕೇವಲ ‘ಪರಿಚಯ’ ಇದ್ದೇನೆ ಎಂಬ ಒಂದೇ ಕಾರಣಕ್ಕೆ ಸಮಸ್ಯೆಗಳಿದು ಸಾವು ಮುಟ್ಟಿ ಬರುವ ಅತೀಂದ್ರಿಯ ಶಕ್ತಿಯ ವ್ಯಕ್ತಿ. ಇವೆಲ್ಲವೂ ನಿಮ್ಮ ಹೃದಯವನ್ನು ದಂಗು ಬಡಿಸದೇ ಇರದು! ಏನು ಚಂದ ಅಂದ್ರೆ ಇಂಟರ್ವಲ್ ಮುಂಚೆಗೆ ಸಿಗುವ ‘ಭ್ರಮಯುಗಂ’ ನ ಲಿಂಕ್ ಮತ್ತು ನಿರ್ದೇಶಕ ಕ್ಲೈಮ್ಯಾಕ್ಸ್ ಅನ್ನು ತನ್ನ ಮೊದಲ‌ ಹಿಟ್ ಚಿತ್ರಕ್ಕೆ ಜೋಡಿಸಿದ ಪರಿ.

ಮಲಯಾಳಂ ನಲ್ಲಿ ಭಾರೀ ಸದ್ದು ಮಾಡಿ ನೂರು ಕೋಟಿ ಬಾಚಿದ ಸಿನೆಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಥಿಯೇಟರ್ ಅಲ್ಲಿ ಮಿಸ್ ಮಾಡ್ಕೊಂಡೋರು ಓಟಿಟಿಯಲ್ಲಿ ಈ ಫಿಲ್ಮ್ ಅನ್ನು ನೋಡಿ, ಅದರಲ್ಲೂ ಸೀರಿಸ್ ನಂತೆ ಭೂತಕಾಲಂ, ಭ್ರಮಯುಗಂ, ಡಯಸ್ ಇರೇ ಅನ್ನು ಒಂದೇ ದಿನದಲ್ಲಿ ಮುಗಿಸಿದರೆ ಆತ/ ಆಕೆನಿಜವಾಗ್ಲೂ ಧೈರ್ಯಶಾಲಿ ಅಂತ ಅನ್ಬೋದು!

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories