Mangal Dhillon Death : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಖ್ಯಾತ ನಟ ನಿರ್ದೇಶಕ ಮಂಗಲ್ ಧಿಲ್ಲೋನ್ ವಿಧಿವಶ

ಬಾಲಿವುಡ್‌ ಹಾಗೂ ಪಂಜಾಬಿ ಚಿತ್ರರಂಗದ ಖ್ಯಾತ ಹಿರಿಯ ನಟ ನಿರ್ದೇಶಕ ಮಂಗಲ್ ಧಿಲ್ಲೋನ್ (Mangal Dhillon Death) ಇನ್ನಿಲ್ಲ. ಹಲವು ವರ್ಷಗಳಿಂದಲೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಂಗಲ್‌ ಧಿಲ್ಲೋನಾ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಲೂಧಿಯಾನದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ.

ಪಂಜಾಬ್‌ನ ಫರೀದ್‌ಕೋಟ್‌ ಜಿಲ್ಲೆಯ ಸಿಖ್‌ ಕುಟುಂಬದಲ್ಲಿ ಜನಿಸಿದ ಮಂಗಲ್‌ ಧಿಲ್ಲೋನ್‌ ಅವರು ಪಂಜ್‌ ಗ್ರೇಯಿನ್‌ ಕಲಾನ್‌ ಸರಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದುಕೊಂಡಿದ್ದರು. ನಂತರದಲ್ಲಿ ತಮ್ಮ ತಂದೆಯ ಜೊತೆಗೆ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಮಂಗಲ್ ಅವರು ಲಖಿಂಪುರ ಖೇರಿ ಜಿಲ್ಲೆಯ ನಿಘಸನ್‌ನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಶಿಕ್ಷಣ ಪೂರೈಸಿದ್ದರು. ದೆಹಲಿಯ ಥಿಯೇಟರ್‌ನಲ್ಲಿ ಸ್ವಲ್ಪ ಸಮಯದ ಕಾಲ ಕೆಲಸ ಮಾಡಿದ್ದಾರೆ.

1980 ರಲ್ಲಿ ನಟನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅನ್ನು ಪೂರ್ಣಗೊಳಿಸಿದರು. ಮಂಗಲ್ ಮೊದಲು 1986 ರಲ್ಲಿ ಟಿವಿ ಶೋ ಕಥಾ ಸಾಗರ್ ಮೂಲಕ ಮನರಂಜನಾ ಉದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಅದೇ ವರ್ಷದಲ್ಲಿ, ಅವರು ಬುನಿಯಾದ್ ಎಂಬ ಶೀರ್ಷಿಕೆಯ ಮತ್ತೊಂದು ಟಿವಿ ಶೋನಲ್ಲಿ ಕಾಣಿಸಿಕೊಂಡರು. ಜುನೂನ್, ಕಿಸ್ಮತ್, ದಿ ಗ್ರೇಟ್ ಮರಾಠಾ, ಪ್ಯಾಂಥರ್, ಘುಟಾನ್, ಸಾಹಿಲ್, ಮೌಲಾನಾ ಆಜಾದ್, ಮುಜ್ರಿಮ್ ಹಜೀರ್, ರಿಶ್ತಾ, ಯುಗ್ ಮತ್ತು ನೂರ್ಜಹಾನ್ ಶೋಗಳು ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಿತ್ತು.

ಇದನ್ನೂ ಓದಿ : Animal Movie Teaser Out : ಅನಿಮಲ್ ಪ್ರಿ-ಟೀಸರ್ ಔಟ್ : ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವ ಅವತಾರದಲ್ಲಿ ಕಾಣಿಸಿಕೊಂಡ ರಣಬೀರ್ ಕಪೂರ್

ಮಂಗಲ್ ಧಿಲ್ಲೋನ್ ಅವರು ಖೂನ್ ಭಾರಿ ಮಾಂಗ್, ಝಖ್ಮಿ ಔರತ್, ದಯಾವನ್, ಕಹಾನ್ ಹೈ ಕಾನೂನ್, ನಾಕಾ ಬಂದಿ, ಅಂಬಾ, ಅಕೈಲಾ, ಜನಶೀನ್, ಟ್ರೈನ್ ಟು ಪಾಕಿಸ್ತಾನ್, ಮತ್ತು ದಲಾಲ್ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯದಾಗಿ 2017 ರಲ್ಲಿ ತೂಫಾನ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಂಗಲ್ ಧಿಲ್ಲೋನ್ ತನ್ನ ಜನ್ಮದಿನದ ಒಂದು ವಾರದ ಮೊದಲು, ಅಂದರೆ ಜೂನ್ 18 ರಂದು ವಿಧಿವಶರಾಗಿದ್ದಾರೆ. ಇದೀಗ ಖ್ಯಾತ ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

Mangal Dhillon Death: Famous actor and director Mangal Dhillon who was suffering from cancer passed away

Comments are closed.