Jamun Benefits in Diabetes : ಬೇಸಿಗೆಯಲ್ಲಿ ಸಿಗುವ ನೇರಳೆ ಮಧುಮೇಹಕ್ಕೆ ರಾಮಬಾಣ

ಬೇಸಿಗೆ ಕಾಲದಲ್ಲಿ ಸಿಗುವ (Jamun Benefits in Diabetes) ನೇರಳೆ ಹಣ್ಣು ಸಕ್ಕರೆ ಕಾಯಿಲೆ ಹಾಗೂ ಆರೋಗ್ಯಕ್ಕೆ ತುಂಬಾ ಬೆಸ್ಟ್‌. ಬಾಯಲ್ಲಿ ನೀರೂರಿಸುವಷ್ಟು ರುಚಿಕರವಾಗಿರುವುದರ ಹೊರತಾಗಿ, ಈ ಹಣ್ಣುಗಳನ್ನು ಸೇವಿಸುವ ಮೂಲಕ ಅನೇಕ ಆರೋಗ್ಯಕರ ಪ್ರಯೋಜನವನ್ನು ಪಡೆಯಬಹುದಾಗಿದೆ.

ನೇರಳೆ ಹಣ್ಣಿನಲ್ಲಿರುವ ಆರೋಗ್ಯಕರ ಅಂಶಗಳೇನು ?
ನೇರಳೆ ಹಣ್ಣುಗಳಲ್ಲಿ ಪ್ರೋಟೀನ್, ಫೈಬರ್, ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ಬಿ 6 ಸಮೃದ್ಧವಾಗಿದೆ. ಈ ಹಣ್ಣುಗಳು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದ್ದು, ಹಾಗೂ ಅದರ ಮಟ್ಟವನ್ನು ಸುಧಾರಿಸುತ್ತದೆ. ನೇರಳೆ ಹಣ್ಣು ನಮ್ಮ ದೇಹದಲ್ಲಿ ಜೀರ್ಣಕಾರಿ ಗುಣಗಳನ್ನು ಹೊಂದಿದೆ. ಈ ಹಣ್ಣುಗಳು ಗಮನಾರ್ಹವಾಗಿ ಮಧುಮೇಹ ರೋಗಿಗಳಿಗೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇಸಿಗೆ ಕಾಲದಲ್ಲಿ ಸಿಗುವ ಜಂಬೂನೇರಳೆ ಹಣ್ಣಗಳನ್ನು ಪ್ರತಿದಿನ ತಿನ್ನುವುದರಿಂದ ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದ ಬರುವುದನ್ನು ತಡೆಯುತ್ತದೆ.

ಇದನ್ನೂ ಓದಿ : Skin Glow Tips‌ : ಚರ್ಮದ ಕಾಂತಿ ಹೆಚ್ಚಿಸಲು ಬಿಟ್ರೋಟ್‌ ಅನ್ನು ಹೀಗೆ ಬಳಸಿ

ಇದನ್ನೂ ಓದಿ : Stroke Recovery Tips‌ : ಪಾರ್ಶ್ವವಾಯುವಿನಿಂದ ಚೇತರಿಸಿಕೊಳ್ಳಲು ಜೀವನ ಶೈಲಿ ಬದಲಾಯಿಸಿಕೊಳ್ಳಿ

ಮಧುಮೇಹಿಗಳಿಗೆ ನೇರಳೆ ಹೇಗೆ ಸಹಾಯಕಾರಿ :
ನೇರಳೆ ಹಣ್ಣು ಜಂಬೋಲಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧಕ್ಕೆ ವಿರುದ್ಧವಾದ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ನೇರಳೆ ಹಣ್ಣಿನಲ್ಲಿರುವ ಹೆಚ್ಚಿನ ಆಲ್ಕಲಾಯ್ಡ್ ಅಂಶವು ಹೈಪರ್ಗ್ಲೈಸೀಮಿಯಾ ಅಥವಾ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಹಣ್ಣಿನ ಹೊರತಾಗಿ, ಬೀಜಗಳು, ಎಲೆಗಳು ಮತ್ತು ತೊಗಟೆಯ ಸಾರಗಳು ದೇಹದಲ್ಲಿನ ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆ ಹಣ್ಣನ್ನು ಹಸಿಯಾಗಿ ಕೂಡ ತಿನ್ನಬಹುದು ಅಥವಾ ಅದರ ರಸವನ್ನು ತೆಗೆದು ಕುಡಿಯಬಹುದು. ಅಲ್ಲದೇ ಈ ಹಣ್ಣುಗಳನ್ನು ಸಲಾಡ್‌ಗಳು, ಜಾಮ್‌ಗಳು ಇತ್ಯಾದಿಗಳಲ್ಲಿ ರೀತಿಯಲ್ಲಿ ಕೂಡ ಬಳಸಬಹುದು.

Jamun Benefits in Diabetes : Jamun available in summer is best for diabetes

Comments are closed.