“Mary” First Look poster: “ಆನ” ನಿರ್ದೇಶಕರ ಹೊಸ ಪ್ರಯತ್ನ: “ಮೇರಿ” ಫಸ್ಟ್‌ ಲುಕ್‌ ಪೋಸ್ಟರ್ ಬಿಡುಗಡೆ

(“Mary” First Look poster) “ಆನ” ಸಿನಿಮಾ ಮೂಲಕ ಸ್ಯಾಂಡಲ್‌ ವುಡ್‌ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಮನೋಜ್‌.ಪಿ ನಡಲುಮನೆ ಇದೀಗ ಇನ್ನೊಂದು ಹೊಸ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಮನೋಜ್‌ ಪಿ ಅವರ ಈ ಹೊಸ ಚಿತ್ರಕ್ಕೆ ಮೇರಿ ಎಂದು ಹೆಸರಿಡಲಾಗಿದ್ದು, ಇದರ ಫಸ್ಟ್‌ ಲುಕ್‌ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ.

ಮೇರಿ(“Mary” First Look poster) ಚಿತ್ರವು ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಒಂದು ಕಥೆಯನ್ನು ಒಳಗೊಂಡಿದ್ದು, ರೋಚಕ ಕಥೆಯನ್ನು ಒಳಗೊಂಡಿದೆ. ಇದು ಮನೋಜ್‌ ಪಿ. ನಡಲುಮನೆ ಅವರ ಎರಡನೇ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ವಿಕಾಸ್‌ ಉತ್ತಯ್ಯ, ಅನುಷಾ ಭಟ್‌, ಚೇತನ್‌ ವಿಕ್ಕಿ ಹಾಗೂ ತೇಜಸ್ವಿನಿ ಶರ್ಮಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೇರಿ ಚಿತ್ರವು ಪಕ್ಕಾ ಕಮರ್ಶಿಯಲ್‌ ಸಿನಿಮಾವಾಗಿದ್ದು, ಇದನ್ನು ಜನವರಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿಯಲ್ಲಿದೆ. ಆನ ಚಿತ್ರ ಬಿಡುಗಡೆಯಾದ ನಂತರ ಸದ್ದಿಲ್ಲದೇ ಮೇರಿ ಚಿತ್ರದ ಚಿತ್ರಿಕರಣ ಮುಗಿಸಿದ್ದು, ಇದೀಗ ಚಿತ್ರತಂಡವು ಪೊಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಸದ್ಯದಲ್ಲೇ ಈ ಚಿತ್ರದ ಟ್ರೇಲರ್‌ ಕೂಡ ರಿಲೀಸ್‌ ಆಗಲಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಚಿತ್ರತಂಡ ಸಜ್ಜಾಗಿದೆ.

ಇದನ್ನೂ ಓದಿ : Bipasha and Karan : ತಮ್ಮ ಮೊದಲ ಮಗುವಿನ ಪೋಟೋ ಹಂಚಿಕೊಂಡ ಬಿಪಾಶಾ ಕರಣ್ ಸಿಂಗ್ ಗ್ರೋವರ್ ದಂಪತಿ

ಇದನ್ನೂ ಓದಿ : Naga Chaitanya – Sobhita Dhulipala : ನಾಗ ಚೈತನ್ಯ ಸೋಭಿತಾ ಧೂಳಿಪಾಲ ಡೇಟಿಂಗ್: ಪೋಟೋ ವೈರಲ್

ಇದನ್ನೂ ಓದಿ : Bhediya Box Office Collection Day 1 : ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯತ್ತಿರುವ ವರುಣ್ ಧವನ್ ಭೇದಿಯ ಸಿನಿಮಾ

ರನ್ವಿತ್‌ ಶಿವಕುಮಾರ್‌ ಹಾಗೂ ಹರೀಶ್‌ ಜಿ.ಬಿ ಅವರ ನಿರ್ಮಾಣದಲ್ಲಿ ಈ ಚಿತ್ರವು ಮೂಡಿಬಂದಿದ್ದು, ಸೂರಜ್‌ ಜೋಯ್ಸ್‌ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಗೇಂದ್ರ ಉಜ್ಜನಿ ಅವರ ಸಂಕಲನದ ವಿನೋದ್‌ ಭಾರತಿ ಅವರ ಛಾಯಾಗ್ರಹಣದ ಈ ನೂತನ ಚಿತ್ರದಲ್ಲಿ, ಸಂದೀಪ್‌ ನೀನಾಸಂ, ಭಾರ್ಗವ್‌ ವೆಂಕಟೇಶ್‌, ಸುಶಾಂತ್‌, ದೀಪಕ್‌ ಗೌಡ ಹಾಗೂ ಇನ್ನು ಹಲವು ಕಲಾವಿದರು ನಟಿಸಿದ್ದಾರೆ. ಸಿಂಪಲ್ ಸುನಿ, ಅನೂಪ್ ಭಂಡಾರಿ, ಹೇಮಂತ್ ರಾವ್, ದಯಾನಂದ್ ಟಿ.ಕೆ. ಮಂಸೋರೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

(“Mary” First Look poster) Manoj.P Nadalumane, who made his debut in the sandalwood yard with the movie “Aana”, has now given an action cut for another new movie. Manoj P’s new film titled Mary, the first look poster of which was released today.

Comments are closed.