Pregnant Alia Bhatt : ಬರೋಬ್ಬರಿ 3 ಲಕ್ಷ ರೂ. ಉಡುಗೆ ಧರಿಸಿ ಬೇಬಿಬಂಪ್​ ಪ್ರದರ್ಶಿಸಿದ ಆಲಿಯಾ ಭಟ್​

Pregnant Alia Bhatt : ಸದ್ಯ ತಮ್ಮ ಬ್ರಹ್ಮಾಸ್ತ್ರ ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿರುವ ಆಲಿಯಾ ಭಟ್​​ ಗರ್ಭಿಣಿಯಾಗಿರುವ ನಡುವೆಯೂ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುತ್ತಲೇ ಇದ್ದಾರೆ. ಆಲಿಯಾ ಭಟ್​ ಬೇಬಿ ಬಂಪ್​ ಸ್ಪಷ್ಟವಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಅವರು ಸಧ್ಯ ಪ್ರೆಗ್ನೆನ್ಸಿ ಫ್ಯಾಶನ್​​ನ ಐಕಾನ್​ ಎಂಬಂತೆ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಅತ್ಯಂತ ಆಕರ್ಷಕ ಉಡುಪುಗಳನ್ನು ಧರಿಸುವ ಮೂಲಕ ಆಲಿಯಾ ತಮ್ಮ ಬೇಬಿ ಬಂಪ್​ ಪ್ರದರ್ಶಿಸುತ್ತಿದ್ದಾರೆ.


ಇತ್ತೀಚಿಗೆ ನಟಿ ಆಲಿಯಾ ಭಟ್​ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸುವ ಮೂಲಕ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಗುಲಾಬಿ ಬಣ್ಣವೇ ಕಣ್ಣಿಗೆ ಹೆಚ್ಚು ಆಕರ್ಷಣೆಯನ್ನು ನೀಡುತ್ತಿದೆ. ಅತ್ಯಂತ ಸರಳವಾದ ಈ ಡ್ರೆಸ್​ನಲ್ಲಿಯೂ ಗರ್ಭಿಣಿ ಆಲಿಯಾ ಭಟ್​ ಅತ್ಯಂತ ಸುಂದರವಾಗಿ ಕಾಣ್ತಿದ್ದಾರೆ .


ತಮ್ಮ ಮುಂಬರುವ ಸಿನಿಮಾ ಬ್ರಹ್ಮಾಸ್ತ್ರದ ಪ್ರಚಾರಕ್ಕಾಗಿ ಆಲಿಯಾ ಭಟ್​ ತನ್ನ ಪತಿ ರಣಬೀರ್​ ಕಪೂರ್​ ಜೊತೆಯಲ್ಲಿ ಮನೆಯಿಂದ ಹೊರಬಂದ ಸಂದರ್ಭದಲ್ಲಿ ಪಪ್ಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಗುಲಾಬಿ ಬಣ್ಣದ ಟಾಪ್​ ಹಾಗೂ ಕಪ್ಪು ಬಣ್ಣದ ಪ್ಯಾಂಟ್​ನಲ್ಲಿ ನಟಿ ಆಲಿಯಾ ಭಟ್​ ಬೇಬಿ ಬಂಪ್​ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಡ್ರೆಸ್​ ಸರಳವಾಗಿ ಇದ್ದರಿಂದ ಆಲಿಯಾ ತಮ್ಮ ಮೇಕಪ್​ ಕೂಡ ಅತ್ಯಂತ ಸರಳವಾಗಿ ಮಾಡಿಕೊಂಡಿದ್ದರು.


ನೇರವಾಗಿ ಬಿಟ್ಟ ಕೂದಲು ಹಾಗೂ ಸ್ಟೇಟ್​ಮೆಂಟ್​ ಕಿವಿಯೋಲೆ ಹಾಗೂ ಕೈ ಬೆರಳಿಗೆ ಮುತ್ತಿನ ಉಂಗುರವನ್ನು ಬಿಟ್ಟರೆ ಆಲಿಯಾ ಇನ್ಯಾವುದೇ ಆಭರಣವನ್ನು ಧರಿಸಿಲ್ಲ. ಆದರೆ ಆಲಿಯಾ ಭಟ್​ ಧರಿಸಿರುವ ಈ ಅತ್ಯಂತ ಸರಳ ಉಡುಪಿನ ಬೆಲೆ ಮಾತ್ರ ತಲೆ ತಿರುಗಿಸುವಂತಿದೆ.


ಆಲಿಯಾ ಧರಿಸಿರುವ ಈ ಗುಲಾಬಿ ಬಣ್ಣದ ಟಾಪ್​ ಪ್ರತಿಷ್ಠಿತ ಗುಸ್ಸಿ ಬ್ರ್ಯಾಂಡ್​ನದ್ದಾಗಿದ್ದು ಇದರ ಬೇಲೆ ಬರೋಬ್ಬರಿ 3,27,173 ರೂಪಾಯಿಯಾಗಿದೆ. ಇದೊಂದು ರಫಲ್​ ಚಿಫೋನ್​ ಡ್ರೆಸ್​ ಆಗಿದ್ದು ಪ್ಯಾಂಟ್​ ಧರಿಸದೇ ಕೂಡ ಈ ಉಡುಪನ್ನು ಹಾಕಬಹುದಾಗಿದೆ.

ಇದನ್ನು ಓದಿ : harish rai battling cancer : ಕ್ಯಾನ್ಸರ್​​ನ ಕೊನೆಯ ಹಂತದಲ್ಲಿದ್ದಾರೆ ಕೆಜಿಎಫ್​ ಖ್ಯಾತಿಯ ನಟ ಹರೀಶ್​ ರೈ

ಇದನ್ನೂ ಓದಿ : Meghanaraj Sarja foreign trip : ನೋವುಗಳಿಗೆ ನಲಿವಿನ ಉತ್ತರ ಕೊಟ್ಟ ದಿಟ್ಟೆ: ಮೇಘನಾ ರಾಜ್‌ ಸರ್ಜಾ ಫಾರಿನ್ ಟ್ರಿಪ್ ಪೋಟೋ ವೈರಲ್

Pregnant Alia Bhatt is The Prettiest Pink Rose in Her Sheer Ruffle Gucci Dress Worth Over Rs 3 Lakh – See Stunning Pics

Comments are closed.