ಧ್ರುವ ಸರ್ಜಾ ಪತ್ನಿ ಸೀಮಂತಕ್ಕೆ ಗೈರಾದ ಮೇಘನಾ ರಾಜ್‌ : ಸರ್ಜಾ ಕುಟುಂಬದ ಮೇಲೆ ಮುನಿಸಿಕೊಂಡ್ರಾ ಕುಟ್ಟಿಮಾ

Meghana Raj missing : ನಟ ಚಿರು ಸರ್ಜಾ ಕುಟುಂಬ ನಂದಗೋಕುಲದಂತಿತ್ತು. ಮುದ್ದಾದ ಮಡದಿ, ಒಂದೇ ಉಸಿರಿನಂತಿದ್ದ ಸಹೋದರರು ಹಾಗೂ ತಂದೆ ತಾಯಿ. ಆದರೆ ಚಿರು ಸರ್ಜಾ ನಿಧನದ ಬಳಿಕ ಈ ನಂದಗೋಕುಲಕ್ಕೆ ನಗುವೇ ಮರೆತು ಹೋಗಿತ್ತು. ಅಷ್ಟೇ ಅಲ್ಲ ಈಗ ಆ ಬಾಂಧವ್ಯವೂ ಕೊಂಚ ಕಡಿಮೆಯಾದಂತಿದ್ದು, ಸೋಷಿಯಲ್ ಮೀಡಿಯಾ ಈ ಮಾತಿಗೆ ಪುಷ್ಟಿ ನೀಡುವಂತಿದೆ. ಅದ್ಯಾಕೋ ಗೊತ್ತಿಲ್ಲ ಮೇಘನಾ ಸರ್ಜಾ ಚಿರು ನಿಧನದ ಬಳಿಕ ಚಿರು ಸರ್ಜಾ ಕುಟುಂಬದ ಜೊತೆ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಧ್ರುವ ಸರ್ಜಾ (Dhruv Sarja) ಜೊತೆಗೆ ಮೇಘನಾ ಬಾಂಧವ್ಯ ಚೆನ್ನಾಗಿತ್ತು. ಅಣ್ಣನಿಗೆ ಅತ್ತಿಗೆಯ ಸೀಮಂತವನ್ನು ಅದ್ದೂರಿಯಾಗಿ ನಡೆಸೋ ಹಂಬಲವಿತ್ತು ಎಂಬ ಕಾರಣಕ್ಕೆ ಧ್ರುವ ಸರ್ಜಾ ಮೇಘನಾ ಬೇಬಿ ಶೋವರ್ ಗೆ (Prerana Baby Shower Ceremony) ಹೊಟೇಲ್ ನಲ್ಲಿ ಅದ್ದೂರಿ ಸಮಾರಂಭವನನ್ನೇ ಏರ್ಪಡಿಸಿದ್ದರು.

ಮಗು ಜನಿಸಿದ ವೇಳೆ ಹಾಗೂ ನಾಮಕರಣ ಎಲ್ಲದರ ವೇಳೆಯೂ ಧ್ರುವ್ ಸರ್ಜಾ ಮೇಘನಾ ಜೊತೆ ಜೊತೆಗೆ ನಿಂತಿದ್ದರು. ಚಿರು ಪ್ರತಿರೂಪದಂತಿರೋ ಮಗು ಹುಟ್ಟಿದಾಗ ಧ್ರುವ ಸರ್ಜಾ ತನ್ನ ಅಣ್ಣನೇ ಮರಳಿ ಬಂದ ಎಂದು ಸಂಭ್ರಮಿಸಿದ್ದರು. ಆದರೆ ಈಗ ಧ್ರುವ್ ಸರ್ಜಾ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪತ್ನಿ ಪ್ರೇರಣಾ ಜೊತೆಗೆ ಅದ್ದೂರಿ ಬೇಬಿ ಬಂಪ್ ಪೋಟೋ ಶೂಟ್ ವಿಡಿಯೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸಂಭ್ರಮದಿಂದ ನಡೆದ ಪ್ರೇರಣಾ ಸೀಮಂತದಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಗಣ್ಯರು ಪಾಲ್ಗೊಂಡು ಧ್ರುವ ಸರ್ಜಾ ಕುಟುಂಬಕ್ಕೆ ಶುಭಹಾರೈಸಿದ್ದಾರೆ.

ಆದರೆ ಈ ಸಮಾರಂಭದಲ್ಲಿ ನಟಿ, ಸರ್ಜಾ ಮನೆತನದ ಸೊಸೆ ಮತ್ತು ಧ್ರುವ್ ಸರ್ಜಾ ಅತ್ತಿಗೆ ಮೇಘನಾ ಸರ್ಜಾ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ತನ್ನ ಸಹೋದರನಂತೆ ಧ್ರುವ ಸರ್ಜಾ ನನ್ನೊಂದಿಗೆ ನಿಂತಿದ್ದಾರೆ ಎಂದು ಮೇಘನಾ ಸರ್ಜಾ ಹಲವು ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಪ್ರೇರಣಾ ತನ್ನ ಆತ್ಮೀಯ ಸ್ನೇಹಿತೆ ಎಂದು ಹೇಳಿ ಕೊಂಡಿದ್ದರು. ಇಷ್ಟೆಲ್ಲ ಆತ್ಮೀಯವಾದ ಸ್ನೇಹ ಹಾಗೂ ಸಂಬಂಧ ಎರಡನ್ನು ಹೊಂದಿರೋ ಕುಟುಂಬಕ್ಕೆ ಯಾರ ಕಣ್ಣು ಬಿತ್ತೋ ಏನು ಮೇಘನಾ ನಿಧಾನವಾಗಿ ಸರ್ಜಾ ಕುಟುಂಬದಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ‌

ಇದಕ್ಕೆ ಪೂರಕ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಮೇಘನಾ ಸರ್ಜಾ ಇದುವರೆಗೂ ಪ್ರೇರಣಾ ಹಾಗೂ ಧ್ರುವ್ ಸರ್ಜಾ ಬದುಕಿನ ವಿಶೇಷ ಗಳಿಗೆಗೆ ಶುಭಹಾರೈಸುವ ಪೋಸ್ಟ್ ಹಾಕಿಲ್ಲ. ಪೋಟೋ ಶೇರ್ ಮಾಡಿಲ್ಲ. ಹೀಗಾಗಿ ಎಲ್ಲೋ ಒಂದು ಕಡೆ ಮೇಘನಾ ಹಾಗೂ ಸರ್ಜಾ ಕುಟುಂಬದ ನಡುವೆ ಯಾವುದೋ ಬಲವಾದ ಮುನಿಸು ಮನಸ್ಸಗಳನ್ನು ಮುರಿದಿದೆ ಎನ್ನಲಾಗ್ತಿದ್ದು, ಇದಕ್ಕೆ ಕಾಲವೇ ಉತ್ತರಿಸಬೇಕಿದೆ.

ಇದನ್ನೂ ಓದಿ : Herbs for Balancing Hormones : ಹಾರ್ಮೋನ್‌ಗಳ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವ ಗಿಡಮೂಲಿಕೆಗಳು

ಇದನ್ನೂ ಓದಿ : Ten people drowned : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ 10 ಸಾವು

Meghana Raj missing Dhruv Sarja wife Prerana Baby Shower Ceremony

Comments are closed.