Six drown : 2 ಪ್ರತ್ಯೇಕ ಘಟನೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿ ಆರು ಮಂದಿ ಜಲಸಮಾಧಿ

ಹರಿಯಾಣ : Six drown  : ಹರಿಯಾಣದ ಮಹೇಂದರ್​ಗಢ ಹಾಗೂ ಸೋನಿಪತ್​ ಜಿಲ್ಲೆಗಳಲ್ಲಿ ಶುಕ್ರವಾರ ಸಂಜೆ ಸುಮಾರಿಗೆ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಎರಡು ಪ್ರತ್ಯೇಕ ದುರಂತಗಳು ಸಂಭವಿಸಿದೆ. ಮಹೇಂದರಗಢ ಕಾಲುವೆಯಲ್ಲಿ ನಾಲ್ವರು ಯುವಕರು ಹಾಗೂ ಸೋನಿಪತ್​​ನಲ್ಲಿ ಯಮುನಾ ನದಿಯಲ್ಲಿ ಇಬ್ಬರು ಜಲಸಮಾಧಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .


ಜಗದೋಳಿ ಎಂಬ ಗ್ರಾಮದ 20ಕ್ಕೂ ಅಧಿಕ ಮಂದಿ ಗಣೇಶ ವಿಸರ್ಜನೆಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನೀರುಪಾಲಾಗುತ್ತಿದ್ದ ನಾಲ್ವರು ಬಾಲಕರನ್ನು ರಕ್ಷಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಗಣೇಶ ಮೂರ್ತಿಯನ್ನು ವಿಸರ್ಜಿಸಬೇಕೆಂದು ಮಹೇಂದ್ರಗಢದ ಜಗದೊಳಿ ಗ್ರಾಮದ ಬಳಿ ಕಾಲುವೆಗೆ ಸುಮಾರು 20-22 ಮಂದಿ ತೆರಳಿದ್ದರು. ಈ ವೇಳೆ ಅನೇಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಧ್ಯ ನಾಲ್ವರು ಬಾಲಕರು ಪ್ರಾಣ ಕಳೆದುಕೊಂಡಿದ್ದು ನಾಲ್ಕು ಮಂದಿಯನ್ನು ಪ್ರಾಣಾಪಾಯಾದಿಂದ ಪಾರು ಮಾಡಲಾಗಿದೆ ಎಂದು ಮಹೇಂದ್ರಗಢದ ಡಿಸಿ ಜೆ.ಕೆ ಅಬೀರ್​ ಮಾಹಿತಿ ನೀಡಿದ್ದಾರೆ .


ಮತ್ತೊಂದು ದುರಂತ ಘಟನೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬನನ್ನು ಉನ್ನಾವೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರದಿಗಳ ಪ್ರಕಾರ ಮಕ್ಕಳು ಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು ತೆರಳಿದ್ದರು ಎನ್ನಲಾಗಿದೆ.


ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ಮತ್ತೊಬ್ಬನನ್ನು ಉನ್ನಾವೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ಕೊತ್ವಾಲಿ ಸಫಿಪುರ ಪ್ರದೇಶದಲ್ಲಿ ಬರುವ ಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲು ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇನ್ನು ಈ ದುರಂತಗಳ ಸಂಬಂಧ ಹರಿಯಾಣ ಸಿಎಂ ಮನೋಹರ್​ ಲಾಲ್​ ಖಟ್ಟರ್​ ಅತೀವ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾದವರ ಶೀಘ್ರ ಚೇತರಿಕೆಗೆ ಖಟ್ಟರ್​​​ ಪ್ರಾರ್ಥಿಸಿದ್ದಾರೆ.

ಮಹೇಂದ್ರಗಢ ಮತ್ತು ಸೋನಿಪತ್​ ಜಿಲ್ಲೆಗಳಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಕಾಲುವೆಯಲ್ಲಿ ಮುಳುಗಿ ಅನೇಕರು ಅಕಾಲಿಕ ಮರಣವನ್ನಪ್ಪಿದ ಘಟನೆ ಕೇಳಿ ನನಗೆ ದುಃಖವಾಗಿದೆ. ಈ ಕಷ್ಟದ ಸಂದರ್ಭದಲ್ಲಿ ಮೃತರ ಕುಟುಂಬಗಳ ಜೊತೆಯಲ್ಲಿ ನಾವಿದ್ದೇವೆ. ಎನ್​ಡಿಆರ್​ಎಫ್​ ತಂಡವು ಅನೇಕರನ್ನು ರಕ್ಷಿಸಿದೆ. ಪ್ರತಿಯೊಬ್ಬರು ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸುತ್ತೇನೆಂದು ಮನೋಹರ್ ಲಾಲ್​ ಖಟ್ಟರ್​ ಟ್ವೀಟ್​ ಮಾಡಿದ್ದಾರೆ .

ಇದನ್ನು ಓದಿ : Ten people drowned : ಗಣೇಶ ಮೂರ್ತಿ ವಿಸರ್ಜನೆ ವೇಳೆ ದುರಂತ 10 ಸಾವು

ಇದನ್ನೂ ಓದಿ : Virat Kohli Vs Sachin Tendulkar : 71ನೇ ಶತಕ ಬಾರಿಸಲು ತೆಗೆದುಕೊಂಡದ್ದು 1020 ದಿನ.. ಆದರೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಪೀಡು ಕಿಂಗ್ ಕೊಹ್ಲಿ

Haryana: Six drown during Ganesh idol immersion in Mahendergarh and Sonipat, CM khattar expresses grief

Comments are closed.