ಭಾನುವಾರ, ಏಪ್ರಿಲ್ 27, 2025
HomeCinemaಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ

ಶ್ರೀನಗರ ಕಿಟ್ಟಿ ಜೊತೆ ಮೇಘನಾ ಸರ್ಜಾ: ಸೆಟ್ಟೇರಿದ ಹೊಸ ಸಿನಿಮಾ ಅಮರ್ಥ

- Advertisement -

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಸ್ಯಾಂಡಲ್ ವುಡ್ ಮಂದಿಗೆ ಕನ್ನಡದ ಮನೆಮಗಳು ಹಾಗೂ ಬಹುಭಾಷಾ ನಟಿ ಮೇಘನಾ ರಾಜ್ (meghana raj ) ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ . ತತ್ಸಮ್ ತದ್ಬವ್ ದ (Tatsama Tadbhava) ಮೂಲಕ ಕಮ್ ಬ್ಯಾಕ್ ಮಾಡಿದ್ದ ಮೇಘನಾ ರಾಜ್ ಈಗ ಮತ್ತೊಂದು ಚಿತ್ರದ ಮೂಲಕ ತಮ್ಮ ಬೆಳ್ಳಿ ತೆರೆಯ ಪಯಣ ಮುಂದುವರೆಸಿದ್ದಾರೆ.

ಮೇಘನಾ ರಾಜ್ ಸರ್ಜಾ. ಹುಟ್ಟುತ್ತಲೇ ಚಿತ್ರರಂಗದ ನಂಟನ್ನು ಜೊತೆಗಿಟ್ಟುಕೊಂಡೇ ಬಂದ ಮೇಘನಾ ರಾಜ್, ಕಳೆದ ಎರಡು ದಶಕಗಳಿಂದ ಕನ್ನಡ, ಮಲೆಯಾಳಂ ಹಾಗೂ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಹಲವು ಚಿತ್ರಗಳ ಜೊತೆ, ಅಭಿಮಾನಿಗಳನ್ನು ಸಂಪಾದಿಸಿಕೊಂಡು ಮತ್ತೊಂದು ತವರು ಮನೆ ಎನ್ನಿಸುವಷ್ಟರ ಮಟ್ಟಿಗೆ ಮೇಘನಾಗೆ ಮಲೆಯಾಳಂನಲ್ಲಿ ಹಿಡಿತವಿದೆ.

meghana raj with Srinagar Kitty New movie Amartha set
Image Credit ” Meghanraj instagram

 

ಬದುಕಿನ ಏರಿಳಿತಗಳಿಂದ ಸಿನಿಮಾ ದಿಂದ ದೂರವಿದ್ದ ಮೇಘನಾ ಸದ್ಯ ಸಿನಿಮಾ ರಂಗಕ್ಕೆ ಮರಳಿದ್ದರು. ಕಮ್ ಬ್ಯಾಕ್ ಸಿನಿಮಾದ ವಿಭಿನ್ನತೆ ಯಿಂದ ಮೇಘನಾ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಜನಮನ್ನಣೆ ಗಳಿಸಿಕೊಂಡರು. ಈಗ ಮೇಘನಾ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ತತ್ಸಮ್ ತದ್ಭವ್ ಯಶಸ್ಸಿನ ವೇಳೆಯಲ್ಲೇ ನಟಿ ಮೇಘನಾ ರಾಜ್ ಮತ್ತೊಂದು ಸಿನಿಮಾದ ಮೂಲಕ ತೆರೆಗೆ ಬರ್ತಿರೋದಾಗಿ ಹೇಳಿದ್ದರು.

ಇದನ್ನೂ  ಓದಿ : ಸುಧಾರಾಣಿ 21 ವರ್ಷದ ಬಳಿಕ ಮತ್ತೆ ಡ್ಯುಯೇಟ್: ಸ್ಪೆಶಲ್ ವಿಡಿಯೋ ವೈರಲ್

ಆದರೆ ಸಿನಿಮಾ ಯಾವುದೆಂಬ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ದೀಪಾವಳಿಯ ಶುಭ ಸಂದರ್ಭದಲ್ಲಿ ಮೇಘನಾ ರಾಜ್ ಹೊಸ ಸಿನಿಮಾ ಅನೌನ್ಸ್ ಆಗಿದೆ‌. ಸಿನಿಮಾಗೆ ಅಮರ್ಥ ಎಂದು ಹೆಸರಿಡಲಾಗಿದೆ. ಸಿನಿಮಾದ ಮೊದಲ ಪೋಸ್ಟರ್ ಜೊತೆ ಈ ಸಿಹಿಸುದ್ದಿಯನ್ನು ನಟಿ ಮೇಘನಾ ರಾಜ್ ಸರ್ಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

meghana raj with Srinagar Kitty New movie Amartha set
Image Credit ” Meghanraj instagram

ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗಡೆ ಜಂಟಿಯಾಗಿ ನಿರ್ಮಿಸುತ್ತಿರುವ ಈ ಸಿನಿಮಾವನ್ನು ವಿಜಯ್ ಪ್ರಥಮ್ ಹಾಗೂ ಗುರು ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೇಘನಾ ಸರ್ಜಾ ಜೊತೆ ಶ್ರೀನಗರ ಕಿಟ್ಟಿ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟೈಟಲ್ ಹೇಳ್ತಿರುವಂತೆ ಇದೊಂದು ನಿಗೂಢ ಕಥಾನಕವನ್ನು ಹೊಂದಿದ ಸಿನಿಮಾದಂತಿದೆ.

ಇದನ್ನೂ  ಓದಿ : ಸ್ಯಾಂಡಲ್ ವುಡ್ ಸಂಭ್ರಮದ ದೀಪಾವಳಿ: ಇಲ್ಲಿದೆ ಕಲರ್ ಫುಲ್ ಅಲ್ಬಂ

ಮೇಘನಾ ರಾಜ್ ಸರ್ಜಾ ಈ ಸಿನಿಮಾದಲ್ಲೂ ಡಿ ಗ್ಲ್ಯಾಮರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ. ಇದೇ ಮೊದಲ ಬಾರಿಗೆ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ಜೊತೆಯಾಗಿದ್ದಾರೆ. ಸಿನಿಮಾದ ಪೋಸ್ಟರ್ ಶೇರ್‌ಮಾಡುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೇಘನಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

meghana raj with Srinagar Kitty New movie Amartha set
Image Credit – Meghanraj instagram

ಕನ್ನಡದಲ್ಲಿ ರಾಜಾಹುಲಿ ಸಿನೆಮಾದ ಬಳಿಕ ಮೇಘನಾ ನೆ ಬೇಡಿಕೆ ಹೆಚ್ಚಿತ್ತು. ಆದರೆ ಮೇಘನಾ‌ ಮದುವೆಯ ಬಳಿಕ ಒಂದಿಷ್ಟು ಕಾಲ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಆದರೆ ಬದುಕು ಮೇಘನಾರ ದೊಡ್ಡ ಖುಷಿಯನ್ನೇ ಕಸಿದುಕೊಂಡಿತ್ತು. ಮಲೆಯಾಳಂ, ತಮಿಳು, ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು.

ಇದನ್ನೂ  ಓದಿ :ವಿಜಯ್​ ದೇವರಕೊಂಡ ನಿವಾಸದಲ್ಲಿ ರಶ್ಮಿಕಾ ಮಂದಣ್ಣ ದೀಪಾವಳಿ ಆಚರಣೆ..!? : ಹೌದು ಎನ್ನುತ್ತಿದೆ ಈ ಫೋಟೋಸ್​

ವೈಯಕ್ತಿಕ ಬದುಕಿನಲ್ಲಿ ಪ್ರೀತಿಸಿದ ಚಿರು ಜೊತೆ ಮದುವೆ,ಸಂಸಾರ ಎಲ್ಲವೂ ಸುಂದರವಾಗಿ ಸಾಗಿತ್ತು. ಹೀಗೆ ಎಲ್ಲವೂ ಸರಿಯಾಗಿದೆ ಅಂದುಕೊಳ್ಳುವಾಗಲೇ ಮೇಘನಾ ಚಿರುವನ್ನು ಶಾಶ್ವತವಾಗಿ ಕಳೆದುಕೊಂಡರು. ಇದಾದ ಬಳಿಕ ಬಹುತೇಕ ಎರಡು ವರ್ಷಗಳ ಕಾಲ ಮೇಘನಾ ಪತಿಯ ನಿಧನದ ನಾಲ್ಕು ತಿಂಗಳ ಬಳಿಕ ಜನಿಸಿದ ಮಗ ಆರೈಕೆಯಲ್ಲೇ ಕಳೆದರು.

meghana raj with Srinagar Kitty New movie Amartha set
Image Credit – Meghanraj instagram

ಆದರೆ ಮೇಘನಾ ಚಿತ್ರರಂಗವನ್ನೇ ತೊರೆದರು ಎಂಬ ನೋವು ಅಭಿಮಾನಿಗಳನ್ನು ಕಾಡುತ್ತಿರುವಾಗಲೇ ಮೇಘನಾ ತಮ್ಮ ಪತಿ ಚಿರು ಕೊನೆ ಆಸೆಯಂತೆ ಮತ್ತೆ ಚಿತ್ರರಂಗಕ್ಕೆ ಮರಳಿದರು. ಇದಾದ ಬಳಿಕ ಮೇಘನಾ ರಿಯಾಲಿಟಿ ಶೋ ಹಾಗೂ ಜಾಹೀರಾತಿನಲ್ಲಿ ಸಕ್ರಿಯರಾಗಿದ್ದರು. ಈಗ ಬ್ಯಾಕ್ ಟೂ ಬ್ಯಾಕ್ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ತೆರೆಗೆ ಮರಳಿದ್ದಾರೆ. ಮಾತ್ರವಲ್ಲ ಮಲೆಯಾಳಂ ಹಾಗೂ ತಮಿಳಿನಲ್ಲೂ ಒಳ್ಳೆಯ ಚಿತ್ರಕತೆ ಸಿಕ್ಕಿದರೇ ಸಿನಿಮಾಕ್ಕೆ ಜೈ ಎಂದಿದ್ದಾರೆ.

meghana raj with Srinagar Kitty New movie Amartha set

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular