ನನಗೂ ಈ ಸಮಸ್ಯೆ ಇದೆ…! ಸೋಷಿಯಲ್ ಮೀಡಿಯಾದಲ್ಲಿ‌ಮೇಘನಾ ಪೋಸ್ಟ್…!!

ಸ್ಯಾಂಡಲ್ ವುಡ್ ನ ನಟಿ ಮೇಘನಾ ರಾಜ್ ಸದ್ಯ ತಮ್ಮ ಐದು ತಿಂಗಳ ಮಗು ಜೊತೆ ತಾಯ್ತನ ಎಂಜಾಯ್ ಮಾಡ್ತಿದ್ದಾರೆ. ಇದರ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಕುಟ್ಟಿಮಾ ಭಾರತೀಯ ಹೆಣ್ಣುಮಕ್ಕಳ ಕಾಮನ್ ಸಮಸ್ಯೆ ಶೇರ್ ಮಾಡಿದ್ದಾರೆ.

ಮುದ್ದಾದ ಮಗು ಜೊತೆ ಟೈಂ ಸ್ಪೆಂಟ್ ಮಾಡ್ತಿರೋ ಮೇಘನಾರಾಜ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಇನ್ ಸ್ಟಾಗ್ರಾಂ, ಪೇಸ್ ಬುಕ್, ಟ್ವೀಟ್ ಎಲ್ಲಾ ಕಡೆ ಮಗು ಪೋಟೋ ಹಂಚಿಕೊಂಡು ಅಭಿಮಾನಿಗಳ ಜೊತೆ ಖುಷಿ ಹಂಚಿಕೊಳ್ಳೋ ಮೇಘನಾ ತಮ್ಮ ಸಮಸ್ಯೆಯನ್ನು ಶೇರ್ ಮಾಡಿದ್ದಾರೆ.

ಭಾರತೀಯ ಹೆಣ್ಣುಮಕ್ಕಳ ಕಾಮನ್ ಸಮಸ್ಯೆ ಅನ್ನೋ ಟ್ಯಾಗ್ ಲೈನ್ ಅಡಿಯಲ್ಲಿ ಬಂದಿರೋ ಈ ಫನ್ನಿ‌ಪ್ರಾಬ್ಲಂ ನನಗೂ ಆಗಿದೆ ಅಂತ ಮೇಘನಾ ರಾಜ್ ಹೇಳಿದ್ದಾರೆ. ಇನ್ನು ಮೇಘನಾ ಈ ಪೋಸ್ಟ್ ಗೆ ಸಾಕಷ್ಟು ಲೈಕ್ಸ್ ಕೂಡ ಬಂದಿದೆ.

ಇಷ್ಟ ಕ್ಕೂ ಮೇಘನಾ ಹಾಕಿರೋ ಪೋಸ್ಟ್ ಏನು ಗೊತ್ತಾ. ಸಾಮಾನ್ಯ ವಾಗಿ ಸ್ನೇಹಿತೆಯರು ಫೋನ್ ಮಾಡಿ ಹೊರಗೆಲ್ಲೋ ಹೋಗೋಣ ಅಂತ ದೀಢೀರ್ ಪ್ಲ್ಯಾನ್ ಮಾಡಿದಾಗ‌ ಹೆಣ್ಣುಮಕ್ಕಳಿಗೆ ತಾವು ಅವತ್ತಷ್ಟೇ ತಲೆಗೆ ಎಣ್ಣೆ ಹಾಕಿರೋದು ನೆನಪಾಗುತ್ತೆ ಅಂತ.

ಈ ಪೋಸ್ಟ್ ನ್ನು ಇಂಡಿಯನ್ ಗರ್ಲ್ಸ್ ಕಾಮನ್ ಪ್ರಾಬ್ಲಂ ಅನ್ನೋ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಇದಕ್ಕೆ ಮೇಘನಾ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಮೇಘನಾ ರಾಜ್ ಸದ್ಯ ನಟನೆಯಿಂದ ದೂರ ಉಳಿದಿದ್ದು ಫುಲ್‌ಟೈಂ ಮಗು ಜೊತೆ ಕಳೆಯುತ್ತ ಮಗನಿಗಾಗಿ ಪೋಟೋಶೂಟ್ ಸೇರಿದಂತೆ ಬೇರೆ ಬೇರೆ ಚಟುವಟಿಕೆ ಹಮ್ಮಿಕೊಂಡು ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ.

Comments are closed.