ಸಾಲು ಸಾಲು ನೋವುಂಡಿದ್ದ ಚಿರಂಜೀವಿ ಸರ್ಜಾ ( Chiranjeevi Sarja) ಅವರ ಪತ್ನಿ ಮೇಘನಾ ರಾಜ್ ಸರ್ಜಾ (Meghanaraj sarja )ಈಗ ಒಂದೊಂದಾಗಿ ಖುಷಿಯ ದಿನಗಳನ್ನು ಎದುರುಗೊಳ್ಳುತ್ತಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಕಮ್ ಬ್ಯಾಕ್ ಮಾಡಿದ ಮೇಘನಾ ತತ್ಸಮ ತದ್ಭವ (Tatsama Tadbhava ) ಗೆಲುವಿನ ಬೆನ್ನಲ್ಲೇ ಮತ್ತೊಂದು ಸಿಹಿಸುದ್ದಿಯೊಂದಿಗೆ ಅಭಿಮಾನಿಗಳ ಮುಂದೇ ಬಂದಿದ್ದಾರೆ.

ಹೌದು ಗರ್ಭಿಣಿಯಾಗಿದ್ದಾಗ ಪತಿಯನ್ನು ಕಳೆದುಕೊಂಡ ನಟಿ ಮೇಘನಾ ರಾಜ್ ಬದುಕು ಮುಗಿದೇ ಹೋಯಿತು ಎನ್ನುವ ಸ್ಥಿತಿಗೆ ಬಂದಿತ್ತು. ಈ ವೇಳೆಯಲ್ಲಿ ಆಕೆಯ ಬದುಕಿಗೆ ಬೆಳಕು ತಂದಿದ್ದು, ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja). ಚಿರುಗೆ (Chiranjeevi Sarja) ಕೊಟ್ಟ ಮಾತಿನಂತೆ ಮಗನನ್ನು ಸಮರ್ಥವಾಗಿ ಬೆಳೆಸಲು ಮುಂದಾಗಿರುವ ಮೇಘನಾ ಸರ್ಜಾ, ಇದರೊಂದಿಗೆ ಚಿರುಗೆ ಕೊಟ್ಟಇನ್ನೊಂದು ಮಾತನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ.
ಹೀಗಾಗಿ ಮೇಘನಾ ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ತಿದ್ದಾರೆ. ಚಿರು ಮೇಘನಾ ಯಾವಾಗಲೂ ಸಿನಿಮಾದಲ್ಲಿ ನಟಿಸುತ್ತಲೇ ಇರಬೇಕು. ಯಾವ ಕಾರಣಕ್ಕೂ ಸಿನಿಮಾ ರಂಗವನ್ನು ತೊರೆಯಬಾರದು ಎಂದು ಆಸೆ ಪಟ್ಟಿದ್ದರಂತೆ. ಹೀಗಾಗಿ ಚಿರು ಆಸೆ ಪೊರೈಸಲು ಮೇಘನಾ ಮತ್ತೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ : ಪಾರ್ವತಿಯಾದ್ರು ಪ್ರಜ್ವಲ್ ದೇವರಾಜ್ ಪತ್ನಿ: ಪೋಟೋಶೂಟ್ ನಲ್ಲಿ ಮಿಂಚಿದ ರಾಗಿಣಿ
ರಾಯನ್ ರಾಜ್ ಸರ್ಜಾಗೆ ಒಂದು ವರ್ಷವಾಗುತ್ತಿದ್ದಂತೆ ಮೇಘನಾ ರಾಜ್ ರಿಯಾಲಿಟಿ ಶೋ, ಜಾಹೀರಾತು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಕಾಣಿಸಿ ಕೊಂಡಿದ್ದರು. ಇದಾದ ಬಳಿಕ ಮೇಘನಾ ಚಿರು ಹಾಗೂ ತನ್ನ ಸ್ನೇಹಿತರ ವಲಯದ ಪನ್ನಗಾಭರಣ ನಿರ್ದೇಶನದ ತತ್ಸಮ ತದ್ಭವ ಸಿನಿಮಾಕ್ಕೆ ಬಣ್ಣ ಹಚ್ಚಿದ್ದರು.
ಈ ಸಿನಿಮಾ ಮೊನ್ನೆ ಮೊನ್ನೆ ತೆರೆ ಕಂಡಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಗಣೇಶ ಚತುರ್ಥಿಯಂದೇ ನಟಿ ಮೇಘನಾ ಸರ್ಜಾ ತಮ್ಮ ಹೊಸ ಚಿತ್ರದ ಅನೌನ್ಸ್ ಮೆಂಟ್ ಮಾಡಿದ್ದು, ಹೊಸ ಸಿನಿಮಾದ ಪೋಸ್ಟರ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಮೇಘನಾ ಸರ್ಜಾ ಮುಂದಿನ ಸಿನಿಮಾ ಅಮರ್ಥ ಎಂದಾಗಿದ್ದು, ವಿಭಿನ್ನ ಸಿನಿಮಾ ಟೈಟಲ್ ಸಿನಿಮಾದ ಕುರಿತು ನೀರಿಕ್ಷೆ ಹೆಚ್ಚಿಸಿದೆ. ವಿನಯ್ ಪ್ರೀತಮ್ ಹಾಗೂ ಗುರು ಹೆಗ್ಡೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದ್ದು ಇದರಲ್ಲಿಮಹಿಳಾ ಪ್ರಧಾನ ಪಾತ್ರದಲ್ಲಿ ಮೇಘನಾ ಸರ್ಜಾ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ : 2ನೇ ಮಗುವಿಗೆ ತಂದೆಯಾದ ಧ್ರುವ ಸರ್ಜಾ: ಗಂಡು ಮಗುವಿಗೆ ಜನ್ಮನೀಡಿದ ಪ್ರೇರಣಾ
ಮೇಘನಾ ಸರ್ಜಾಗೆ ಶ್ರೀನಗರ ಕಿಟ್ಟಿ ಹೀರೋ ಆಗಿ ನಟಿಸಲಿದ್ದು, ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ ಬಾರಿಗೆ ಮೇಘನಾ ಸರ್ಜಾ ಶ್ರೀನಗರ ಕಿಟ್ಟಿಗೆ ಜೋಡಿಯಾಗಿದ್ದಾರೆ. ಗಣೇಶ ಹಬ್ಬದಂದು ರಿಲೀಸ್ ಆಗಿರೋ ಅಮರ್ಥ ಸಿನಿಮಾದ ಫರ್ಸ್ಟ್ ಪೋಸ್ಟರ್ ಸಖತ್ ಕುತೂಹಲ ಮೂಡಿಸುವಂತಿದೆ.

ಪೋಸ್ಟರ್ ನಲ್ಲಿ ಮೇಘನಾ ಸರ್ಜಾ ಸೀರೆ ಉಟ್ಟು ಸಖತ್ ಟ್ರೆಂಡಿಯಾಗಿ ಕಾಣಿಸಿ ಕೊಂಡಿದ್ದರೇ, ಶ್ರೀನಗರ ಕಿಟ್ಟಿ ಪಂಚೆ ಶಲ್ಯದಲ್ಲಿ ಸಖತ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಸಿನಿಮಾದ ಜೊತೆ ಜೊತೆಗೆ ಮೇಘನಾ ಸರ್ಜಾ ಮನೆಯಲ್ಲಿ ಮತ್ತಷ್ಟು ಸಂಭ್ರಮ ಹೆಚ್ಚಿದ್ದು ಜೊತೆಗೆ ಸರ್ಜಾ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಸೇರ್ಪಡೆಯಾಗಿದೆ.
ಇದನ್ನೂ ಓದಿ : ಒಂದೇ ಒಂದು ಡೈಲಾಗ್ ಗೆ ಮನಸೋತ ಮೇಘನಾ: ತತ್ಸಮ ತದ್ಬವದ ಹಿಂದಿದ್ಯಾ ಚಿರು ಕಹಾನಿ
ಧ್ರುವ ಸರ್ಜಾಗೊಂದು ಗಂಡು ಮಗು ಜನಿಸಿದ್ದು ಎರಡನೇ ಭಾರಿಗೆ ಧ್ರುವ್ ಹಾಗೂ ಪ್ರೇರಣಾ ಪೋಷಕರಾದ ಖುಷಿಯಲ್ಲಿದ್ದಾರೆ. ದೊಡ್ಡಮ್ಮ ಮೇಘನಾ ಸರ್ಜಾ ಕೂಡ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ವಂಶದ ಕುಡಿ ನೋಡಿ ಸಂಭ್ರಮಿಸಿದ್ದಾರೆ.
Meghna Raj Sarja wife of Chiranjeevi Sarja Busy with Movie Tatsama Tadbhava After Amartha