Mehreen Pirzada : ಟಾಲಿವುಡ್ ಸುಂದರಿ ಸ್ಯಾಂಡಲ್ ವುಡ್ ಗೆ….! ಮೆಹ್ರಿನ್ ಪಿರ್ಝಾದಾ ನಾಯಕಿಯಾಗ್ತಿರೋದ್ಯಾರಿಗೆ ಗೊತ್ತಾ…?!

ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ ಹಾಲಿನಂತ ಬಿಳುಪಿನ ಸುಂದರಿ ಮೆಹ್ರಿನ್ ಪಿರ್ಝಾದಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಇಷ್ಟಕ್ಕೂ ಮೆಹ್ರಿನ್ ಪಿರ್ಝಾದಾ ಜೋಡಿಯಾಗ್ತಿರೋದು ಯಾರಿಗೆ…?! ಈ ಸ್ಟೋರಿಯಲ್ಲಿದೆ ಡಿಟೇಲ್ಸ್.

ಟಾಲಿವುಡ್ ನ ಮೋಸ್ಟ್ ಫೆವರಿಟ್ ನಟಿ ಎನ್ನಿಸಿಕೊಂಡಿರುವ ಮೆಹ್ರೀನ್, ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅವರ 124 ನೇ ಸಿನಿಮಾಗೆ ನಾಯಕಿಯಾಗಲಿದ್ದಾರೆ. ಬಾಲ್ ಶ್ರೀರಾಮ ಸ್ಟುಡಿಯೋ ನಿರ್ಮಿಸುತ್ತಿರುವ ರಾಮ್ ಧುಲಿಪುಡಿ ನಿರ್ದೇಶನದ ಶಿವರಾಜ್ ಕುಮಾರ್ 124 ನೇ ಸಿನಿಮಾಗೆ ಇನ್ನು ಹೆಸರಿಡಲಾಗಿಲ್ಲ. ಈ ಸಿನಿಮಾದ ಮೂಲಕ ಮೆಹ್ರೀನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.

ಲವ್ ಸ್ಟೋರಿ ಆಧಾರಿತ ಶಿವಣ್ಣನ 124ನೇ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಎರಡು ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಒಂದು ಆರ್ಮಿ ಆಫೀಸರ್ ಪಾತ್ರ ಎನ್ನಲಾಗುತ್ತಿದೆ. ಸದ್ಯ ಭಜರಂಗಿ -2 ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಈ ರಿಲೀಸ್ ಆದ ಬಳಿಕ ಶಿವರಾಜ್ ಕುಮಾರ್ ತಮ್ಮ 124 ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರಂತೆ. ಈ ಸಿನಿಮಾಕ್ಕೆ ಮೆಹ್ರೀನ್ ಮತ್ತಷ್ಟು ರಂಗು ತುಂಬಲಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್ ವುಡ್ ನಟಿ ಬದುಕಿನಲ್ಲಿ ಬಿರುಗಾಳಿ…! ಪ್ರಿಯಾಮಣಿ ಮದುವೆ ಸಿಂಧುವಲ್ಲ ಎಂದ ಮುಸ್ತಫಾ ಮೊದಲ ಪತ್ನಿ…!!

ಸದ್ಯ ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ನಟಿಸುತ್ತಿರುವ ಎಫ್ 3 ಸಿನಿಮಾದಲ್ಲಿ ನಾಯಕಿಯಾಗಿದ್ದು, ಈ ಸಿನಿಮಾ ಪೂರ್ಣಗೊಂಡ ಬಳಿಕ ಅಗಸ್ಟ್ ವೇಳೆಗೆ ಶಿವಣ್ಣ ಸಿನಿಮಾಗಾಗಿ ಮೆಹ್ರೀನ್ ಕರ್ನಾಟಕಕ್ಕೆ ಎಂಟ್ರಿ ಕೊಡಲಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

2016 ರಲ್ಲಿ ತೆಲುಗು ಸಿನಿಮಾದ ಮೂಲಕ ನಟನೆಗೆ ಎಂಟ್ರಿಕೊಟ್ಟ ಮೆಹ್ರೀನ್ ತಮಿಳು ಚಿತ್ರದಲ್ಲಿ ಹೆಚ್ಚು ನಟಿಸಿದ್ದಾರೆ. ಮಹಾನುಭಾವಡು, ರಾಜ ದಿಗ್ರೇಟ್, ನೋಟಾ ಕವಚಂ, ಎಫ್ 3, ಪಟಾಸ್ ಸೇರಿದಂತೆ ಹಲವು ಚಿತ್ರದಲ್ಲಿ ಮಿಂಚಿದ್ದಾರೆ.

Comments are closed.