ದೇಶ ವಿದೇಶಗಳಲ್ಲಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿರುವ ಕುಂದಾಪುರ (Kundapur)ಕನ್ನಡದ ನಗೆ ನಾಟಕ ಮೂರು ಮುತ್ತು (Mooru Muttu kannada drama ) ಖ್ಯಾತಿಯ ಕಲಾವಿದ ಅಶೋಕ್ ಶಾನುಭೋಗ್ (Ashok Shanbhag) ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ.
ಕುಂದಾಪುರದ ಖ್ಯಾತ ರಂಗಭೂಮಿ ಕಲಾವಿದ ಬಾಲಕೃಷ್ಣ ಯಾನೆ ಕುಳ್ಳಪ್ಪು ಅವರ ರೂಪಕಲಾ ಸಂಸ್ಥೆಯ ಮೂಲಕ ನಾಟಕ ಲೋಕಕ್ಕೆ ತೆರೆದುಕೊಂಡಿದ್ದ ಅಶೋಕ್ ಶಾನುಭೋಗ್ ಅವರು ರೂಪಕಲಾ ಸಂಸ್ಥೆಯ ಮೂರು ಮುತ್ತು ನಾಟಕದ ಮೂಲಕ ಬಹುಖ್ಯಾತಿಯನ್ನು ಪಡೆದುಕೊಂಡಿದ್ದರು.

ನಾರಾಯಣ ಶಾನುಭೋಗ್ ಹಾಗೂ ಕಸ್ತೂರಿನ ಶಾನುಭೋಗ್ ಅವರ ಮಗನಾಗಿರುವ ಅಶೋಕ್ ಶಾನುಭೋಗ್ ಮೂರು ಮುತ್ತು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಕುಂದಾಪುರ ಕನ್ನಡ ಭಾಷೆಯ ಈ ನಾಟಕ ರಾಜ್ಯ, ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಬಹು ಖ್ಯಾತಿಯನ್ನು ಪಡೆದುಕೊಂಡಿತ್ತು. ಅದ್ರಲ್ಲೂ ಅಶೋಕ್ ಶಾನುಭೋಗ್ ಅವರ ನಟನೆಯನ್ನು ಜನರು ಮೆಚ್ಚಿಕೊಂಡಿದ್ದರು.
ಇದನ್ನೂ ಓದಿ : ಅಬ್ಬಬ್ಬಾ… ಬಿಗ್ಬಾಸ್ ಮನೆಯಲ್ಲೇ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡ ಸ್ಪರ್ಧಿ
ಮೂರುಮುತ್ತು, ಪಾಪಪಾಂಡು, ಅವನಲ್ಲ ಇವನು, ರಾಮಕೃಷ್ಣ ಗೋವಿಂದ, ಅಳುವುದೋ ನಗುವುದೋ ಸೇರಿದಂತೆ ಹಲವು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಕೊಂಕಣಿ ಭಾಷೆಯ ನಾಟಕಗಳಲ್ಲಿಯೂ ಅವರು ನಟಿಸಿದ್ದಾರೆ. ಅದ್ರಲ್ಲೂ ಅಶೋಕ್ ಶಾನುಭೋಗ್ ನಟನೆಯ ತೀನ್ ರತ್ನ ನಾಟಕ ದೇಶ, ವಿದೇಶಗಳಲ್ಲಿ ಬರೋಬ್ಬರಿ 7 ಸಾವಿರಕ್ಕೂ ಅಧಿಕ ಪ್ರದರ್ಶನವನ್ನು ಕಂಡಿದೆ. ಕೋಟೇಶ್ವರದ ಸನ್‌ರೈಸ್ ಪೈಪ್ ಇಂಡಸ್ಟ್ರೀಸ್‌ನಲ್ಲಿ ಕೆಲಸ ಮಾಡಿಕೊಂಡು ನಾಟಕದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ ವಾಸುಕಿ ವೈಭವ್ : ಯಾರು ಈ ಹುಡುಗಿ..?
ನಂತರದಲ್ಲಿ ಅವರು ಸ್ವತಃ ವ್ಯವಹಾರವನ್ನು ಆರಂಭಿಸಿದ್ದರು. ಜೊತೆಗೆ ನಾಟಕದಲ್ಲಿಯೂ ಮುಂದುವರಿದಿದ್ದರು. ಅಶೋಕ್ ಶಾನುಭೋಗ್ ಅವರ ಪತ್ನಿ ಸುಮಿತಿ ಶೆಣೈ ಅವರು ಉಪನ್ಯಾಸಕಿಯಾಗಿದ್ದು, ಪತ್ನಿ ಹಾಗೂ ಪುತ್ರಿ ಸಂಯುಕ್ತ ಶ್ಯಾನುಭೋಗ್ ಅವರನ್ನು ಅಲಗಿದ್ದಾರೆ. ಮೃತರ ಅಂತ್ಯಕ್ರೀಯೆ ಶನಿವಾರ ಬೆಳಗ್ಗೆ ಕುಂದಾಪುರದಲ್ಲಿ ನಡೆಯಲಿದೆ. ಕನ್ನಡ ಖ್ಯಾತ ರಂಗಭೂಮಿ ಕಲಾವಿದನ ಅಗಲಿಕೆ ಇದೀಗ ಕಂಬನಿ ಮಿಡಿಯುತ್ತಿದ್ದಾರೆ.
ಇದನ್ನೂ ಓದಿ : 600 ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ಹಿರಿಯ ನಟಿ ಲೀಲಾವತಿ ವಿಧಿವಶ : ಸೋಲದೇವನಹಳ್ಳಿಯಲ್ಲಿ ಅಂತ್ಯಕ್ರೀಯೆ
Mooru Muttu kannada drama artist Ashok Shanbhag passes away in kundapur