ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾಕ್ಕೆ ಕಂಬ್ಯಾಕ್‌ : ಜಯ್‌ ಶಾ ಕೊಟ್ರು ಗುಡ್‌ನ್ಯೂಸ್‌

Hardik Pandya's comeback  : ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಏಕದಿನ ವಿಶ್ವಕಪ್‌ ವೇಳೆಯಲ್ಲಿ ಗಾಯಗೊಂಡಿದ್ದರು. ಸದ್ಯ ಎನ್‌ಸಿಎನಲ್ಲಿ ಚಿಕಿತ್ಸೆ, ತರಬೇತಿ ಪಡೆಯುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ಯಾವಾಗ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಡ್ತಾರೆ

Hardik Pandya’s comeback  : ಭಾರತ ಕ್ರಿಕೆಟ್‌ ತಂಡದ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಏಕದಿನ ವಿಶ್ವಕಪ್‌ ವೇಳೆಯಲ್ಲಿ ಗಾಯ ಗೊಂಡಿದ್ದರು. ಸದ್ಯ ಎನ್‌ಸಿಎನಲ್ಲಿ ಚಿಕಿತ್ಸೆ, ತರಬೇತಿ ಪಡೆಯುತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ಯಾವಾಗ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಡ್ತಾರೆ ಅಂತಾ ಕಾಯುತ್ತಿದ್ದವರಿಗೆ ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್‌ಶಾ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.

ಐಪಿಎಲ್ 2024ರ ಪಂದ್ಯಾವಳಿಗೆ ಪ್ರಾಂಚೈಸಿಗಳು ಸಜ್ಜಾಗುತ್ತಿದ್ದು, ಇಂದು ಐಪಿಎಲ್‌ ಮಿನಿ ಹರಾಜು ನಡೆಯಲಿದೆ. ಈ ನಡುವಲ್ಲೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ದ ಇಂದಿನಿಂದ ಕ್ರಿಕೆಟ್‌ ಸರಣಿ ಆರಂಭಗೊಳ್ಳಲಿದೆ. ನಂತರ ಭಾರತ ಮತ್ತು ಅಪ್ಘಾನಿಸ್ತಾನದ ವಿರುದ್ದ ಟಿ೨೦ ಪಂದ್ಯಾವಳಿ ನಡೆಯಲಿದೆ. ಈ ವೇಳೆಯಲ್ಲಿ ಹಾರ್ದಿಕ್‌ ಪಾಂಡ್ಯ ಕಂಬ್ಯಾಕ್‌ ಮಾಡುವ ಸಾಧ್ಯತೆಯಿದೆ.

Hardik Pandya's comeback to indina cricket Team Jay Shah Give Good News
Image credit to Original Source

ಐಪಿಎಲ್ 2024 ರ ಮೊದಲು ಭಾರತ ವಿರುದ್ಧಅಫ್ಘಾನಿಸ್ತಾನ ತಂಡಗಳ ನಡುವೆ ಟಿ 20 ಐ ಸರಣಿಗಾಗಿ ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್ 2024) ಮುಂಚಿತವಾಗಿ ಭಾರತ ಕ್ರಿಕೆಟ್ ತಂಡದ ತಾರೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ : BCCI WPL 2024 : ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಹೊಸ ರೂಪ : WPL ಸಮಿತಿ ರಚಿಸಿದ ಬಿಸಿಸಿಐ

ಏಕದಿನ ವಿಶ್ವಕಪ್ ವೇಳೆ ಹಾರ್ದಿಕ್ ಪಾಂಡ್ಯ ಎಡ ಪಾದದ ಅಸ್ಥಿರಜ್ಜುಗೆ ಗಾಯಗೊಂಡಿದ್ದರು. ಇದೇ ಕಾರಣದಿಂದಲೇ ಅವರು ವಿಶ್ವಕಪ್‌ ಪಂದ್ಯಾವಳಿಯಿಂದ ಅರ್ಧದಲ್ಲಿಯೇ ಹೊರ ನಡೆದಿದ್ದರು. ನಂತರ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ದದ ಸರಣಿಗೂ ಅವರು ಆಯ್ಕೆಯಾಗಲಿರಲಿಲ್ಲ. ಆದರೆ T20 ವಿಶ್ವಕಪ್ ಮತ್ತು IPL ಮೇಲೆ ಪಾಂಡ್ಯ ಗಮನಹರಿಸಿದ್ದಾರೆ ಎನ್ನಲಾಗುತ್ತಿದೆ.

2024 ರ ಜನವರಿಯಲ್ಲಿ ಭಾರತ ಮತ್ತು ಅಪ್ಘಾನಿಸ್ತಾನ ( IND vs AFG T20I) ತಂಡಗಳ ನಡುವೆ ಟಿ೨೦ ಸರಣಿ ನಡೆಯಲಿದ್ದು, ಈ ವೇಳೆಗೆ ಹಾರ್ದಿಕ್‌ ಪಾಂಡ್ಯ ಆಗಮನ ಖಚಿತ ಎನ್ನಲಾಗುತ್ತಿದೆ. ಹಾರ್ದಿಕ್‌ ಪಾಂಡ್ಯರನ್ನು ಬಹುಬೇಗನೆ ಗುಣಮುಖರನ್ನಾಗಿಸೋ ಸಲುವಾಗಿ ಎನ್‌ಸಿಎ ಹಾಗೂ ಬಿಸಿಸಿಐ ಮೇಲ್ವಿಚಾರಣೆಯನ್ನು ಮಾಡುತ್ತಿದೆ.

ಇದನ್ನೂ ಓದಿ : ಭಾರತ Vs ದಕ್ಷಿಣ ಆಫ್ರಿಕಾ T20I ಸರಣಿ : ಲುಂಗಿ ಎನ್‌ಗಿಡಿ ಔಟ್‌

NCA ನಲ್ಲಿ ಹಾರ್ದಿಕ್‌ ಪಾಂಡ್ಯ ತರಬೇತಿ ಪಡೆಯುತ್ತಿದ್ದಾರೆ. ಅವರು ಫಿಟ್‌ ಆಗಿರುವ ವೇಳೆಯಲ್ಲಿ ನಿಮಗೆ ತಿಳಿಸುತ್ತೇವೆ. ಅಫ್ಘಾನಿಸ್ತಾನ ಸರಣಿಗೂ ಮುನ್ನ ಅವರು ಫಿಟ್ ಆಗುವ ಸಾಧ್ಯತೆಯಿದೆ ಎಂದಿದ್ದಾರೆ ಶಾ. ಅಲ್ಲದೇ ಹಾರ್ದಿಕ್ ಪಾಂಡ್ಯ ಅವರ ಅಸ್ಥಿರಜ್ಜು ಹರಿದ ಮೇಲೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂಬ ಅನುಮಾನವಿತ್ತು. ಆದರೆ ಪಾಂಡ್ಯ ಚೇತರಿಸಿಕೊಂಡಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ.

Hardik Pandya's comeback to indina cricket Team Jay Shah Give Good News
Image credit to Original Source

ಕಳೆದ ಎರಡು ಅವಧಿಯಲ್ಲಿ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸಿರುವ ಹಾರ್ದಿಕ್‌ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೇ ಈ ಬಾರಿ ಮುಂಬೈ ತಂಡವನ್ನು ಪಾಂಡ್ಯ ಮುನ್ನೆಡೆಸುವ ಮಾತುಗಳು ಕೇಳಿಬರುತ್ತಿದೆ. ಆದರೆ ಹಾರ್ದಿಕ್‌ ಪಾಂಡ್ಯ ಚೇತರಿಕೆಯನ್ನು ಕಾಣುವುದು ಬಹು ಮುಖ್ಯವಾಗಿದೆ.

ಇದನ್ನೂ ಓದಿ : IPL 2024 Auction : ಐಪಿಎಲ್‌ ಆಡ್ತಾರಂತೆ ಕೆವಿನ್‌ ಪೀಟರ್ಸನ್‌ : ಹರಾಜಿಗೆ ಹೇಗೆ ಭಾಗವಹಿಸಲಿ ಎಂದ ಮಾಜಿ ಕ್ರಿಕೆಟಿಗ

ಹಾರ್ದಿಕ್‌ ಪಾಂಡ್ಯ ಅವರ ಬದಲು ಶುಭಮನ್‌ ಗಿಲ್‌ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನೆಡೆಸಲಿದ್ದಾರೆ. ಅಲ್ಲದೇ ಗುಜರಾತ್‌ ಟೈಟಾನ್ಸ್‌ ತಂಡ ಮಿನಿ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ.

Hardik Pandya’s comeback to indina cricket Team: Jay Shah Give Good News

Comments are closed.