Mouni Roy Photoshoot : ಹನಿಮೂನ್ ನಲ್ಲೂ ಹಾಟ್ ಪೋಟೋಸ್ : ಮೌನಿ ರಾಯ್ ಬಿಕನಿ ಅವತಾರಕ್ಕೆ ಅಭಿಮಾನಿಗಳ ಫಿದಾ

ಬಾಲಿವುಡ್ ನ ಹಾಟ್ ಬೆಡಗಿ, ಕೆಜಿಎಫ್ ನ ಗಲೀ ಗಲೀ ಹುಡುಗಿ ಮೌನಿ ರಾಯ್ ಸದ್ಯ ಹನಿಮೂನ್ ಸಂಭ್ರಮದಲ್ಲಿದ್ದಾರೆ. ಆದರೆ ಹನಿಮೂನ್ ಹೊತ್ತಲ್ಲೂ ನಟಿ ಮೌನಿ ರಾಯ್ ಹಾಟ್ ಪೋಟೋಶೂಟ್ ಗೆ ಪೋಸ್ ಕೊಡೋದನ್ನು ಮರೆತಿಲ್ಲ. ಹನಿಮೂನ್ ಗಾಗಿ ಕಾಶ್ಮೀರವನ್ನು ಆಯ್ಕೆಮಾಡಿಕೊಂಡಿರೋ ಮೌನಿ ರಾಯ್ (Mouni Roy Photoshoot ) , ನಡುಗಿಸೋ ಚಳಿಯಲ್ಲೂ ಬಿಕನಿಯಲ್ಲಿ ಪೋಸ್ ಕೊಡೋ ಮೂಲಕ ಅಭಿಮಾನಿಗಳ ಮೈಬಿಸಿ ಏರಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನಟಿ ಮೌನಿ ರಾಯ್ ಗೋವಾದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ನ್ನು ಮದುವೆಯಾಗಿದ್ದರು. ಸದ್ಯ ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಹನಿಮೂನ್ ಸಂಭ್ರಮದಲ್ಲಿರೋ ನಟಿ ಮೌನಿ ರಾಯ್ ಮೆಹೆಂದಿ ಕೆಂಪು ಮಾಸುವ ಮುನ್ನವೇ ಮತ್ತೆ ಹಾಟ್ ಹಾಟ್ ಪೋಸ್ ಕೊಡೋ ಮೂಲಕ ಅಭಿಮಾನಿಗಳಿಗೆ ಮತ್ತೇರಿಸಿದ್ದಾರೆ.

ನಡುಗಿಸುವ ಚಳಿಯಲ್ಲಿ ಕಪ್ಪು ಬಿಕನಿ ತೊಟ್ಟು ಪೂಲ್ ಬಳಿ ನಿಂತಿರೋ ಮೌನಿ, ಚುಂಬನಗಳು ಸ್ನೋಪ್ಲೇಕ್ ಗಳಾಗಿದ್ದರೇ, ನಾನು ನಿಮಗೆ ಹಿಮಪಾತವನ್ನು ಕಳುಹಿಸುತ್ತೇನೆ ಎಂದು ಪೋಸ್ಟ್ ಗೆ ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಮತ್ತೊಂದು ಬಿಕನಿ ಪೋಟೋ ಹಾಕಿಕೊಂಡಿರೋ ಮೌನಿ ಹೊರಗೆ ತುಂಬಾ ತಂಪಾಗಿದೆ ಎಂಬ ದ್ವಂದ್ವಾರ್ಥದ ಟ್ಯಾಗ್ ಲೈನ್ ಹಾಕಿದ್ದಾರೆ. ಇದಕ್ಕೂ ಮುನ್ನ ಅದ್ದೂರಿ ಮದುವೆಯ ಪೋಟೋ ಶೇರ್ ಮಾಡಿದ್ದ ಮೌನಿ ರಾಯ್, ಕೊನೆಗೂ ನಾನು ನನ್ನ ಪ್ರೀತಿಯನ್ನು ಪಡೆದುಕೊಂಡೆ. ಹೆತ್ತವರ, ಆಪ್ತರ ಆಶೀರ್ವಾದದೊಂದಿಗೆ ನಾವು ಒಂದಾಗಿದ್ದೇವೆ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು.

ಬಹುಕಾಲದಿಂದ ಕೇರಳ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ರನ್ನು ಪ್ರೀತಿಸುತ್ತಿದ್ದ ಮೌನಿ ರಾಯ್ ಕೊರೋನಾ ಲಾಕ್ ಡೌನ್ ವೇಳೆ ಸೂರಜ್ ಜೊತೆ ದುಬೈ ಯಲ್ಲಿ ಕಾಣಿಸಿಕೊಂಡಿದ್ದರು. ಸೂರಜ್ ರನ್ನು ಮದುವೆಯಾಗುವವರೆಗೂ ಮೌನಿ ಈ ವಿಚಾರವನ್ನು ಗುಟ್ಟಾಗಿಯೇ ಇಟ್ಟುಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಮೌನಿ ರಾಯ್ ಸದಾ ಹಾಟ್ ಹಾಟ್ ಪೋಟೋಗಳನ್ನು ಶೇರ್ ಮಾಡಿಕೊಳ್ಳೋ ಮೂಲಕ ಸುದ್ದಿಯಲ್ಲಿರುತ್ತಾರೆ.

ಇನ್ ಸ್ಟಾಗ್ರಾಂ ನಲ್ಲಿ ಮಿಲಿಯನ್ ಮೀರಿ ಫಾಲೋವರ್ಸ್ ಹೊಂದಿರೋ ಮೌನಿ ರಾಯ್ ಈಗ ಹನಿಮೂನ್ ನಲ್ಲೂ ಹಾಟ್ ಹಾಟ್ ಪೋಟೋ ಶೇರ್ ಮಾಡೋ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಬಾಲಿವುಡ್ ಕಿರುತೆರೆಯ ಮಹಾದೇವ್, ನಾಗಿನ್ ಸೀರಿಯಲ್ ಮೂಲಕ ಪ್ರಸಿದ್ಧಿಗೆ ಬಂದ ಮೌನಿರಾಯ್ ಕೆಜಿಎಫ್ ಹಿಂದಿ ವರ್ಸನ್ ನಲ್ಲಿ ಐಟಂ ಸಾಂಗ್ ಗೆ ಹೆಜ್ಜೆಹಾಕಿ ಮಿಂಚಿದ್ದರು.

ಇದನ್ನೂ ಓದಿ : ರಕ್ಷಿತ್ ಶೆಟ್ಟಿ ಮತ್ತು ರಮ್ಯಾ ಮದುವೆಯಾಗ್ತಾರಾ? ಇಲ್ಲಿದೆ ಬಿಗ್ ಅಪ್‌ಡೇಟ್

ಇದನ್ನೂ ಓದಿ : Haseequazi Photoshoot : ಪ್ಲಸ್ ಸೈಜ್ ಮಾಡೆಲ್ ಎಲ್ಲಿಲ್ಲದ ಬೇಡಿಕೆ: ಹಸೀಕ್ವಾಜೀ ಹಸಿಬಿಸಿ ಪೋಟೋ ವೈರಲ್

( Mouni Roy Photoshoot on Honeymoon)

Comments are closed.