Airtel Xtreme Premium: ಏರ್‌ಟೆಲ್ ಎಕ್ಸ್‌ಟ್ರೀಮ್ ಪ್ರೀಮಿಯಂ ಯೋಜನೆ: ಕೇವಲ 149 ರೂ.ಗೆ ಸಿಗಲಿದೆ 15 ಓಟಿಟಿ ಸೇವೆಗಳು

ಏರ್‌ಟೆಲ್ ಇಂದು “ಎಕ್ಸ್‌ಟ್ರೀಮ್ ಪ್ರೀಮಿಯಂ” (Airtel Xtreme Premium)ಎಂಬ ಹೊಸ ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಪ್ರಾರಂಭಿಸಿದೆ. ಹೊಸ ಸೇವೆಯು ಒಂದೇ ವೇದಿಕೆಯಲ್ಲಿ 15 ಭಾರತೀಯ ಮತ್ತು ಜಾಗತಿಕ ಒಟಿಟಿ (OTT) ಗಳಿಂದ ವಿಷಯವನ್ನು ನೀಡುತ್ತದೆ. ಇದು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮತ್ತು ಟಿವಿ ಸೇರಿದಂತೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಉಳಿದ ಓಟಿಟಿಗಳಿಗೆ ಹೋಲಿಸಿದರೆ, ಇದು ತುಂಬಾ ಅಗ್ಗವಾಗಿದೆ. ಅಷ್ಟೇ ಅಲ್ಲದೇ, ಒಂದೇ ಸೂರಿನಡಿ 15 ಭಾರತೀಯ ಹಾಗೂ ಜಾಗತಿಕ ಓಟಿಟಿಗಳು ಇದ್ದು, ಬಳಕೆದಾರರಿಗೆ ಇದೊಂದು ಹೊಸ ಅನುಭವ ನೀಡಲಿದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ತಿಂಗಳಿಗೆ 149 ರೂ.ಗಳಾಗಿದ್ದು, ಇದು ಏರ್‌ಟೆಲ್ ಗ್ರಾಹಕರಿಗೆ ಪ್ರತ್ಯೇಕವಾಗಿ ಲಭ್ಯವಿದೆ. 12 ತಿಂಗಳಿಗೆ 1,499 ರೂಗಳಲ್ಲಿ ವಾರ್ಷಿಕ ಚಂದಾದಾರಿಕೆಯೂ ಲಭ್ಯವಿದೆ. ಇದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಸೆಟ್-ಟಾಪ್ ಬಾಕ್ಸ್‌ನಲ್ಲಿಯೂ ಲಭ್ಯವಿದೆ. ಹೊಸ ಸೇವೆಯು ಮೂಲಭೂತವಾಗಿ ಪ್ರಸ್ತುತ ಲಭ್ಯವಿರುವ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲಾಟ್‌ಫಾರ್ಮ್‌ಗೆ ಅಪ್‌ಗ್ರೇಡ್ ಆಗಿದೆ.

ಹೊಸ ಸೇವೆಯನ್ನು ಪ್ರವೇಶಿಸಲು ಬಳಕೆದಾರರು ಆಂಡ್ರಾಯ್ಡ್ (Android) ಮತ್ತು ಐಓಎಸ್(iOS) ನಲ್ಲಿ (Airtel Xtreme) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಮತ್ತು ಪ್ರಸ್ತುತ ಅಪ್ಲಿಕೇಶನ್ ಆಟೊಮ್ಯಾಟಿಕ್ ಆಗಿ ಎಕ್ಸ್‌ಸ್ಟ್ರೀಮ್ ಪ್ರೀಮಿಯಂಗೆ ಅಪ್‌ಗ್ರೇಡ್ ಆಗುತ್ತದೆ.

ಇದರಲ್ಲಿ, ಚಂದಾದಾರರು ಸೋನಿ ಲಿವ್, ಇರೋಸ್ ನೌ, ಮನೋರಮಾ ಮ್ಯಾಕ್ಸ್, ಶೇಮಾರು, ಲಿಯಾನ್ಸ್ ಗೇಟ್ ಪ್ಲೇ,ಅಲ್ಟ್ರಾ, ಹಂಗಾಮ ಪ್ಲೇ, ಕ್ಲಿಕ್, ಡಿವೋ ಟಿವಿ, ನಮ್ಮ ಫ್ಲಿಕ್ಸ್ ಟಿವಿ, ಡಾಲಿ ವುಡ್ ನಿಂದ ಲೈವ್ ಚಾನಲ್‌ಗಳ ಜೊತೆಗೆ 10,500 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.
ಆದ್ದರಿಂದ ಈ ಸೇವೆಗಳಿಗೆ ವೈಯಕ್ತಿಕ ಸಬ್ಸ್ಕ್ರಿಪ್ಶನ್ ಪಡೆಯುವ ಬದಲು, ನೀವು ಮಾಸಿಕ ಅಥವಾ ವಾರ್ಷಿಕ ಚಂದಾದಾರಿಕೆಯನ್ನು ಪಡೆಯಬಹುದು. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ನೆಟ್‌ಫ್ಲಿಕ್ಸ್ (Netflix) ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ (Disney+Hotstar)ನಂತಹ ಕೆಲವು ಜನಪ್ರಿಯ ಪ್ಲಾಟ್ ಫಾರ್ಮ್ಸ್ ಕಳೆದುಕೊಂಡಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಪ್ರಮುಖ ಸವಾಲುಗಳನ್ನು ಪರಿಹರಿಸುವ ಮೂಲಕ ಭಾರತದಲ್ಲಿ ಓಟಿಟಿ ವಿಷಯದಲ್ಲಿ ಹೊಸ ಅನುಭವ ಜನರಿಗೆ ನೀಡಲಿದೆ.

ಇದನ್ನೂ ಓದಿ:Jio Airtel Vi 2022 Best Plans: ವರ್ಷಕ್ಕೆ ಒಂದೇ ಸಲ ರಿಚಾರ್ಜ್ ಮಾಡಿ ಹಣ ಉಳಿಸಿ; Jio, Airtel, Vi ಬೆಸ್ಟ್ ಪ್ಲಾನ್‌ಗಳ ವಿವರ ಇಲ್ಲಿದೆ

(Airtel Xtreme Premium 15 OTT platforms at Rs 149)

Comments are closed.